Karthik Sangeetha: ಸಂಗೀತಾ ಜತೆ ಫ್ರೆಂಡ್‌ಶಿಪ್‌ ಮುಂದುವರಿಸುತ್ತಾರಾ ಕಾರ್ತಿಕ್? ಬಿಗ್​ ಬಾಸ್​ ವಿನ್ನರ್​‌ ನಿರ್ಧಾರ ಇದು..

Tue, 30 Jan 2024-12:21 pm,

ಬಿಗ್​ ಬಾಸ್​ ಕನ್ನಡ ಸೀಸನ್​ 10 ನಲ್ಲಿ ಸಂಗೀತಾ ಶೃಂಗೇರಿ ಮತ್ತು ಕಾರ್ತಿಕ್​ ಮಹೇಶ್​ ಸ್ನೇಹದ ವಿಷಯ ಅತಿ ಹೆಚ್ಚು ಚರ್ಚೆಗೆ ಗ್ರಾಸವಾಗಿತ್ತು. 

ಕಾರ್ತಿಕ್‌ ಹಾಗೂ ಸಂಗೀತಾ ಅವರ ಸ್ನೇಹವನ್ನು ಬಿಗ್‌ ಬಾಸ್‌ ವೀಕ್ಷಕರು ಸಹ ಮೆಚ್ಚಿಕೊಂಡಿದ್ದರು. ಇಬ್ಬರೂ ಒಟ್ಟಿಗೆ ಇರಬೇಕೆಂದು ಅಭಿಮಾನಿಗಳು ಬಯಸಿದ್ದರು. ಆದರೆ ಬಿಗ್‌ ಬಾಸ್‌ ಕೊನೆ ಕೊನೆಗೆ ಈ ಸ್ನೇಹ ಮುರಿದುಬಿತ್ತು. 

ಕಾರ್ತಿಕ್‌ ಹಲವು ಬಾರಿ ಈ ಸ್ನೇಹವನ್ನು ಮುಂದುವರಿಸಲು ಪ್ರಯತ್ನಿಸಿದರು. ಆದರೆ ಸಂಗೀತಾ ಶೃಂಗೇರಿ ಅವರು ಇದಕ್ಕೆ ಮನಸ್ಸು ಮಾಡಿದಂತೆ ಕಾಣಲಿಲ್ಲ. 

ಬಿಗ್‌ ಬಾಸ್‌ ಮುಗಿದಿದೆ. ಕಾರ್ತಿಕ್​ ಅವರು ವಿನ್ನರ್​ ಆಗಿದ್ದಾರೆ. ಮನೆಯಿಂದ ಹೊರಬಂದ ಸ್ಪರ್ಧಿಗಳು ಈ ಸ್ನೇಹವನ್ನು ಮುಂದುವರೆಸುವರಾ ಎಂಬ ಪ್ರಶ್ನೆ ಹಲವರನ್ನು ಕಾಡುತ್ತಿದೆ. 

ಕನ್ನಡದ ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಕಾರ್ತಿಕ್‌ ಈ ಬಗ್ಗೆ ಮಾತನಾಡಿದ್ದಾರೆ. 

ನಾನು ಬಿಗ್​ ಬಾಸ್​ ಮನೆಯಲ್ಲಿ ಇದ್ದಾಗಲೇ ಈ ಬಗ್ಗೆ ಹೇಳಿದ್ದೆ. ಸ್ನೇಹಕ್ಕಾಗಿ ನಾನು ಸೋಲೋಕೆ ಸಿದ್ಧ ಎಂದು ಲೆಟರ್​ ಬರೆದು ಸಂಗೀತಾ ಅವರಿಗೆ ಹೇಳಿದ್ದೆ ಎಂದು ಹೇಳಿದರು. 

ಸ್ನೇಹವನ್ನು ಉಪಯೋಗಿಸಿಕೊಳ್ಳುವ ಉದ್ದೇಶ ನನಗಿಲ್ಲ. ಮುಖದಲ್ಲಿ ಒಂದು ನಗು, ಒಂದಷ್ಟು ಒಳ್ಳೆಯ ಮಾತು ಸಾಕು ಎಂದಿದ್ದಾರೆ.

ಬಿಗ್‌ ಬಾಸ್‌ ಮುಗಿಯಲು ಒಂದು ವಾರ ಮಾತ್ರ ಇತ್ತು. ಆದರೆ ನೆಕ್ಸ್ಟ್‌ ಡೇ ಅತಿ ಚಿಕ್ಕ ವಿಚಾರಕ್ಕೆ ಜಗಳ ನಡೆಯಿತು. ಹಾಗಾಗಿ ಅದು ಹಂಗೆ ಇದ್ದರೇನೇ ಒಳ್ಳೆಯದು ಅನಿಸುತ್ತೆ ಎಂದು ಕಾರ್ತಿಕ್‌ ಹೇಳಿದ್ದಾರೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link