Kaustubha Mani: ಬಾಲಿಯಲ್ಲಿ ಹನಿಮೂನ್‌ ಎಂಜಾಯ್‌ ಮಾಡುತ್ತಿರುವ ʻನನ್ನರಸಿ ರಾಧೆʼ ಸೀರಿಯಲ್‌ ಸುಂದರಿ!!

Fri, 10 May 2024-3:35 pm,

ಕಿರುತೆರೆ ನಟಿ ಕೌಸ್ತುಭ ಮಣಿ ʻನನ್ನರಸಿ ರಾಧೆʼ ಧಾರವಾಹಿಯ ಮೂಲಕ ಕನ್ನಡಿಗರಿಗೆ ಪರಿಚಯವಾದವರು, ತಮ್ಮ ಮದುವೆಯ ನಂತದ ಹನಿಮೂನ್‌ಗಾಗಿ ಬಾಲಿಗೆ ಹಾರಿದ್ದಾರೆ.

ನಟಿ ಕೌಸ್ತುಭ ಮಣಿ ಹಾಗೂ ಆಕೆಯ ಪತಿ ಸಿದ್ದಾಂತ್ ಸತೀಶ್ ಇಬ್ಬರು ಬಾಲಿಯಲ್ಲಿ ಸಖತ್‌ ಎಂಜಾಯ್‌ ಮಾಡುತ್ತಾ, ಈ ಜೋಡಿ ಕ್ಯೂಟ್‌ ಫೋಟೋಶೂಟ್‌ ಮಾಡಿಸಿದ್ದಾರೆ.  

ಕೌಸ್ತುಭ ಮಣಿ ಮತ್ತು ಸಿದ್ದಾಂತ್ ಸತೀಶ್ ಇಬ್ಬರು ತೆಗೆಸಿಕೊಂಡಿರುವ ಫೋಟೋಗಳನ್ನು ಸೋಶಿಯಲ್‌ ಮಿಡಿಯಾದಲ್ಲಿ ಶೇರ್‌ ಮಾಡಿದ್ದಾರೆ. ಹಾಗೆಯೇ ಈ ಫೋಟೋಸ್‌ ವೈರಲ್‌ ಆಗಿವೆ.

ಕನ್ನಡತಿ ಕೌಸ್ತುಭ ಮಣಿ ಮತ್ತು ಸಿದ್ದಾಂತ್ ಸತೀಶ್ ಕೆಲವು ತಿಂಗಳ ಹಿಂದೆ ಬೆಂಗಳೂರಿನಲ್ಲಿ ನಿಶ್ಚಿತಾರ್ಥ ಮಾಡಿಕೊಂಡ ನಂತರ, ಆ ಫೋಟೋಗಳನ್ನು ಅಭಿಮಾನಿಗಳ ಜೊತೆಗೆ ಹಂಚಿಕೊಳ್ಳುವ ಮೂಲಕ ತಾವು ಮದುವೆಯಾಗಲಿರುವ ವಿಷಯವನ್ನು ರಿವೀಲ್‌ ಮಾಡಿದ್ದರು.  

ನಟಿ ಕೌಸ್ತುಭ ಮಣಿ ಹಾಗೂ ಸಿದ್ದಾಂತ್ ಸತೀಶ್  ಪ್ರಿ ವೆಡ್ಡಿಂಗ್ ಫೋಟೋಶೂಟ್ ಕೂಡ ಮಾಡಿಸಿದ್ದು, ಈ ಫೋಟೋಸ್‌ ಕೂಡ ಶೇರ್‌ ಮಾಡಿಕೊಂಡ ನಂತರ ಸೋಶಿಯಲ್‌ ಮಿಡಯಾದಲ್ಲಿ ಸಖತ್‌ ಸದ್ದು ಮಾಡಿತ್ತು.  

ಕೌಸ್ತುಭ ಮಣಿ ಹಾಗೂ ಸಿದ್ದಾಂತ್ ಸತೀಶ್ ಕಳೆದ ಏಪ್ರಿಲ್‌ ಕೊನೆಯಲ್ಲಿ  ಅಯ್ಯಂಗಾರ್ ಸಂಪ್ರದಾಯದಲ್ಲಿ ದಾಂಪತ್ಯಕ್ಕೆ ಹೆಜ್ಜೆಹಾಕಿದ್ದಾರೆ. ಈ ಮದುವೆ ಖಾಸಗಿಯಾಗಿ ನಡೆದಿದ್ದು,ಚಿತ್ರರಂಗದ ಕೆಲವರು ಭಾಗಿಯಾಗಿದ್ದರು.  

ಕೌಸ್ತುಭ ಮಣಿ ವಿದೇಶದಲ್ಲಿ ಸಾಫ್ಟ್‌ವೇರ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಮುಂದೆ ಈ ನಟಿಯೂ ಕೂಡ ಫಾರೆನ್‌ಗೆ ಹಾರಿ ಅಲ್ಲಿಯೇ ನೆಲೆಸಬಹುದು ಎನ್ನಲಾಗಿದೆ

ZEENEWS TRENDING STORIES

By continuing to use the site, you agree to the use of cookies. You can find out more by Tapping this link