Karnataka Election 2023: ಶಿವಮೊಗ್ಗದಲ್ಲಿ ಮುಗಿಲುಮುಟ್ಟಿದ ‘ನಮೋ’ ಘೋಷ!
ಶಿವಮೊಗ್ಗ ಗ್ರಾಮಾಂತರ ಆಯನೂರಿನಲ್ಲಿ ಬಿಜೆಪಿ ಬೃಹತ್ ಚುನಾವಣಾ ಸಮಾವೇಶದಲ್ಲಿ ಪ್ರಧಾನಿ ಮೋದಿ ಭಾಗವಹಿಸಿ ಮಾತನಾಡಿದರು. ಈ ವೇಳೆ ಪ್ರಧಾನಿ ಮೋದಿಯವರಿಗೆ ಆಂಜನೇಯನ ಮೂರ್ತಿ ನೀಡಿ ಸನ್ಮಾನಿಸಲಾಯಿತು.
‘ಜೈ ಬಜರಂಗ ಬಲಿ’ & ‘ಸಿಗಂಧೂರು ಚೌಡೇಶ್ವರಿ’ಯ ಪಾದಕ್ಕೆ ನನ್ನ ನಮನ, ಭೋಲೋ ಭಾರತ್ ಮಾತಾಕೀ ಜೈ ಎಂದು ಭಾಷಣ ಆರಂಭಿಸಿದ ಪ್ರಧಾನಿ ಮೋದಿಯವರು ಇದೇ ವೇಳೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮತ್ತು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತನ್ನಿ ಎಂದ ಪ್ರಧಾನಿ ಮೋದಿ ಸಾರ್ವಜನಿಕರಿಗೆ ಮನವಿ ಮಾಡಿದರು. ಇದೇ ವೇಳೆ ಅವರು ಒಗ್ಗಟಿನ ಮಂತ್ರವನ್ನು ಜಪಿಸಿದರು.
ಪ್ರಧಾನಿ ಮೋದಿಯವರು ಬಿಜೆಪಿಯ ಹಾವೇರಿ ಗ್ರಾಮೀಣ ಮಂಡಲದ ಕಾರ್ಯಕರ್ತ ಹನುಮಂತಪ್ಪ ದಾಸರ್ ಅವರ ಕುಶಲೋಪರಿ ವಿಚಾರಿಸಿದ ಅಪೂರ್ವ ಕ್ಷಣ.
ಶಿವಮೊಗ್ಗದಲ್ಲಿ ಪ್ರಧಾನಿ ಮೋದಿಯವರ ಭಾಷಣ ಕೇಳಲು ಸಾವಿರಾರು ಬಿಜೆಪಿ ಕಾರ್ಯಕರ್ತರು ಮತ್ತು ಅಭಿಮಾನಿಗಳು ಸೇರಿದ್ದರು. ಎಲ್ಲಲ್ಲೂ ಬಿಜೆಪಿ ಬಾವುಗಳು ಕಂಗೊಳಿಸಿದ್ದು ಕಂಡುಬಂತು.