Keerthy Suresh : ಮದುವೆಯ ನಂತರ ನಟನೆಗೆ ಗುಡ್ ಬೈ ಹೇಳ್ತಾರಾ ನಟಿ ಕೀರ್ತಿ ಸುರೇಶ್?
ಕಳೆದೆರಡು ವರ್ಷಗಳಿಂದ ನಟಿ ಕೀರ್ತಿ ಸುರೇಶ್ ಅವರ ಮದುವೆಯ ವದಂತಿಗಳು ಹರಿದಾಡುತ್ತಿವೆ. ಇತ್ತೀಚಿನ ವರದಿಗಳನ್ನು ನಂಬುವುದಾದರೆ, ಕೀರ್ತಿ ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರಂತೆ.
ನಟಿಯ ಪೋಷಕರಾದ ಮೇನಕಾ ಮತ್ತು ಸುರೇಶ್ ಈಗಾಗಲೇ ಸೂಕ್ತ ವರನ ಹುಡುಕಾಟವನ್ನು ಪ್ರಾರಂಭಿಸಿದ್ದಾರಂತೆ. ಕೀರ್ತಿ ಕೂಡ ಮದುವೆಗೆ ಒಪ್ಪಿಗೆ ನೀಡಿದ್ದಾರೆ ಎಂದು ವರದಿಗಳು ಹೇಳುತ್ತಿವೆ.
ನಟಿ ಯಾವಾಗಲೂ ಕಾಲಕಾಲಕ್ಕೆ ವದಂತಿಗಳನ್ನು ತಳ್ಳಿಹಾಕುತ್ತಿದ್ದರೂ, ಅವರು ಶೀಘ್ರದಲ್ಲೇ ಮದುವೆಯಾಗಲು ಸಿದ್ಧರಾಗಿದ್ದಾರೆ ಎಂಬ ವರದಿಗಳು ಮತ್ತೆ ಶುರುವಾಗಿವೆ.
ಮದುವೆ ಬಳಿಕ ತಮ್ಮ ನಟನೆಗೆ ಗುಡ್ ಬೈ ಹೇಳಲಿದ್ದಾರೆ ಎನ್ನಲಾಗುತ್ತಿದೆ. ವಿವಾಹದ ಬಳಿಕ ಕೀರ್ತಿ ಚಲನಚಿತ್ರ ನಿರ್ಮಾಣ ಮಾಡಲಿದ್ದಾರೆ ಎಂದು ವರದಿಯಾಗಿದೆ.
ಕೀರ್ತಿ ಮತ್ತು ಅವರ ಕುಟುಂಬ ಇತ್ತೀಚೆಗೆ ತಿರುನಲ್ವೇಲಿ ಬಳಿಯ ತಮ್ಮ ಪೂರ್ವಜರ ಮನೆಗೆ ಭೇಟಿ ನೀಡಿದ್ದರು ಮತ್ತು ನಟಿಯ ಮದುವೆಗೆ ತಯಾರಿ ನಡೆಸುತ್ತಿದ್ದಾರೆ ಎಂದು ವರದಿ ಹೇಳುತ್ತಿವೆ.
ಆದಾಗ್ಯೂ, ಈ ವರದಿಗಳ ಬಗ್ಗೆ ಯಾವುದೇ ಅಧಿಕೃತ ದೃಢೀಕರಣವಿಲ್ಲ ಮತ್ತು ಮುಂದಿನ ದಿನಗಳಲ್ಲಿ ಕೀರ್ತಿ ತನ್ನ ಮದುವೆಯ ವದಂತಿಗಳ ಬಗ್ಗೆ ಏನು ತಿಳಿಸುತ್ತಾರೆ ಎಂದು ನೋಡಬೇಕಾಗಿದೆ.