‘ಕೆಜಿಎಫ್-2’ ಬೆಡಗಿ ಹಂಚಿಕೊಂಡಿರುವ ಶೂಟಿಂಗ್ ಚಿತ್ರಗಳು ಇಲ್ಲಿವೆ ನೋಡಿ

Fri, 29 Apr 2022-10:06 pm,

ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಮೂಡಿಬಂದಿರುವ ರಾಕಿಂಗ್ ಸ್ಟಾರ್ ಯಶ್ ಮತ್ತು ಶ್ರೀನಿಧಿ ಶೆಟ್ಟಿ ಅಭಿನಯದ ‘ಕೆಜಿಎಫ್-2’ ಸಿನಿಮಾ ಬಾಕ್ಸ್ ಆಫೀಸ್‍ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ. ದೇಶ-ವಿದೇಶಗಳಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಸ್ಕ್ರೀನ್‍ಗಳಲ್ಲಿ ಬಿಡುಗಡೆಯಾದ ‘ಕೆಜಿಎಫ್-2’ ಇಂದಿಗೂ ಯಶಸ್ವಿಯಾಗಿ ಪ್ರದರ್ಶಿತವಾಗುತ್ತಿದೆ. ಈ ಸಿನಿಮಾದ ಅಪರೂಪದ ಫೋಟೋಗಳು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

‘ಕೆಜಿಎಫ್’ ಬೆಡಗಿ ಶ್ರೀನಿಧಿ ಶೆಟ್ಟಿ ಅವರು ‘ಕೆಜಿಎಫ್-2’ ಸಿನಿಮಾ ಶೂಟಿಂಗ್‍ನ ಅಪರೂಪದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

‘ಕೆಜಿಎಫ್’ ಸಿನಿಮಾಗೆ ನಾಯಕಿಯನ್ನಾಗಿ ತಮ್ಮನ್ನು ಆಯ್ಕೆ ಮಾಡಿದ ನಿರ್ದೇಶಕ ಪ್ರಶಾಂತ್ ನೀಲ್ ಅವರಿಗೆ ನಟಿ ಶ್ರೀನಿಧಿ ಶೆಟ್ಟಿ ಧನ್ಯವಾದ ತಿಳಿಸಿದ್ದಾರೆ.

‘ಕೆಜಿಎಫ್-2’ ಸಿನಿಮಾದ ಫೋಟೋಗಳನ್ನು ಹಂಚಿಕೊಂಡಿರುವ ಶ್ರೀನಿಧಿ ಶೆಟ್ಟಿ ನಿರ್ದೇಶಕ ಪ್ರಶಾಂತ್ ನೀಲ್ ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ‘ನಿಮ್ಮ ಸ್ವಂತ ನಿರ್ಧಾರಗಳು ನಿಮ್ಮ ಜೀವನವನ್ನು ಬದಲಾಯಿಸುತ್ತವೆ ಮತ್ತು ನಿಮ್ಮ ಕನಸುಗಳನ್ನು ಸಾಧಿಸಲು ಸಹಾಯ ಮಾಡುತ್ತವೆ. ಕೆಲವೊಮ್ಮೆ ಬಹಳ ಅಪರೂಪವಾಗಿ ಬೇರೆಯವರ ನಿರ್ಧಾರವೂ ಸಹ ಹಾಗೆ ಮಾಡಬಹುದು... ಪ್ರಶಾಂತ್ ನನ್ನನ್ನು ಆಯ್ಕೆ ಮಾಡಿದರು ಮತ್ತು ನನ್ನ ಜೀವನವು ಶಾಶ್ವತವಾಗಿ ಬದಲಾಯಿತು. ಧನ್ಯವಾದಗಳು ಪ್ರಶಾಂತ್’ ಎಂದು ಕ್ಯಾಪ್ಶನ್ ಬರೆದಿದ್ದಾರೆ.

‘ಕೆಜಿಎಫ್-2’ ಸಿನಿಮಾದ Behind-the-scenes ಅಂದರೆ ಮೇಕಿಂಗ್ ಫೋಟೋಗಳನ್ನು ಶ್ರೀನಿಧಿ ಶೆಟ್ಟಿ ಹಂಚಿಕೊಂಡಿದ್ದಾರೆ. ಶೂಟಿಂಗ್‍ನ ಅಪರೂಪದ ಫೋಟೋಗಳನ್ನು ಕಣ್ತುಂಬಿಕೊಂಡು ಅಭಿಮಾನಿಗಳು ಫುಲ್ ಖುಷಿ ಆಗಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link