ಈ ಪೋಟೋದಲ್ಲಿರುವ ಮಗು ಯಾರೆಂದು ಗುರುತಿಸಬಲ್ಲಿರಾ? ಕನ್ನಡದ ಕಂದ ಪುನೀತ್‌ ರಾಜ್‌ಕುಮಾರ್ ಅವರ ಸಿನಿಮಾದಲ್ಲಿ ನಟಿಸಿದ ನಟಿ ಈಕೆ!!

Mon, 19 Aug 2024-1:20 pm,

ಇತ್ತೀಚೆಗೆ ಸೋಷಿಯಲ್‌ ಮಿಡಿಯಾದಲ್ಲಿ ನಟ-ನಟಿಯರ ಬಾಲ್ಯದ ಪೋಟೋಗಳು ಸಖತ್‌ ಸದ್ದು ಮಾಡುತ್ತಿವೆ..   

ಅದೇ ರೀತಿ ಇದೀಗ ಕನ್ನಡ, ತೆಲುಗು ಸಿನಿಮಾಗಳಲ್ಲಿ ನಟಿಸಿ ಅದರಲ್ಲೂ ಸ್ಯಾಂಡಲ್‌ವುಡ್‌ ದೊಡ್ಮನೆ ಕುವರನೊಂದಿಗೆ ನಟಿಸಿದ ನಟಿಯ ಬಗ್ಗೆ ಇಂದು ನಾವು ತಿಳಿದುಕೊಳ್ಳೋಣ..  

ಸದ್ಯ ಮೇಲಿನ ಪೋಟೋದಲ್ಲಿ ಕಾಣಿಸಿಕೊಂಡಿರುವ ನಟಿ ಬೇರಾರೂ ಅಲ್ಲ.. ಕನ್ನಡದ ಯುವರತ್ನ ಸಿನಿಮಾದ ನಾಯಕಿ ಸಯೇಶಾ..  

ಸಯೇಶಾ ಅವರ ಬಾಲ್ಯದ ಪೋಟೋವೊಂದು ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ..  

ಇನ್ನು ನಟಿ ಸಯೇಶಾ ಅವರು ಕನ್ನಡದಲ್ಲಿ ಬೆರಳೆಣಿಕೆ ಸಿನಿಮಾ ಮಾಡಿದ್ದರೂ ಕನ್ನಡಿಗರಿಗೆ ಅಚ್ಚುಮೆಚ್ಚು.. ಇವರು ಟಾಲಿವುಡ್‌ನ ಟಾಪ್‌ ನಟಿಯರಲ್ಲಿ ಒಬ್ಬರಾಗಿದ್ದಾರೆ..  

ನಟಿ ತಮ್ಮ ಮೊದಲ ಸಿನಿಮಾದಿಂದಲೇ ಅಪಾರ ಅಭಿಮಾನಿಗಳನ್ನು ಗಳಿಸಿದ್ದು, ಸೋಷಿಯಲ್‌ ಮಿಡಿಯಾದಲ್ಲಿಯೂ ಅತೀ ಹೆಚ್ಚು ಫಾಲೋವರ್ಸ್‌ ಹೊಂದಿದ್ದಾರೆ..   

 ಸಾಲು ಸಾಲು ಆಫರ್ ಗಳು ಬಂದ ಮೇಲೆ ತನಗೆ ಸ್ಟಾರ್ ಡಮ್ ಸಿಗುತ್ತದೆ ಎಂದುಕೊಂಡ ಈ ಚೆಲುವೆ.. ಕೆರಿಯರ್ ಸುಸ್ಥಿತಿಯಲ್ಲಿರುವಾಗಲೇ ಸ್ಟಾರ್ ಹೀರೋನ್ನು ಪ್ರೀತಿಸಿ ಮದುವೆಯಾದರು.   

ಆ ನಂತರ ಕೆಲ ವರ್ಷಗಳ ಕಾಲ ಸಿನಿಮಾದಿಂದ ದೂರ ಉಳಿದಿದ್ದ ಈ ತಾರೆ ಮದುವೆಯ ನಂತರವೂ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ್ದರು.   

ಇಷ್ಟೇ ಅಲ್ಲ ಸಯೇಶಾ ಅವರ ಪತಿ ಕೂಡ ತೆಲುಗಿನ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ನಾಯಕನಾಗಿ ಮಾತ್ರವಲ್ಲದೆ ಖಳನಟನಾಗಿಯೂ ಕಾಣಿಸಿಕೊಂಡಿದ್ದಾರೆ.. ಆ ನಟ ಬೇರಾರೂ ಅಲ್ಲ ಕಾಲಿವುಡ್ ಸ್ಟಾರ್ ಹೀರೋ ಆರ್ಯ..ಈಗ ಅವರಿಗೆ ಒಂದು ಮಗುವಿದೆ.    

ಸಯೇಶಾ ಇತ್ತೀಚೆಗಷ್ಟೇ ಸಿನಿಮಾಗಳಿಗೆ ರೀ ಎಂಟ್ರಿ ಕೊಡಲಿದ್ದಾರೆ. ಅಲ್ಲದೆ, ನಟಿ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link