ಈ ಎಲೆಯನ್ನು ಮನೆಯ ಬಾಗಿಲು ಮತ್ತು ಕಿಟಕಿ ಬಳಿ ಇಟ್ಟರೆ ಸಾಕು.. ಸೊಳ್ಳೆ, ನೊಣ, ಜಿರಳೆ, ಹಲ್ಲಿ ಎಲ್ಲವೂ ವಾಸನೆಗೇ ಓಡಿ ಹೋಗುತ್ತವೆ !
ಸಂಜೆಯಾದರೇ ಸಾಕು ಸೊಳ್ಳೆ, ಕೀಟಗಳ ಕಾಟ ಜಾಸ್ತಿ. ಸೊಳ್ಳೆಗಳಿಂದ ನಮ್ಮನ್ನು ನಾವು ಸಂಪೂರ್ಣವಾಗಿ ರಕ್ಷಿಸಿಕೊಳ್ಳಲು ಹಲವು ಪ್ರಯತ್ನಗಳನ್ನು ಮಾಡುತ್ತವೆ. ಆದರೂ ಸಾಧ್ಯವಾಗುವುದಿಲ್ಲ.
ಸೊಳ್ಳೆ ನಿವಾರಕ ದ್ರವಗಳನ್ನು ಬಳಸುವುದರಿಂದ ನಮ್ಮ ಆರೋಗ್ಯದ ಮೇಲೆಯೂ ಅನೇಕ ಅಡ್ಡ ಪರಿಣಾಮಗಳಿವೆ. ಉಸಿರಾಟದ ತೊಂದರೆ, ಕಣ್ಣು ಉರಿ ಹೀಗೆ ಅನೇಕ ಸಮಸ್ಯೆಗಳು ತಲೆದೋರಬಹುದು. ಆದ್ದರಿಂದ ನೈಸರ್ಗಿಕವಾಗಿ ಕ್ರಿಮಿ ಕೀಟಗಳನ್ನು ಓಡಿಸುವುದು ಉಪಯುಕ್ತವಾಗಿದೆ.
ತುಳಸಿ ಗಿಡ ಪವಿತ್ರ ಸಸ್ಯವೆಂದು ಪೂಜಿಸಲಾಗುತ್ತದೆ. ತುಳಸಿ ಗಿಡವನ್ನು ಮನೆಯ ಬಳಿ ಬೆಳೆಸಿದರೆ ಸೊಳ್ಳೆಗಳು ಬರುವುದಿಲ್ಲ ಜೊತೆಗೆ ಹಾವು ಮತ್ತು ಕಪ್ಪೆಗಳು ಸಹ ದೂರ ಹೋಗುತ್ತವೆ.
ಪುದೀನಾ ಎಲೆಗಳನ್ನು ಕಿವುಚಿ ಕಿಟಕಿ ಮತ್ತು ಬಾಗಿಲಿನ ಹತ್ತಿರ ಇಡುವುದರಿಂದ ಸೊಳ್ಳೆಗಳು ಮತ್ತು ಕೀಟಗಳು ಬರುವುದಿಲ್ಲ. ಪುದೀನಾ ರಸ ಗೋಡೆ ಮೇಲೆ ಸಿಂಪಡಿಸಿದರೆ ಹಲ್ಲಿಗಳು ಸಹ ಮನೆಯಿಂದ ಹೊರ ಹೋಗುತ್ತವೆ.
ಚೆಂಡು ಹೂವಿನ ಗಿಡ ಮನೆಯಲ್ಲಿದ್ದರೆ ಸೊಳ್ಳೆಗಳು ಬರುವುದಿಲ್ಲ. ಚೆಂಡು ಹೂವಿನ ಎಲೆಯನ್ನು ಕಿವುಚಿ ಮನೆಯ ಬಾಗಿಲು ಮತ್ತು ಕಿಟಕಿಯ ಬಳಿ ಇಟ್ಟರೆ ನೊಣ, ಜಿರಳೆ, ಹಲ್ಲಿ ಸಹ ಇದರ ವಾಸನೆಯಿಂದಲೇ ಓಡಿ ಹೋಗುತ್ತವೆ.
ಲೆಮನ್ ಗ್ರಾಸ್ ಗಿಡದ ಎಲೆ ನಿಂಬೆಯಂತೆ ವಾಸನೆ ಹೊಂದಿರುತ್ತವೆ. ಈ ಗಿಡದ ವಾಸನೆಯಿಂದ ಕೀಟಗಳು ದೂರ ಹೋಗುತ್ತವೆ. ಮನೆಯ ಬಳಿ ಲೆಮನ್ ಗ್ರಾಸ್ ನೆಟ್ಟರೆ ಕೀಟನಾಶಕವಾಗಿ ಕೆಲಸ ಮಾಡುತ್ತದೆ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.