Ketu Gochar 2023: ಮುಂದಿನ ಒಂದೂವರೆ ವರ್ಷ ಈ ರಾಶಿಯವರಿಗೆ ಹೆಚ್ಚಾಗಲಿದೆ ಸಂಕಷ್ಟ

Mon, 30 Oct 2023-6:28 am,

ನವಗ್ರಹಗಳಲ್ಲಿ ಕೇತು ಗ್ರಹವನ್ನು ಪಾಪ ಗ್ರಹ, ಕ್ರೂರ ಗ್ರಹಗಳಲ್ಲಿ ಒಂದು ಎಂದು ಹೇಳಲಾಗುತ್ತದೆ. ರಾಹು-ಕೇತು ಗ್ರಹಗಳು ಶನಿ ಗ್ರಹದ ಬಳಿಕ ಅತಿ ನಿಧಾನವಾಗಿ ಚಲಿಸುವ ಗ್ರಹಗಳು. 

ಸದಾ ಹಿಮ್ಮುಖವಾಗಿಯೇ ಚಲಿಸುವ ಕೇತು ಗ್ರಹವು ಒಂದೂವರೆ ವರ್ಷಗಳಿಗೆ ಒಮ್ಮೆ ಎಂದರೆ 18 ತಿಂಗಳಲ್ಲಿ ಒಂದು ಬಾರಿ ತನ್ನ ರಾಶಿಯನ್ನು ಬದಲಾಯಿಸುತ್ತದೆ. 

ಕೇತು ಇಂದು ಅಕ್ಟೋಬರ್ 30, 2023ರಂದು ತುಲಾ ರಾಶಿಯನ್ನು ತೊರೆದು ಕನ್ಯಾ ರಾಶಿಯನ್ನು ಪ್ರವೇಶಿಸಲಿದೆ. 

ಕೇತು ಸಂಚಾರದ ಧನಾತ್ಮಕ ಮತ್ತು ಋಣಾತ್ಮಕ ಪರಿಣಾಮಗಳು ಎಲ್ಲಾ ರಾಶಿಯವರ ಮೇಲೂ ಕಂಡು ಬರುತ್ತದೆ. 

ಇಂದು ಕನ್ಯಾ ರಾಶಿಗೆ ಪದಾರ್ಪಣೆ ಮಾಡುತ್ತಿರುವ ಕೇತು ಮುಂದಿನ ಒಂದೂವರೆ ವರ್ಷಗಳ ಕಾಲ ಮೂರು ರಾಶಿಯವರ ಜೀವನದಲ್ಲಿ ಅಲ್ಲೋಲ ಕಲ್ಲೋಲವನ್ನು ಸೃಷ್ಟಿಸಲಿದ್ದಾನೆ ಎಂದು ಹೇಳಲಾಗುತ್ತಿದೆ. ಈ ಸಮಯದಲ್ಲಿ ಯಾವ ರಾಶಿಯವರು ಎಚ್ಚರಿಕೆಯಿಂದ ಇರಬೇಕು ಎಂದು ನೋಡುವುದಾದರೆ... 

ಕೇತು ರಾಶಿ ಪರಿವರ್ತನೆಯು ವೃಷಭ ರಾಶಿಯವರಿಗೆ ಅಷ್ಟು ಮಂಗಳಕರ ಎಂದು ಹೇಳಲಾಗುವುದಿಲ್ಲ. ಈ ಸಮಯದಲ್ಲಿ ವೃಷಭ ರಾಶಿಯ ವಿವಾಹಿತರ ಜೀವನದಲ್ಲಿ ಸಾಕಷ್ಟು ಏರಿಳಿತಗಳು ಕಂಡು ಬರಬಹುದು. ಉದ್ಯೋಗ ಕ್ಷೇತ್ರದಲ್ಲಿ ಸಮಸ್ಯೆಗಳು ಉಲ್ಬಣಿಸಬಹುದು. ಇದು ನಿಮ್ಮ ಆರ್ಥಿಕ ಸ್ಥಿತಿಯನ್ನು ಹದಗೆಡಿಸಬಹುದು. ಹಾಗಾಗಿ, ಸಂಯಮದಿಂದ ನಿರ್ಧಾರಗಳನ್ನು ಕೈಗೊಳ್ಳುವುದನ್ನು ಪರಿಗಣಿಸಿ. 

ಕೇತು ಸಂಕ್ರಮಣದ ಪರಿಣಾಮವಾಗಿ ಕರ್ಕಾಟಕ ರಾಶಿಯ ವ್ಯಾಪಾರಸ್ಥರು ಭಾರಿ ನಷ್ಟವನ್ನು ಅನುಭವಿಸಬೇಕಾಗಬಹುದು. ನಿಮ್ಮ ನಂಬಿಕಸ್ಥರಿಂದಲೇ ಹಣಕಾಸಿನ ವಿಷಯದಲ್ಲಿ ಮೋಸ ಹೋಗುವ ಸಾಧ್ಯತೆ ಇರುವುದರಿಂದ ಯಾರನ್ನೂ ಸುಲಭವಾಗಿ ನಂಬುವುದು ಒಳ್ಳೆಯದಲ್ಲ. ಕೇತು ನಿಮ್ಮ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುವುದರಿಂದ ಆರೋಗ್ಯದ ಬಗ್ಗೆ ಜಾಗರೂಕರಾಗಿರುವುದು ಅಗತ್ಯ. 

ಕೇತು ರಾಶಿ ಪರಿವರ್ತನೆಯು ತುಲಾ ರಾಶಿಯವರಿಗೂ ಕೂಡ ಅಷ್ಟು ಶುಭಕರವಾಗಿಲ್ಲ. ಈ ಸಮಯದಲ್ಲಿ ಪ್ರತಿ ಕೆಲಸದಲ್ಲೂ ಹೆಚ್ಚಿನ ಪರಿಶ್ರಮದ ಅಗತ್ಯವಿರುತ್ತದೆ. ಕೇತುವಿನ ದುಷ್ಪರಿಣಾಮದ ಫಲವಾಗಿ ಕುಟುಂಬ ಜೀವನದಲ್ಲಿ ಅಸಮತೋಲನ ಕಂಡು ಬರಬಹುದು. ಮಕ್ಕಳ ವಿಷಯದಲ್ಲಿಯೂ ಕೆಲವು ಅಶುಭ ಶುದ್ಧಿಗಳನ್ನು ಕೇಳಬಹುದು ಎಂದು ಹೇಳಲಾಗುತ್ತಿದೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link