White Hair ನೈಸರ್ಗಿಕವಾಗಿ ಗಾಢ ಕಪ್ಪಾಗಿಸಲು 2 ರೂಪಾಯಿಯ ಈ ವಸ್ತು ಸಾಕು!

Mon, 18 Nov 2024-11:15 am,

ಬಿಳಿ ಕೂದಲಿಗೆ ಮಾರುಕಟ್ಟೆಯಲ್ಲಿ ದೊರೆಯುವ ಹೇರ್ ಡೈಗಳ ಬಳಕೆಯಿಂದ ತಾತ್ಕಾಲಿಕವಾಗಿ ಕೂದಲು ಕಪ್ಪಾಗುತ್ತದೆ. ಆದರೂ, ಕೆಲವು ದಿನಗಳ ಬಳಿಕ ಮತ್ತೆ ಬೂದು ಬಣ್ಣಕ್ಕೆ ಮರಳುತ್ತದೆ. 

ಬಿಳಿ ಕೂದಲಿಗೆ ನೈಸರ್ಗಿಕ ಪರಿಹಾರಗಳನ್ನು ಅನುಸರಿಸಿದರೆ ಶಾಶ್ವತವಾದ ಗಾಢ ಕಪ್ಪು ಕೂದಲನ್ನು ಹೊಂದಲು ಸಹಕಾರಿಯಾಗುತ್ತದೆ. 

ವಿಶೇಷವೆಂದರೆ ಕೇವಲ 2 ರೂಪಾಯಿಗೆ ಲಭ್ಯವಿರುವ 'ಕಾಫಿ' ಪುಡಿಯಿಂದ ಬಿಳಿ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಬಹುದು. 

ಕಾಫಿ ಪುಡಿ ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದ್ದು ಇದು ಕೂದಲಿನ ಕಿರುಚೀಲಗಳನ್ನು ಪೋಷಿಸುತ್ತದೆ. ಕೂದಲಿನ ಹಾನಿಯನ್ನು ರಕ್ಷಿಸಿ ದೀರ್ಘಕಾಲದವರೆಗೆ ಕಪ್ಪಾಗಿಡಲು ಸಹಕಾರಿ ಆಗಿದೆ. ಇದು ಕೂದಲಿನ ಬೆಳವಣಿಗೆಗೂ ಸಹಕಾರಿ ಆಗಿದೆ. 

1 ಸ್ಪೂನ್ ಕಾಫಿಪುಡಿಯನ್ನು ನೀರಿನಲ್ಲಿ ಹಾಕಿ ಕುದಿಸಿ, ಕೆಮಿಕಲ್ ಮುಕ್ತ ಗೋರಂಟಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಈ ಹೇರ್ ಪ್ಯಾಕ್ ಅನ್ನು ಕೂದಲಿನ ಬುಡದಿಂದ ತುದಿಯವರೆಗೆ ಹಚ್ಚಿ 2-3 ಗಂಟೆಗಳ ನಂತರ ಹೇರ್ ವಾಶ್ ಮಾಡಿದರೆ ಕೂದಲು ನೈಸರ್ಗಿಕವಾಗಿ ಗಾಢ ಕಪ್ಪಾಗುತ್ತದೆ. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link