ಬ್ಯಾಂಕ್ ಖಾತೆಯಲ್ಲಿ ಹೆಚ್ಚಿನ ಹಣ ಇಟ್ಟಿದ್ದರೆ ಎದುರಿಸಬೇಕಾದೀತು ಸಂಕಷ್ಟ, ಏನು ಹೇಳುತ್ತದೆ ನಿಯಮ ?

Tue, 09 Nov 2021-8:15 pm,

ಬ್ಯಾಂಕ್‌ನಲ್ಲಿ ಐದು ಲಕ್ಷ ರೂಪಾಯಿಗಿಂತ ಹೆಚ್ಚು ಠೇವಣಿ ಇಡಬಾರದು ಎಂದು ಹಲವರು ಭಾವಿಸುತ್ತಾರೆ. ಆದರೆ ಅಂತಹ ನಿಯಮವೇನಿಲ್ಲ. ಬ್ಯಾಂಕ್ ದಿವಾಳಿಯಾದಾಗ ಅಥವಾ ದಿವಾಳಿಯಾದ ಸಂದರ್ಭದಲ್ಲಿ ಐದು ಲಕ್ಷ ರೂಪಾಯಿಗಳವರೆಗೆ ಭದ್ರತೆಯನ್ನು ಖಾತರಿಪಡಿಸುತ್ತದೆ ಎಂದು ನಿಯಮಗಳು ಹೇಳುತ್ತವೆ. ಅದೇನೆಂದರೆ ಬ್ಯಾಂಕ್  ದಿವಾಳಿಯಾದರೆ ಸರ್ಕಾರ ನಿಮಗೆ ಐದು ಲಕ್ಷ ರೂಪಾಯಿಯನ್ನು ನೀಡುತ್ತದೆ. ಬಹುಶಃ ಈ ಕಾರಣಕ್ಕೆ 5 ಲಕ್ಷ ರೂಪಾಯಿಗಿಂತ ಹೆಚ್ಚು ಹಣವನ್ನು ಬ್ಯಾಂಕಿನಲ್ಲಿ ಇಡಬಾರದು ಎಂದು ಜನರು ಭಾವಿಸುತ್ತಾರೆ.   

ಸಂಕಷ್ಟದಲ್ಲಿರುವ ಬ್ಯಾಂಕನ್ನು ದಿವಾಳಿಯಾಗಲು ಸರ್ಕಾರ ಬಿಡುವುದಿಲ್ಲ. ಅದನ್ನು ದೊಡ್ಡ ಬ್ಯಾಂಕ್ ನೊಂದಿಗೆ  ವಿಲೀನಗೊಳಿಸುತ್ತದೆ. ಬ್ಯಾಂಕ್ ದಿವಾಳಿಯಾದರೆ ಎಲ್ಲಾ ಖಾತೆದಾರರಿಗೆ ಪಾವತಿ ಮಾಡುವ ಜವಾಬ್ದಾರಿಯನ್ನು ಡಿಐಸಿಜಿಸಿ ಹೊಂದಿದೆ.

ಬ್ಯಾಂಕ್ ಖಾತೆಯಲ್ಲಿ ನಿಮಗೆ ಬೇಕಾದಷ್ಟು ಹಣವನ್ನು ಇರಿಸಬಹುದು. ಆದರೆ, ನಿಮ್ಮ ಬಳಿ ಆದಾಯದ ಮೂಲದ ದೃಢವಾದ ಪುರಾವೆ ಇರಬೇಕು ಎನುವುದನ್ನು ಮರೆಯಬೇಡಿ. ಆದಾಯ ತೆರಿಗೆ ಇಲಾಖೆ ಹಣ ಎಲ್ಲಿಂದ ಬಂತು ಎಂದು ಕೇಳಿದರೆ ನಿಮ್ಮ ಬಳಿ ನಿಖರವಾದ ಉತ್ತರವಿರಬೇಕು. ನಿಯಮಗಳ ಪ್ರಕಾರ ತೆರಿಗೆ ಪಾವತಿಸಿದರೆ, ಆದಾಯದ ಬಗ್ಗೆ ಸರಿಯಾದ ಪುರಾವೆ ಇದ್ದರೆ ಯಾವುದೇ ತೊಂದರೆ ಇರುವುದಿಲ್ಲ.   

ಬ್ಯಾಂಕ್ ಖಾತೆಯಲ್ಲಿ ನೀವು ಹೆಚ್ಚು ಹಣವನ್ನು ಹೊಂದಿದ್ದು, ಆದಾಯ ತೆರಿಗೆಯ ಮುಂದೆ ಆ ಹಣದ ಮೂಲವನ್ನು ಸಾಬೀತುಪಡಿಸಲು ಸಾಧ್ಯವಾಗದಿದ್ದರೆ, ಸಮಸ್ಯೆಗಳು ಉದ್ಭವಿಸಬಹುದು. ಆಗ ಬ್ಯಾಂಕ್ ಖಾತೆಯನ್ನು ಫ್ರೀಜ್ ಮಾಡಬಹುದು. ಕಾನೂನು ಕ್ರಮ ಕೂಡಾ ಕೈಗೊಳ್ಳಬಹುದು. 

ಇದರೊಂದಿಗೆ ಉಳಿತಾಯ ಖಾತೆಯಲ್ಲಿ ಹೆಚ್ಚು ಹಣವನ್ನು ಇಡುವ ಮೊದಲು, ಠೇವಣಿ ಮೇಲಿನ ಬಡ್ಡಿ ಕಡಿಮೆ ಇರುವುದರಿಂದ ಲಾಭ ಮತ್ತು ನಷ್ಟದ ಬಗ್ಗೆ ಕಾಳಜಿ ವಹಿಸಬೇಕು. ಅದಕ್ಕಾಗಿಯೇ ಹೆಚ್ಚಿನ ಹಣವನ್ನು ಉಳಿತಾಯ ಖಾತೆಯಲ್ಲಿ ಇರಿಸುವ ಬದಲು ಫಿಕ್ಸೆಡ್ ಡೆಪಾಸಿಟ್ ಮಾಡಿ ಅಥವಾ ಈ ಹಣವನ್ನು ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡಿ, ಹೆಚ್ಚಿನ ಬಡ್ಡಿಯನ್ನು ಪಡೆಯಬಹುದು. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link