`ಕಾಂತಾರ`ದ ರಾಜ ಮೊದಲು ಸೆಕ್ಯೂರಿಟಿ ಗಾರ್ಡ್! ನಟ ವಿನಯ್ ಬಿದ್ದಪ್ಪ ಲೈಫ್ ಜರ್ನಿಯೇ ರೋಚಕ
ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿದ ಕಾಂತಾರ ಸಿನಿಮಾ ಸದ್ಯ ಆಸ್ಕರ್ ಅಂಗಳದಲ್ಲಿದೆ.
ಕಾಂತಾರ ಸಿನಿಮಾದಲ್ಲಿ ರಾಜನ ಪಾತ್ರ ಮಾಡಿದ ನಟ ವಿನಯ್ ಬಿದ್ದಪ್ಪ ಲೈಫ್ ಜರ್ನಿಯೇ ರೋಚಕವಾಗಿದೆ.
ಕನ್ನಡದ ಪ್ರಮುಖ ಸೈಡ್ ಆ್ಯಕ್ಟರ್‌ಗಳಲ್ಲಿ ವಿನಯ್ ಬಿದ್ದಪ್ಪ ಸಹ ಒಬ್ಬರು. ಕಾಂತಾರ ಮಾತ್ರವಲ್ಲ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರದಲ್ಲಿಯೂ ವಿನಯ್ ಬಿದ್ದಪ್ಪ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ನಟ ವಿನಯ್ ಬಿದ್ದಪ್ಪ ಡಿಫೆನ್ಸ್, ಆರ್ಮಿ ಹೀಗೆ ಅನೇಕ ಫೀಲ್ಡ್‌ಗಳಲ್ಲಿ ವಿನಯ್ ಬಿದ್ದಪ್ಪ ಕೆಲಸ ಮಾಡಿದ್ದಾರೆ.
ಜೀವನದ ಕಷ್ಟದ ದಿನಗಳಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿಯೂ ಕೆಲಸ ಮಾಡಿದ್ದರಂತೆ. ಆಗ ಅವರು ಸಂಬಳ 3,300 ರೂಪಾಯಿ ಸಂಬಳ ಪಡೆಯುತ್ತಿದ್ದರಂತೆ.
ಆ ದಿನಗಳನ್ನು ನೆನೆದರೆ ನನಗೆ ನಿಜಕ್ಕೂ ಖುಷಿ ನೀಡುತ್ತೆ ಎನ್ನುತ್ತಾರೆ ವಿನಯ್ ಬಿದ್ದಪ್ಪ. ಲಕ್ಕಿ ಸಿನಿಮಾ ಶೂಟಿಂಗ್ ವೇಳೆ ಡೈರೆಕ್ಟರ್ ಸೂರಿ ಭೇಟಿಯಾದ ವಿನಯ್ ಬಿದ್ದಪ್ಪ ಅವರಿಗೆ ಯಶ್ ಪರಿಚಯವಾಯಿತು.
ಆ ಬಳಿಕ ವಿನಯ್ ಬಿದ್ದಪ್ಪ ಸಿನಿ ಜರ್ನಿ ಶುರುವಾಗಿದ್ದು, ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ ಸಿನಿಮಾದಿಂದ. ಆ ಬಳಿಕ ಅವರು ಯಶ್ ಜೊತೆ ಮಾಸ್ಟರ್ ಪೀಸ್ ಚಿತ್ರದಲ್ಲಿಯೂ ನಟಿಸಿದರು.
ನಂತರ ಪ್ರಶಾಂತ್ ನೀಲ್ ಅವರ ಕೆಜಿಎಫ್ ಚಿತ್ರದಲ್ಲಿ ಕಾಣಿಸಿಕೊಂಡರು. ಆ ಬಳಿಕ ಕಾಂತಾರದಲ್ಲಿ ರಾಜನ ಪಾತ್ರದಲ್ಲಿ ಎಲ್ಲೆ ಮನಸೆಳೆದರು.