ಸ್ಕೂಲ್ ಫೀಸ್ ಹಣಕ್ಕಾಗಿ ಪರದಾಡಿದ್ದ ಈ ಬಾಲಕಿ.. ಇಂದು 800 ಕೋಟಿ ಅರಮನೆಯಲ್ಲಿ ವಾಸಿಸುವ ಸ್ಟಾರ್ ನಟಿ! ಬಾಲಿವುಡ್ ಆಳುತ್ತಿರುವ ಆ ನಂ.1 ನಾಯಕಿ ಯಾರು ಗೊತ್ತೇ?
ಸ್ಟಾರ್ ನಟರ ಮಕ್ಕಳು ಐಷಾರಾಮಿ ಜೀವನ ನಡೆಸುತ್ತಾರೆ ಎಂದು ಸಾಮಾನ್ಯವಾಗಿ ಎಲ್ಲರೂ ಭಾವಿಸುತ್ತಾರೆ. ಕೆಲವೊಮ್ಮೆ ಸ್ಟಾರ್ ನಟ, ನಟಿಯರು ದುರಾದೃಷ್ಟದಿಂದ ಹಣವನ್ನು ಕಳೆದುಕೊಂಡಾಗ ಬದುಕು ಬವಣೆಯಾಗುತ್ತದೆ.
ಕರೀನಾ ಕಪೂರ್ ಬಾಲಿವುಡ್ ರಾಜಮನೆತನದಂತಿರುವ ಕಪೂರ್ ಕುಟುಂಬದ ಪುತ್ರಿ. ಲೆಜೆಂಡರಿ ಸ್ಟಾರ್ ನಟ ರಾಜ್ ಕಪೂರ್ ಮೊಮ್ಮಗಳು. ನಟ ರಣಧೀರ್ ಕಪೂರ್ ಮತ್ತು ಬಬಿತಾ ಕಿರಿಯ ಪುತ್ರಿ ಕರೀನಾ.
ಕರೀನಾ 1980 ರಲ್ಲಿ ಜನಿಸಿದರು. ಅಕ್ಕ ಕರಿಷ್ಮಾ ಕಪೂರ್ ಬಾಲಿವುಡ್ ಪ್ರಖ್ಯಾತ ನಟಿ. ಕಪಿಲ್ ಶರ್ಮಾ ಶೋ ಕರೀನಾ ತಂದೆ ರಣಧೀರ್ ಕಪೂರ್ 80 ರ ದಶಕದಲ್ಲಿ ಕುಟುಂಬ ಅನುಭವಿಸಿದ ಕಷ್ಟದ ಬಗ್ಗೆ ಮಾತನಾಡಿದ್ದರು.
ರಣಧೀರ್ ಕಪೂರ್ ಇಬ್ಬರು ಹೆಣ್ಣು ಮಕ್ಕಳ ಸ್ಕೂಲ್ ಫೀ ಕಟ್ಟಲೂ ಸಹ ಹಣವರಿದೇ ಒದ್ದಾಡಿದ್ದರಂತೆ ಎಂದು ಹೇಳಿದ್ದರು. 2011 ರಲ್ಲಿ ಕರೀನಾ ಸಹ ಇದೇ ಮಾತನ್ನು ಬಹಿರಂಗಪಡಿಸಿದ್ದರು.
ಕರೀನಾ ಕಪೂರ್ 2000 ರಲ್ಲಿ ಬಾಲಿವುಡ್ ಗೆ ಪದಾರ್ಪಣೆ ಮಾಡಿದರು. ಕೆಲವೇ ಕೆಲವು ಸಿನಿಮಾಗಳ ಮೂಲಕ ಟಾಪ್ ನಟಿಯರ ಸಾಲಿಗೆ ಸೇರಿದರು. ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಒಂದು ಕಾಲದ ನಂಬರ್ 1 ಬಾಲಿವುಡ್ ನಟಿ ಕರೀನಾ ಕಪೂರ್ ಅವರಿಗೆ ಉದ್ಯಮದಲ್ಲಿ ಇಂದಿಗೂ ಸಾಕಷ್ಟು ಗೌರವವಿದೆ. ಇತ್ತೀಚೆಗೆ ಪ್ರತಿ ಚಿತ್ರಕ್ಕೆ ಕರೀನಾ ಕಪೂರ್ 8-18 ಕೋಟಿ ಸಂಭಾವನೆ ಪಡೆಯುತ್ತಾರೆ.
ಮದುವೆ ಮಕ್ಕಳಾದ ಮೇಲೂ ಕರೀನಾ ಕಪೂರ್ ಸ್ಟಾರ್ ಡಮ್ ಮಾತ್ರ ಕಡಿಮೆಯಾಗಿಲ್ಲ. ಕರೀನಾ ಕಪೂರ್ ಒಟ್ಟು ಆಸ್ತಿ 480 ಕೋಟಿ ಆಗಿದೆ.
ನಟ ಸೈಫ್ ಅಲಿ ಖಾನ್ ಅವರನ್ನು ಕರೀನಾ ಮದುವೆಯಾಗಿದ್ದಾರೆ. ಸೈಫ್ ಅಲಿ ಖಾನ್ ಪತ್ನಿಯಾದ ಬಳಿಕ ಕರೀನಾ ಕಪೂರ್ ʻಪಟೌಡಿʼಯ ಬೇಗಂ ಎಂಬ ಬಿರುದು ಪಡೆದಿದ್ದಾರೆ.
ಸೈಫ್ ಅಲಿ ಖಾನ್ ರಾಜಮನೆತನಕ್ಕೆ ಸೇರದವರಾದ ಕಾರಣ ಬಹು ವಿಸ್ತಾರವಾದ ಪಟೌಡಿ ಅರಮನೆಯನ್ನು ಹೊಂದಿದ್ದಾರೆ. ನಟಿ ಕರೀನಾ ಕಪೂರ್ ಈ ಅರಮನೆಯ ಬೇಗಂ ಆಗಿದ್ದಾರೆ.
800 ಕೋಟಿ ರೂ ಬೆಲೆಯ ಪಟೌಡಿ ಅರಮನೆಯಲ್ಲಿ ಸೈಫ್ ಅಲಿ ಖಾನ್ ಮತ್ತು ಇಬ್ಬರು ಪುತ್ರ ಜೊತೆ ಕರೀನಾ ವಾಸವಿದ್ದಾರೆ.