ಕೀರ್ತಿ ಸುರೇಶ್‌ ತಾಯಿ ಕೂಡ ಖ್ಯಾತ ನಟಿ.. ಡಾ ರಾಜ್‌ಕುಮಾರ್‌ ಜತೆ ನಟಿಸಿದ್ದ ಆ ಸಿನಿಮಾ ಯಾವುದು? ಪಾತ್ರ ಏನು ಗೊತ್ತೇ ?

Mon, 14 Oct 2024-5:04 pm,

Keerthy Suresh mother: ಕೀರ್ತಿ ಸುರೇಶ್‌ ತಾಯಿ ಕೂಡ ಖ್ಯಾತ ನಟಿಯಾಗಿದ್ದಾರೆ. ಇವರು ಡಾ.ರಾಜ್‌ಕುಮಾರ್‌ ಜೊತೆ ಸಿನಿಮಾವೊಂದರಲ್ಲಿ ನಟಿಸಿದ್ದಾರೆ. 

ಕಾಲಿವುಡ್‌ನ ಫೇಮಸ್‌ ನಟಿ ಕೀರ್ತಿ ಸುರೇಶ್.‌ ವಿಶೇಷ ಅಂದರೆ ಕೀರ್ತಿ ಸುರೇಶ್‌ ತಾಯಿ ಕೂಡ ಕನ್ನಡದ ಸಿನಿಮಾವೊಂದರಲ್ಲಿ ನಟಿಸಿದ್ದಾರೆ. 

ಕೀರ್ತಿ ಸುರೇಶ್ ಅವರ ತಾಯಿ ರಾಜ್‌ಕುಮಾರ್‌ ಜತೆ ಸಿನಿಮಾ ಮಾಡಿದ ಬಗ್ಗೆ ಭಗವಾನ್ ಅವರು ಹೇಳಿಕೊಂಡಿದ್ದರು. ಕೀರ್ತಿ ಸುರೇಶ್‌ ಅವರ ತಾಯಿಯ ಹೆಸರು ಮೇನಕಾ. ಇವರು ಜಿ. ಸುರೇಶ್ ಕುಮಾರ್ ಅವರನ್ನು ಮದುವೆ ಆಗಿದ್ದಾರೆ. 

ಕೀರ್ತಿ ತಂದೆ ಸುರೇಶ್ ಕುಮಾರ್ ನಿರ್ಮಾಪಕರು. ತಾಯಿ ಮೇನಕಾ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. 1984ರಲ್ಲಿ ರಿಲೀಸ್ ಆದ ‘ಸಮಯದ ಗೊಂಬೆ’ ಚಿತ್ರದಲ್ಲಿ ರಾಜ್‌ಕುಮಾರ್‌ ಸೋದರಿಯ ಪಾತ್ರದಲ್ಲಿ ಕೀರ್ತಿ ಸುರೇಶ್‌ ತಾಯಿ ಮೇನಕಾ ನಟಿಸಿದ್ದಾರೆ. 

ನಿರ್ದೇಶಕ ಭಗವಾನ್ ಈ ಬಗ್ಗೆ ಸಂದರ್ಶನವೊಂದರಲ್ಲಿ ತಿಳಿಸಿದ್ದರು. ಈ ಸಿನಿಮಾಗೆ ಮೇನಕಾ ಹೀರೋಯಿನ್ ಆಗಬೇಕಿತ್ತಂತೆ. 

ಆದರೆ ಕಾರಣಾಂತರಗಳಿಂದ ತಂಗಿ ಪಾತ್ರದಲ್ಲಿ ನಟಿಸಿದರಂತೆ. ದೊರೈ-ಭಗವಾನ್ ಸಮಯದ ಗೊಂಬೆ ಚಿತ್ರವನ್ನು ನಿರ್ದೇಶನ ಮಾಡಿದ್ದರು.

ಟಾಲಿವುಡ್ ಚೆಲುವೆ ಕೀರ್ತಿ ಸುರೇಶ್ ಪ್ರತಿ ಚಿತ್ರಕ್ಕೆ 3 ಕೋಟಿ ರೂಪಾಯಿ ಸಂಭಾವನೆ ಪಡೆಯುವ ಸಿಕ್ಕಾಪಟ್ಟೆ ಕ್ರೇಜ್‌ಹೊಂದಿರುವ ನಟಿ.  

ಬಾಲಿವುಡ್ ನಟ ವರುಣ್ ಧವನ್ ಜೊತೆ ಬೇಬಿ ಜಾನ್ ಸಿನಿಮಾದಲ್ಲಿ ಸಹ ಕೀರ್ತಿ ಸುರೇಶ್‌ ನಟಿಸುತ್ತಿದ್ದಾರೆ. ಸ್ಟಾರ್ ಡೈರೆಕ್ಟರ್ ಅಟ್ಲಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿರುವುದು ವಿಶೇಷ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link