Gajakesari Yoga: ಗುರು-ಚಂದ್ರರಿಂದ ಗಜಕೇಸರಿ ರಾಜಯೋಗ, 3 ರಾಶಿಯವರ ಜೀವನದಲ್ಲಿ ಭಾಗ್ಯೋದಯ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಜೂನ್ 14ರಿಂದ ಜೂನ್ 16ರವರೆಗೆ ಚಂದ್ರನು ಕನ್ಯಾ ರಾಶಿಯಲ್ಲಿ ಇರುತ್ತಾನೆ. ಈ ವೇಳೆ ದೇವಗುರು ಬೃಹಸ್ಪತಿಯ ಪಂಚಮ ದೃಷ್ಟಿಯೂ ಚಂದ್ರನ ಮೇಲೆ ಬೀಳುವುದರಿಂದ ಶುಭಕರ ಗಜಕೇಸರಿ ಯೋಗ ನೀರ್ಮಾಣವಾಗಲಿದೆ.
ಚಂದ್ರನೊಂದಿಗೆ ಗುರುವಿನ ಸಂಯೋಗದಿಂದ ಅತ್ಯಂತ ಮಂಗಳಕರ ಯೋಗಗಳಲ್ಲಿ ಒಂದಾದ ಗಜಕೇಸರಿ ಯೋಗ ನಿರ್ಮಾಣವಾಗಿದೆ. ಇದರ ಫಲವಾಗಿ ಮೂರು ರಾಶಿಯವರ ಜೀವನದಲ್ಲಿ ಗೋಲ್ಡನ್ ಡೇಸ್ ಆರಂಭವಾಗಿದೆ. ಆ ಅದೃಷ್ಟದ ರಾಶಿಗಳೆಂದರೆ...
ಮೇಷ ರಾಶಿಯ ಜನರಿಗೆ ಗಜಕೇಸರಿ ಯೋಗವು ಮಾನಸಿಕ ಒತ್ತಡದಿಂದ ಮುಕ್ತಿಯನ್ನು ನೀಡಲಿದೆ. ಬೇರೆಡೆ ಸಿಲುಕಿರುವ ಹಣ ಕೈಸೇರಲಿದೆ. ಕೌಟುಂಬಿಕ ಸಂಬಂಧಗಳಲ್ಲಿ ಮೂಡಿದ್ದ ಭಿನ್ನಾಭಿಪ್ರಾಯಗಳು ಕೊನೆಗೊಳ್ಳಲಿವೆ.
ಗಜಕೇಸರಿ ಯೋಗವು ಕನ್ಯಾ ರಾಶಿಯವರ ಜೀವನದಲ್ಲಿ ಸುವರ್ಣ ದಿನಗಳನ್ನು ತಂದಿದ್ದು, ಈ ವೇಳೆ ನಿಮಗೆ ದೀರ್ಘ ಸಮಯದಿಂದ ಬಾಕಿ ಉಳಿದಿರುವ ಕೆಲಸಗಳು ಪೂರ್ಣಗೊಳ್ಳಲಿವೆ. ಹಣಕಾಸಿನ ಮೂಲಗಳು ಹೆಚ್ಚಾಗಲಿದೆ. ಸಂಗಾತಿಯೊಂದಿಗಿನ ಭಿನ್ನಾಭಿಪ್ರಾಯಗಳು ಬಗೆಹರಿಯಲಿವೆ.
ಚಂದ್ರ ಗುರು ಯುತಿಯಿಂದ ನಿರ್ಮಾಣವಾಗಿರುವ ಗಜಕೇಸರಿ ಯೋಗವು ತುಲಾ ರಾಶಿಯ ಜನರಿಗೆ ವೃತ್ತಿಯಲ್ಲಿ ಯಶಸ್ಸು, ವ್ಯಾಪಾರ ವೃದ್ಧಿಯಾಗಲಿದೆ. ದೀರ್ಘ ಕಾಲದಿಂದ ನಿಮ್ಮನ್ನು ಕಾಡುತ್ತಿದ್ದ ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ದೊರೆಯಲಿದೆ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.