ʼಬಾಲಿವುಡ್ ಪಾರ್ಟಿಗಳು..ʼ ಕಂಡು ಕೇಳರಿಯದ ಬಿಟೌನ್ ಕರಾಳ ಸತ್ಯ ಬಿಚ್ಚಿಟ್ಟ ಕಂಗನಾ ರಣಾವತ್!!‌

Sun, 18 Aug 2024-3:30 pm,

 ರಾಜ್ ಶಾಮನಿಯೊಂದಿಗಿನ ಸಂಭಾಷಣೆಯಲ್ಲಿ, ಕಂಗನಾ ರನೌತ್ ಒಮ್ಮೆ ಬಾಲಿವುಡ್ ಉದ್ಯಮವನ್ನು ಗುರಿಯಾಗಿಸಿಕೊಂಡು ಮಾತನಾಡಿದ್ದಾರೆ... ನಟಿಗೆ ಬಾಲಿವುಡ್‌ನಲ್ಲಿ ಯಾರಾದರೂ ಸ್ನೇಹಿತರಿದ್ದಾರೆಯೇ ಎಂದು ಕೇಳಿದಾಗ? ಇದಕ್ಕೆ ಉತ್ತರಿಸಿದ ಕಂಗನಾ, 'ನಾನು ಬಾಲಿವುಡ್ ಜನರ ಸ್ನೇಹಿತೆಯಾಗಲು ಸಾಧ್ಯವಿಲ್ಲ. ಬಾಲಿವುಡ್ ಮಂದಿ ತಾವೇ ಫುಲ್ ಆಗಿದ್ದಾರೆ" ಎಂದಿದ್ದಾರೆ..   

 ಕಂಗನಾ ರಣಾವತ್ ಬಾಲಿವುಡ್ ಜನರನ್ನು ಈಡಿಯಟ್ಸ್ ಎಂದು ಕರೆದಿದ್ದಾರೆ. ಸೆಲೆಬ್ರಿಟಿಗಳ ದಿನಚರಿಯನ್ನು ಮತ್ತಷ್ಟು ಬಹಿರಂಗಪಡಿಸಿದ ನಟಿ, 'ಅವರು ಶೂಟಿಂಗ್ ಇಲ್ಲದಿದ್ದರೆ, ಅವರು ಬೆಳಿಗ್ಗೆ ಎದ್ದೇಳುತ್ತಾರೆ, ವ್ಯಾಯಾಮ ಮಾಡುತ್ತಾರೆ.. ಮಧ್ಯಾಹ್ನ ಮಲಗುತ್ತಾರೆ, ನಂತರ ಮತ್ತೆ ಎದ್ದು ನಂತರ ಜಿಮ್‌ಗೆ ಹೋಗುವುದು ಅವರ ದಿನಚರಿಯಾಗಿದೆ.."  

"ಆ ಜನರು ಮಿಡತೆಗಳಂತೆ. ಮನಸ್ಸಿನಿಂದ ಸಂಪೂರ್ಣವಾಗಿ ಏನೂ ಮಾಡುವುದಿಲ್ಲ.. ಅಂತಹ ಜನರನ್ನು ನಿಮ್ಮ ಸ್ನೇಹಿತರನ್ನಾಗಿ ಮಾಡಿಕೊಳ್ಳುವುದು ಹೇಗೆ? ಎಲ್ಲಿ ಏನಾಗುತ್ತಿದೆ ಎಂಬುದೇ ಅವರಿಗೆ ತಿಳಿದಿಲ್ಲ" ಎಂದು ಹೇಳಿದ್ದಾರೆ..   

ಅಲ್ಲದೇ ಬಾಲಿವುಡ್ ಸೆಲೆಬ್ರಿಟಿಗಳು ತಮ್ಮ ನಡುವೆ ಏನು ಮಾತನಾಡಿಕೊಳ್ಳುತ್ತಾರೆ ಎಂಬುದನ್ನು ಕಂಗನಾ ರಣಾವತ್ ಬಹಿರಂಗಪಡಿಸಿದ್ದಾರೆ. "ಆ ವ್ಯಕ್ತಿಗಳ ನಡುವೆ ಯಾವುದೇ ಉಪಯುಕ್ತ ಮಾತುಕತೆ.. ಅವರು ಭೇಟಿಯಾದಾಗಲೆಲ್ಲಾ ಅವರು ಡ್ರಿಂಕ್ಸ್‌ ಮಾಡ್ತಾರೆ.. ಬಟ್ಟೆ ಬಗ್ಗೆ ಮಾತನಾಡುತ್ತಾರೆ. ಇದು ಹೀನಾಯ ಸಂಗತಿ... ಬಾಲಿವುಡ್ ಪಾರ್ಟಿಗಳು ನನಗೆ ಆಘಾತವಿದ್ದಂತೆ" ಎಂದು ಪಾರ್ಟಿಗಳ ಬಗ್ಗೆ ನಟಿ ಮಾತನಾಡಿದ್ದಾರೆ..  

ಕಂಗನಾ ರಣಾವತ್ ಅವರ ಕೆಲಸದ ಬಗ್ಗೆ ಮಾತನಾಡುವುದಾದರೇ, ಸುದೀರ್ಘ ಕಾಯುವಿಕೆಯ ನಂತರ, ನಟಿಯ ಚಿತ್ರ ಎಮರ್ಜೆನ್ಸಿ 6 ಸೆಪ್ಟೆಂಬರ್ 2024 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ.   

ಈ ಚಿತ್ರದಲ್ಲಿ ನಟಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪಾತ್ರದಲ್ಲಿ ನಟಿಸಲಿದ್ದಾರೆ. ಕಂಗನಾ ಅವರೇ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಕಂಗನಾ ಅಲ್ಲದೆ, ಅನುಪಮಾ ಖೇರ್, ಸತೀಶ್ ಕೌಶಿಕ್, ಶ್ರೇಯಸ್ ತಲ್ಪಾಡೆ ಮತ್ತು ಮಹಿಮಾ ಚೌಧರಿ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link