ವಿದ್ಯಾರ್ಥಿಗಳಿಗೆ ಗುಡ್‌ ನ್ಯೂಸ್‌.. ಈ ತಿಂಗಳಲ್ಲಿ ಎಲ್ಲಾ ಶಾಲಾ - ಕಾಲೇಜುಗಳಿಗೆ 5 ದಿನ ರಜೆ ಘೋಷಿಸಿದ ರಾಜ್ಯ ಸರ್ಕಾರ! ಕಾರಣವೇನು?

Thu, 19 Dec 2024-10:13 am,

School Holiday announcement: ವಿದ್ಯಾರ್ಥಿಗಳಿಗೆ ಸಂತಸದ ಸುದ್ದಿ. ಈ ತಿಂಗಳಲ್ಲಿ ರಾಜ್ಯದ ಶಾಲೆಗಳಿಗೆ 5 ದಿನ ಸಾರ್ವತ್ರಿಕ ರಜೆ ಘೋಷಣೆ ಮಾಡಲಾಗಿದೆ. ಇದಕ್ಕೆ ಕಾರಣ ಏನೆಂದು ತಿಳಿಯೋಣ...

ರಾಜ್ಯ ಸರ್ಕಾರ ಹೊರಡಿಸಿರುವ ಸುತ್ತೋಲೆ ಅನ್ವಯ ನೆಗೋಷಿಯೇಬಲ್ ಇನ್‌ಸ್ಟ್ರುಮೆಂಟ್ಸ್ ಆಕ್ಟ್ 1881 ಅಡಿಯಲ್ಲಿ ಕೆಳಗಿನ ಈ ದಿನಗಳಂದು ಸಾರ್ವತ್ರಿಕ ರಜೆ ಘೋಷಿಸಲಾಗಿದೆ.

ರಾಜ್ಯ ಸರ್ಕಾರ 2025 ರಲ್ಲಿ ವಿದ್ಯಾರ್ಥಿಗಳಿಗೆ ಸಾಮಾನ್ಯ ರಜಾದಿನಗಳು ಮತ್ತು ನಿರ್ಬಂಧಿತ ರಜಾದಿನಗಳು ಎರಡನ್ನೂ ವಿವರಿಸುವ ಕ್ಯಾಲೆಂಡರ್ ಬಿಡುಗಡೆ ಮಾಡಿದೆ. 

ದೇಶದ ಅನೇಕ ಪ್ರಮುಖ ಹಬ್ಬಗಳು ಮತ್ತು ರಾಷ್ಟ್ರೀಯ ಆಚರಣೆಗಳನ್ನು ಈ ಕ್ಯಾಲೆಂಡರ್ ಒಳಗೊಂಡಿರುತ್ತದೆ.

ಜನವರಿ 14 ಮಕರ ಸಂಕ್ರಾಂತಿ, ಫೆಬ್ರವರಿ 26 ಮಹಾ ಶಿವರಾತ್ರಿ, ಮಾರ್ಚ್‌ 31 ರಂಜಾನ್‌, ಏಪ್ರಿಲ್‌ 10 ಮಹಾವೀರ ಜಯಂತಿ, ಏಪ್ರಿಲ್‌ 14 ಅಂಬೇಡ್ಕರ್‌ ಜಯಂತಿ, ಏಪ್ರಿಲ್‌ 18 ಗುಡ್‌ ಫ್ರೈಡೆ, ಏಪ್ರಿಲ್‌ 30 ಬಸವ ಜಯಂತಿ ದಿನದಂದು ಸಾರ್ವತ್ರಿಕ ರಜೆ ಘೋಷಿಸಲಾಗಿದೆ.

ಮೇ 01 ಕಾರ್ಮಿಕ ದಿನಾಚರಣೆ, ಜೂನ್‌ 07 ಬಕ್ರೀದ್, ಆಗಸ್ಟ್‌ 15 ಸ್ವಾತಂತ್ರ್ಯ ದಿನಾಚರಣೆ, ಆಗಸ್ಟ್‌ 27 ಗಣೇಶ ಚತುರ್ಥಿ, ಸೆಪ್ಟೆಂಬರ್‌ 05 ಈದ್‌ ಮಿಲಾದ್‌ ದಿನದಂದು ಸಾರ್ವತ್ರಿಕ ರಜೆ ಘೋಷಿಸಲಾಗಿದೆ.

ಅಕ್ಟೋಬರ್‌ 01 ದಸರಾ, ಅಕ್ಟೋಬರ್‌ 02 ಗಾಂಧಿ ಜಯಂತಿ, ಅಕ್ಟೋಬರ್‌ 07 ವಾಲ್ಮೀಕಿ ಜಯಂತಿ, ಅಕ್ಟೋಬರ್‌ 20 ನರಕ ಚತುರ್ದಶಿ, ಅಕ್ಟೋಬರ್‌ 22 ಬಲಿಪಾಡ್ಯಮಿ ಸೇರಿ ಈ ತಿಂಗಳಲ್ಲಿ ಒಟ್ಟು 5 ದಿನ ಸಾರ್ವತ್ರಿಕ ರಜೆ ಘೋಷಿಸಲಾಗಿದೆ. 

ನವೆಂಬರ್‌ 01 ಕನ್ನಡ ರಾಜ್ಯೋತ್ಸವ, ಡಿಸೆಂಬರ್‌ 25 ಕ್ರಿಸ್‌ಮಸ್‌ ದಿನ ಸಾರ್ವತ್ರಿಕ ರಜೆ ಘೋಷಿಸಲಾಗಿದೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link