ಸಿನಿಪ್ರಿಯರಿಗೆ ಭರಪೂರ ಮನರಂಜನೆ.. ಈ ತಿಂಗಳು ಒಟಿಟಿಯಲ್ಲಿ ರಿಲೀಸ್‌ ಆದ ಕನ್ನಡ ಸಿನಿಮಾಗಳು ಇವು

Mon, 10 Jun 2024-2:41 pm,

ಒಂದು ಸರಳ ಪ್ರೇಮ ಕಥೆ ಫೆಬ್ರವರಿ 8, 2024 ರಂದು ತೆರೆಗೆ ಬಂದಿತ್ತು. ಸಂಗೀತ ನಿರ್ದೇಶಕನಾಗಬೇಕೆಂಬ ನಾಯಕನ ಕನಸು... ಸಂಗೀತ ಬಯಸುವ ಮನಕೆ ಹೊಂದುವಂತ ಹುಡುಗಿಯನ್ನ ಬಯಸೋ ಹುಡುಗನ ಹೃದಯ... ಇದರ ಸುತ್ತ ಸುತ್ತುವ ಕಥೆಯೇ 'ಒಂದು ಸರಳ ಪ್ರೇಮ ಕಥೆ' ಇದೀಗ ಒಟಿಟಿಯಲ್ಲಿ ರಿಲೀಸ್‌ ಆಗಿ ಒಳ್ಳೆ ರೆಸ್ಪಾನ್ಸ್‌ ಪಡೆಯುತ್ತಿದೆ.  

ಚೈತ್ರಾ ಆಚಾರ್‌ ಹಾಗೂ ದೀಕ್ಷಿತ್‌ ಶೆಟ್ಟಿ  ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಬ್ಲಿಂಕ್‌ ಸಿನಿಮಾ ಥಿಯೇಟರ್‌ಗಳಲ್ಲಿ 50 ದಿನ ಪೂರೈಸಿ, ಈಗ ಒಟಿಟಿಗೆ ಲಗ್ಗೆ ಇಟ್ಟಿದೆ. ಹಲವಾರು ಸ್ಟಾರ್‌ ನಟರು ಕೂಡ ಸಿನಿಮಾ ನೋಡಿ ತಮ್ಮ ಮಚ್ಚುಗೆ ವ್ಯಕ್ತಪಡಿಸಿದ್ದರು.  

ಹಾಸ್ಯ ಭರಿತ, ಥ್ರಿಲ್ಲರ್ ಸಿನಿಮಾ ಅವತಾರ ಪುರುಷ 2. ಸುನಿ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಶರಣ್ ಮತ್ತು ಆಶಿಕಾ ರಂಗನಾಥ್ ನಟಿಸಿದ್ದಾರೆ. ಸಾಯಿ ಕುಮಾರ್ , ಭವ್ಯ , ಬಾಲಾಜಿ ಮನೋಹರ್ ಮತ್ತು ಶ್ರೀನಗರ ಕಿಟ್ಟಿ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.   

ಶಾಖಾಹಾರಿ ಒಂದು ಮರ್ಡರ್ ಮಿಸ್ಟರಿ ಚಲನಚಿತ್ರವಾಗಿದೆ. ರಂಗಾಯಣ ರಘು , ಗೋಪಾಲಕೃಷ್ಣ ದೇಶಪಾಂಡೆ, ವಿನಯ್ ಯುಜೆ ಮತ್ತು ನಿಧಿ ಹೆಗ್ಡೆ ಮುಖ್ಯ ಭೂಮಿಕೆಯಲ್ಲಿದ್ದಾರೆ. ಇತ್ತೀಚೆಗಷ್ಟೆ ಸಿನಿಮಾ ಒಟಿಟಿಯಲ್ಲಿ ರಿಲೀಸ್‌ ಆಗಿದ್ದು ಒಳ್ಳೆ ರೆಸ್ಪಾನ್ಸ್‌ ಪಡೆದಿದೆ.  

ಶ್ರೀಧರ್ ಷಣ್ಮುಖ ಆಕ್ಷನ್‌ ಕಟ್‌ ಹೇಳಿರುವ ಧರಣಿ ಮಂಡಲ ಮಧ್ಯದೊಳಗೆ ಸಿನಿಮಾ ಕ್ರೈಂ ಥ್ರಿಲ್ಲರ್ ಚಿತ್ರವಾಗಿದೆ. 2022ರ ನವೆಂಬರ್ 2ರಂದು ತೆರೆಕಂಡಿದ್ದ ಈ ಸಿನಿಮಾ ಪ್ರೇಕ್ಷಕರ ಮನ ಗೆದ್ದಿತ್ತು. ಯಾವಾಗ ಸಿನಿಮಾ ಓಟಿಟಿಗೆ ಬರುತ್ತೋ ಅಂತ ಪ್ರೆಕ್ಷಕರು ಕಾಯುತ್ತಿದ್ದರು. ಇದೀಗ ಸಿನಿಮಾ ಒಟಿಟಿಯಲ್ಲಿ ರಿಲೀಸ್‌ ಆಗಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link