ಹಲ್ಲುಜ್ಜುವ ಬ್ರಷ್ ಅನ್ನು ಬಾತ್ ರೂಮ್ ನಲ್ಲಿ ಇಡ್ತೀರಾ! ಎಷ್ಟೊಂದು ಅಪಾಯಕಾರಿ ಗೊತ್ತಾ?
ಬಹುತೇಕ ಎಲ್ಲರೂ ಬೆಳಿಗ್ಗೆ ಬ್ರಷ್ ಮಾಡುತ್ತಾರೆ. ಕೆಲವರು ಬ್ರಷ್ ಗಳನ್ನು ಬಾತ್ ರೂಂನಲ್ಲಿ ಇಡುತ್ತಾರೆ. ಇದನ್ನು ಮಾಡುವುದು ತುಂಬಾ ಅಪಾಯಕಾರಿ.
ಬಾತ್‌ರೂಮ್‌ನಲ್ಲಿ ಇಟ್ಟ ಬ್ರಷ್ ಮೇಲೆ ಸೂಕ್ಷ್ಮಜೀವಿಗಳು ಕೂರಬಹುದು. ಇದನ್ನು ಬಾಯಿಗೆ ಹಾಕಿಕೊಂಡಾಗ ಅವು ನಮ್‌ಮ ದೇಹವನ್ನು ಸೇರಬಹದು. ಈ ರೋಗಾಣು ನೇರವಾಗಿ ಹೊಟ್ಟೆ ಸೇರಿ, ಆರೋಗ್ಯಕ್ಕೆ ಹಾನಿ ಮಾಡಬಹುದು.
ಕೆಲವೊಮ್ಮೆ ಈ ಸೂಕ್ಷ್ಮ ಜೀವಿಗಳು ಹೊಟ್ಟೆ ನೋವು, ವಾಂತಿಗೆ ಕಾರಣವಾಗಬಹುದು. ಕೆಲವರು ತೀವ್ರವಾದ ಜೀರ್ಣಕಾರಿ ಸಮಸ್ಯೆಗಳನ್ನು ಸಹ ಅನುಭವಿಸುತ್ತಾರೆ.
ಕೆಲವರಿಗೆ ಆಗಾಗ್ಗೆ ಅಲರ್ಜಿ ಇರುತ್ತದೆ. ನಾಲಿಗೆ ಕೆಂಪಾಗುತ್ತದೆ. ಬಾಯಿಯಲ್ಲಿ ಹುಣ್ಣಾಗಿ ನೋಯುತ್ತದೆ. ರಕ್ತಸ್ರಾವವೂ ಆಗಬಹುದು. ಇದಕ್ಕೂ ಸಹ ಬಾತ್‌ರೂಮ್‌ನಲ್ಲಿ ಇಡುವ ಬ್ರಷ್ ಕಾರಣವಾಗಬಹುದು.
ಕೆಲವು ಚಿಕ್ಕ ಮಕ್ಕಳು ಬಾತ್ ರೂಮ್‌ನಲ್ಲಿ ಕುಳಿತು ಹಲ್ಲುಜ್ಜುತ್ತಾರೆ. ಆದರೆ ಹೀಗೆ ಮಾಡುವುದರಿಂದ ಹಾನಿಕಾರಕ ಸೂಕ್ಷ್ಮಾಣುಗಳು ನೇರವಾಗಿ ಹೊಟ್ಟೆಯೊಳಗೆ ಹೋಗುತ್ತವೆ. ಕಡಿಮೆ ರೋಗನಿರೋಧಕ ಶಕ್ತಿಯಿಂದಾಗಿ ಮಕ್ಕಳು ಆರೋಗ್ಯ ಸಮಸ್ಯೆಗಳಿಗೆ ಗುರಿಯಾಗುತ್ತಾರೆ.
ನಾವು ಬಳಸುವ ಬ್ರಷ್ ಗಳನ್ನು ನಾಲ್ಕು ತಿಂಗಳಿಗೊಮ್ಮೆ ಬದಲಾಯಿಸಬೇಕು. ಬಾತ್ ರೂಮ್ ಒಳಗೆ ಎಂದಿಗೂ ಇಡಬಾರದು. ಹಲ್ಲುಜ್ಜುವ ಮೊದಲು ಮತ್ತು ನಂತರ ಬೆಚ್ಚಗಿನ ನೀರಿನಿಂದ ಬ್ರಷ್ ಅನ್ನು ಸ್ವಚ್ಛಗೊಳಿಸಿ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.