ಈ ವಸ್ತುಗಳನ್ನು ದಿಂಬಿನ ಕೆಳಗಿಟ್ಟು ಮಲಗಿದ್ರೆ ಉತ್ತಮ ನಿದ್ರೆ ಜೊತೆಗೆ ಬೇಗನೆ ಶ್ರೀಮಂತರಾಗ್ತೀರಾ...!
ಜ್ಯೋತಿಷ್ಯ ಶಾಸ್ತ್ರದಂತೆ ವಾಸ್ತು ಶಾಸ್ತ್ರಕ್ಕೂ ಕೂಡ ಬಹಳ ಮಹತ್ವವಿದೆ.
ವಾಸ್ತುವಿನಲ್ಲಿ ಹಣಕಾಸಿನ ಸಮಸ್ಯೆಗೂ ಪರಿಹಾರವನ್ನು ನೀಡಲಾಗಿದೆ. ಇದಕ್ಕಾಗಿ ಹೆಚ್ಚೇನು ಮಾಡುವ ಅಗತ್ಯವಿಲ್ಲ ನೀವು ಮಲಗುವ ದಿಂಬಿನ ಕೆಳಗೆ ಕೆಲವು ವಸ್ತುಗಳನ್ನು ಇಟ್ಟು ಮಲಗಿದರೆ ಅಷ್ಟೇ ಸಾಕು.
ವಾಸ್ತು ಶಾಸ್ತ್ರaaದ ಪ್ರಕಾರ, ದಿಂಬಿನ ಕೆಳಗೆ ತುಳಸಿ ದಳಗಳನ್ನು ಇತ್ತು ಮಲಗುವುದರಿಂದ ಒಳ್ಳೆಯ ನಿದ್ರೆ ಬರುತ್ತದೆ. ಇದರಿಂದ ಉತ್ತಮ ಆರೋಗ್ಯ ಅನುಭವಿಸಬಹುದು. ಜೊತೆಗೆ ಸಂಪತ್ತು ಕೂಡ ವೃದ್ಧಿಯಾಗುತ್ತದೆ.
ಮನೆಯಲ್ಲಿ ಹಣಕಾಸಿನ ಸಮಸ್ಯೆ ಇದ್ದಲ್ಲಿ ದಿಂಬಿನ ಕೆಳಗೆ ಎರಡು ಲವಂಗವನ್ನಿಟ್ಟು ಮಲಗಿ. ಇದರಿಂದ ದುಷ್ಟ ಶಕ್ತಿ ನಿವಾರಣೆಯಾಗಿ ಮನೆಯಲ್ಲಿ ಹಣದ ಹರಿವು ಹೆಚ್ಚಾಗುತ್ತದೆ.
ಹಿಂದೂ ಸಂಪ್ರದಾಯದಲ್ಲಿ ಅರಿಶಿನ ಸಮೃದ್ಧಿಯ ಸಂಕೇತ.ಚಿಟಿಕೆ ಅರಿಶಿನವನ್ನು ಕಾಗದದಲ್ಲಿ ಕಟ್ಟಿ ಮಲಗುವಾಗ ದಿಂಬಿನ ಕೆಳಗೆ ಇತ್ತು ಮಲಗುವುದರಿಂದ ಅಂತಹ ಮನೆಯಲ್ಲಿ ವಾಸ್ತು ದೋಷ ನಿವಾರಣೆಯಾಗಿ ಐಶ್ವರ್ಯ ಹೆಚ್ಚಾಗುತ್ತದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.