BBK 11: ಮೋಸದ ಗೆಲುವು...ಕರ್ಮ ರಿಟರ್ನ್ಸ್! ಕಿಚ್ಚನ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಭವ್ಯಾ ಗೌಡ; ಕ್ಯಾಪ್ಟನ್ಸಿ ಬಿಟ್ಟು ದೊಡ್ಮನೆಯಿಂದ ಹೊರಬರ್ತಾರಾ ನಟಿ?
ʼವಾರದ ಕಥೆ ಕಿಚ್ಚನ ಜೊತೆʼ ನಡೆಸಿಕೊಡಲು ಕಿಚ್ಚ ಸುದೀಪ್ ಬಂದಾಗಿದೆ. ಬಿಗ್ ಬಾಸ್ ಸೀಸನ್ 11ರ 90 ದಿನಗಳ ಜರ್ನಿಯಲ್ಲಿ ಕಿಚ್ಚ ಈ ವಾರ ಭವ್ಯಾ ಗೌಡಗೆ ಭರ್ಜರಿ ಕ್ಲಾಸ್ ತೆಗೆದುಕೊಳ್ಳೋದು ಫಿಕ್ಸ್ ಆದಂತೆ ಕಾಣಿಸುತ್ತಿದೆ.
ʼಕರ್ಮʼದ ಬಗ್ಗೆ ಮಾತನಾಡಿದ ಕಿಚ್ಚ, "ನೀತಿ ನಿಜಾಯ್ತಿ ಯಾರಿಗೆ ಬೇಕು? ಗೆದ್ದರೆ ಸಾಕು ಅಂತ ಆಡೋರು ಕೆಲವರು.. ಆದ್ರೆ ಗೆದ್ದಾಗ ಖುಷಿ ಸಿಗುತ್ತೆ, ಕೊನೆಗೆ ಮಾಡಿದ ಕೆಲಸಕ್ಕೆ ಕರ್ಮ ಬಂದು ಹಿಡಿದುಕೊಳ್ಳುತ್ತೆ" ಎಂದು ವೇದಿಕೆಯೇ ಮೇಲೆ ಕಿಚ್ಚ ಖಡಕ್ ಸಂದೇಶ ಕೊಟ್ಟಿದ್ದಾರೆ.
ಇನ್ನು ಇಂಥಾ ಹೇಳಿಕೆ ಕಿಚ್ಚ ನೀಡಲು ಬಲವಾದ ಕಾರಣವೊಂದಿದೆ. "ಕಳೆದ ದಿನ ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ಸಿ ಟಾಸ್ಕ್ ನೀಡಿದ್ದರು. ಆ ಟಾಸ್ಕ್‌ನಲ್ಲಿ ಮೋಸದಾಟವಾಡಿದ್ದರು ಭವ್ಯಾ. ಅದೇ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಕಿಚ್ಚ ಇಂತಹ ಹೇಳಿಕೆ ನೀಡಿದ್ದಾರೆ.
ಅಷ್ಟಕ್ಕೂ ಆಗಿದ್ದೇನು? ಎಂಬುವುದನ್ನು ಮುಂದೆ ತಿಳಿಯೋಣ. ಕಳೆದ ದಿನ 5 ಸ್ಪರ್ಧಿಗಳಿಗೆ ಕ್ಯಾಪ್ಟನ್ಸಿ ಟಾಸ್ಕ್ ನೀಡಲಾಗಿತ್ತು. ಐದು ಸ್ಪರ್ಧಿಗಳು ಸಾಲಾಗಿ ನಿಂತುಕೊಳ್ಳಬೇಕು. ಆಗ ಬಿಗ್ ಬಾಸ್ ಹೇಳುವ ನಂಬರ್ನಲ್ಲಿರುವ ಚೆಂಡುಗಳನ್ನು ಓಡಿಹೋಗಿ ಹಿಡಿದು ಬಾಸ್ಕೆಟ್ನಲ್ಲಿ ಹಾಕಬೇಕು. ಇದೇ ಟಾಸ್ಕ್‌ನಲ್ಲಿ ಬಿಗ್ಬಾಸ್ ಮೊದಲು 9 ನಂಬರಿನ ಗೊಂಚಲಿನಿಂದ ಚೆಂಡುಗಳನ್ನು ತೆಗೆದುಕೊಂಡು ಹೋಗಲು ಹೇಳುತ್ತಾರೆ. ಆಗ ಎಲ್ಲರೂ ಓಡಿ ಹೋಗಿ ಆ ಚೆಂಡನ್ನು ಹಿಡಿಯುತ್ತಾರೆ. ಅದೇ ವೇಳ 3ನೇ ಗೊಂಚಲಿನಿಂದ ಚೆಂಡೊಂದು ಬೀಳುತ್ತದೆ.
ಆದರೆ ಆ ಬಗ್ಗೆ ಉಸ್ತುವಾರಿಗಳು ಗಮನಿಸಿರುವುದಿಲ್ಲ. ಭವ್ಯಾ ಕೂಡಲೇ ಆ ಚೆಂಡನ್ನು ಎತ್ತಿಕೊಂಡು ಬುಟ್ಟಿಗೆ ಹಾಕುತ್ತಾರೆ. ಆಕೆಯ ಅದೃಷ್ಟಕ್ಕೆ ಅದೇ ಬಾಲ್ ಬುಟ್ಟಿಗೆ ಬೀಳುತ್ತದೆ. ಇದರಿಂದ ಮೊದಲ ಹಂತದಲ್ಲಿ ಭವ್ಯಾ ಗೌಡ ಸೇಪ್ ಆಗುತ್ತಾರೆ. ಇದಾದ ಬಳಿಕ ಭವ್ಯಾ ಗೌಡ ಈ ವಾರದ ಕ್ಯಾಪ್ಟನ್ ಆಗುತ್ತಾರೆ.
ಆ ಬಾಲ್ ಬೇರೆ ಗೊಂಚಲಿನಿಂದ ಬಿದ್ದಿದ್ದು ಆಕೆಗೆ ತಿಳಿದಿತ್ತು. ಆದರೂ ಸುಳ್ಳುಹೇಳಿ ಕ್ಯಾಪ್ಟನ್ಸಿ ಪಟ್ಟ ಗೆದ್ದಿದ್ದಾರೆ. ಇನ್ನೊಂದೆಡೆ ಈ ವಿಚಾರವನ್ನು ಮನೆಯಲ್ಲಿ ಇತರ ಸ್ಪರ್ಧಿಗಳು ಡಿಸ್ಕಸ್ ಮಾಡುತ್ತಿದ್ದಾಗ, "ನಾನು ಮೋಸದಿಂದ ಗೆದ್ದಿದ್ದರೆ ಬಿಗ್ ಬಾಸ್ ಹೇಳಲಿ, ಕ್ಯಾಪ್ಟನ್ಸಿ ಬಿಟ್ಟುಕೊಡುತ್ತೇನೆ" ಎಂದು ಹೇಳಿದ್ದಾರೆ. ಇದೀಗ ಈ ಮಾತಿಗೆ ತಕ್ಕಂತೆ ನಡೆದುಕೊಳ್ಳುತ್ತಾರಾ? ಎಂಬುದನ್ನು ಕಾದು ನೋಡಬೇಕಿದೆ.