“ಆಕೆ ಜೊತೆ ಡೇಟಿಂಗ್…!”- ಕಡೆಗೂ ಗರ್ಲ್ ಫ್ರೆಂಡ್, ಮದುವೆ ಬಗ್ಗೆ ನಿಜ ಬಹಿರಂಗಪಡಿಸಿದ ಹಾಸ್ಯನಟ ಚಿಕ್ಕಣ್ಣ
ಇಂದು ಕನ್ನಡ ಸಿನಿಮಾ ಕ್ಷೇತ್ರದಲ್ಲಿ ಕಾಮಿಡಿಯ ಮೂಲಕ ಮನರಂಜಿಸುತ್ತಿರೋದು, ಸಾಧುಕೋಕಿಲ, ಚಿಕ್ಕಣ್ಣ, ಮುಂತಾದ ನಟರು. ಅಂದಹಾಗೆ ನಾವಿಂದು ಈ ವರದಿಯಲ್ಲಿ ಹೇಳ ಹೊರಟಿರೋದು ಚಿಕ್ಕಣ್ಣ ಪ್ರೇಮ್ ಕಹಾನಿ ಬಗ್ಗೆ. ಹೊಸ ಸಿನಿಮಾ ಉಪಾಧ್ಯಕ್ಷ ಇನ್ನೇನು ತೆರೆಗೆ ಬರಲು ಸಜ್ಜಾಗಿದೆ. ಈ ಹೊತ್ತಲ್ಲೇ ತಮ್ಮ ಲವ್ ಸ್ಟೋರಿ ಬಗ್ಗೆ ಚಿಕ್ಕಣ್ಣ ಮಾತನಾಡಿದ್ದಾರೆ.
ಉಪಾಧ್ಯಕ್ಷ ಸಿನಿಮಾದಲ್ಲಿ ಮೊದಲ ಬಾರಿಗೆ ನಾಯಕ ನಟನಾಗಿ ಬಣ್ಣ ಹಚ್ಚಿರುವ ಚಿಕ್ಕಣ್ಣ, ಗಮನ ಸೆಳೆಯುತ್ತಿದ್ದಾರೆ. ಅನಿಲ್ ಕುಮಾರ್ ನಿರ್ದೇಶನದ, ಉಮಾಪತಿ ಫಿಲಂಸ್ ಮತ್ತು ಡಿಎನ್ ಫಿಲ್ಮ್ಸ್ ನಿರ್ಮಾಣದ ಈ ಸಿನಿಮಾ ಜನವರಿ 2024ರಲ್ಲಿ ರಿಲೀಸ್ ಆಗಲಿದೆ. ಮಲೈಕಾ ವಸುಪಾಲ್ ಎಂಬವರು ಸಹ ಮೊದಲ ಬಾರಿಗೆ ನಾಯಕಿಯಾಗಿ ತೆರೆಯ ಮೇಲೆ ಕಾಣಿಸಲಿದ್ದಾರೆ.
ಇನ್ನು ಹಾಸ್ಯನಟ ಚಿಕ್ಕಣ್ಣ ಯೂಟ್ಯೂಬ್ ಚಾನೆಲ್’ಗೆ ನೀಡಿದ ಸಂದರ್ಶನದಲ್ಲಿ ತಮ್ಮ ಲವ್ ಸ್ಟೋರಿ ಹೇಗಿತ್ತು ಎಂಬುದನ್ನು ತಮಾಷೆಯಾಗಿ ಹೇಳಿ ಬಿದ್ದು ಬಿದ್ದು ನಕ್ಕಿದ್ದಾರೆ.
ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ ನಡೆಸಿದ ಸಂದರ್ಶನದಲ್ಲಿ, ಮದುವೆ ಯಾವಾಗ ಎಂಬ ಪ್ರಶ್ನೆಯನ್ನು ಕೇಳಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಚಿಕ್ಕಣ್ಣ, “ನನಗೆ ಈಗ ಏನಿದ್ರೂ ನನ್ನ ಪ್ಲಾನ್’ನಲ್ಲಿ ಇರೋದು ಉಪಾಧ್ಯಕ್ಷ ಸಿನಿಮಾ ಅಷ್ಟೇ. ಸಿನಿಮಾ ರಿಲೀಸ್ ಆಗಿ, ಜನರ ಮನಸ್ಸಲ್ಲಿ ಒಳ್ಳೆ ಹೆಸರು ಪಡೆದುಕೊಂಡ್ರೆ, ನನ್ಗೆ ಮದುವೆಯಾಗಿ ಮಕ್ಕಳಾದಷ್ಟೇ ಖುಷಿ” ಎಂದಿದ್ದಾರೆ.
ಮಾತು ಮುಂದುವರೆಸಿದ ಚಿಕ್ಕಣ್ಣ, “ಯೂಟ್ಯೂಬ್’ಲ್ಲಿ ಕೂಡ ಆಗಾಗ ನನ್ನ ಫೋಟೋ ನೋಡ್ತಿರ್ತೇನೆ. ನೋಡ್ಕೊಂಡು ಖುಷಿ ಪಡ್ತೇನೆ. ಅಯ್ಯೋ ಇವ್ಳ ಜೊತೆ ಒಂದಿನಾನು ಮಾತಾಡಿಲ್ವಲ್ಲಾ… ಅಟ್ಲೀಸ್ಟ್ ಆಕೆ ಜೊತೆ ಡೇಟಿಂಗ್ ಹೋಗಿ ಈ ರೀತಿ ಹಾಕಿದ್ರೂ ಖುಷಿಪಡ್ತಿದ್ದೆ. ಇದೆಲ್ಲಾ ಗಾಸಿಪ್ ಸರ್” ಎಂದು ನಕ್ಕಿದ್ದಾರೆ.