ಶಾಲೆ ಫೀ ಕಟ್ಟಲು ಹಣವಿರದೇ ಪರದಾಡಿದ್ದ ಈ ಬಾಲಕಿ.. ಇಂದು 800 ಕೋಟಿ ಅರಮನೆಯಲ್ಲಿ ವಾಸಿಸುವ ಸ್ಟಾರ್‌ ನಟಿ! ಬಾಲಿವುಡ್‌ ಆಳುತ್ತಿರುವ ಬೆಡಗಿ ಯಾರು ಗೊತ್ತೇ?

Tue, 28 May 2024-8:42 am,

ಕರೀನಾ ಕಪೂರ್ ಬಾಲಿವುಡ್ ರಾಜಮನೆತನದಂತಿರುವ ಕಪೂರ್ ಕುಟುಂಬದ ಮಗಳು. ಮಹಾನ್ ನಟ ರಾಜ್ ಕಪೂರ್ ಅವರ ಮೊಮ್ಮಗಳು. ನಟ ರಣಧೀರ್ ಕಪೂರ್ ಮತ್ತು ಬಬಿತಾ ಅವರ ಪುತ್ರಿ. 

ಕರೀನಾ 1980 ರಲ್ಲಿ ಜನಿಸಿದರು. ಇವರ ಅಕ್ಕ ಬಾಲಿವುಡ್‌ ಪ್ರಖ್ಯಾತ ನಟಿ ಕರಿಷ್ಮಾ ಕಪೂರ್. ಒಮ್ಮೆ, ರಣಧೀರ್ ದಿ ಕಪಿಲ್ ಶರ್ಮಾ ಶೋನಲ್ಲಿ ಕಾಣಿಸಿಕೊಂಡಾಗ 80 ರ ದಶಕದಲ್ಲಿ ಕುಟುಂಬ‌ ಅನುಭವಿಸಿದ ಕಷ್ಟದ ಬಗ್ಗೆ ಬಹಿರಂಗಪಡಿಸಿದರು. 

ತನ್ನ ಇಬ್ಬರು ಹೆಣ್ಣು ಮಕ್ಕಳ ಸ್ಕೂಲ್‌ ಫೀ ಕಟ್ಟಲೂ ನನ್ನ ಬಳಿ ಹಣವಿರಲಿಲ್ಲ ಎಂದು ಹಿರಿಯ ನಟ ಹೇಳಿದ್ದರು. 2011 ರಲ್ಲಿ ಕರೀನಾ ಸಹ ಇದೇ ಮಾತನ್ನು ಹೇಳಿದ್ದರು. ಒಂದು ಕಾಲದಲ್ಲಿ ಕುಟುಂಬ ಬಡತನದ ಅಂಚಿನಲ್ಲಿತ್ತು ಎಂದಿದ್ದರು.

2000 ರಲ್ಲಿ ಕರೀನಾ ಕಪೂರ್‌ ಬಾಲಿವುಡ್‌ ಗೆ ಎಂಟ್ರಿ ಕೊಟ್ಟರು. ಕೆಲವೇ ಕೆಲವು ಸಿನಿಮಾಗಳ ಮೂಲಕ ಬಾಲಿವುಡ್‌ನ ಟಾಪ್‌ ನಟಿಯಾದರು. ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯಾಗಿದ್ದರು. 

ಇಂದಿಗೂ ಕರೀನಾ ಅವರಿಗೆ ಉದ್ಯಮದಲ್ಲಿ ಸಾಕಷ್ಟು ಗೌರವವಿದೆ. ಇಂದು ಪ್ರತಿ ಚಿತ್ರಕ್ಕೆ ಕರೀನಾ ಕಪೂರ್‌  8-18 ಕೋಟಿ ಸಂಭಾವನೆ ಪಡೆಯುವಷ್ಟು ಸ್ಟಾರ್‌ ಡಮ್‌ ಹೊಂದಿದ್ದಾರೆ. ಕರೀನಾ ಕಪೂರ್‌ ಒಟ್ಟು ಆಸ್ತಿ 480 ಕೋಟಿ.

ನಟ ಸೈಫ್ ಅಲಿ ಖಾನ್ ಅವರನ್ನು ಕರೀನಾ ವಿವಾಹವಾದರು. ಅವರು ʻಪಟೌಡಿʼಯ ಬೇಗಂ ಎಂಬ ಬಿರುದು ಪಡೆದಿದ್ದಾರೆ. 

ಬಹು ವಿಸ್ತಾರವಾದ ಪಟೌಡಿ ಅರಮನೆಯಲ್ಲಿ ಕರೀನಾ ಕಪೂರ್‌ ವಾಸಿಸುತ್ತಾರೆ. 800 ಕೋಟಿ ರೂ ಬೆಲೆಯ ಈ ಅರಮನೆಯಲ್ಲಿ ಸೈಫ್ ಅಲಿ ಖಾನ್ ಮತ್ತು ಇಬ್ಬರು ಪುತ್ರ ಜೊತೆ ಕರೀನಾ ವಾಸವಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link