ಬಿಗ್ ಬಾಸ್’ನ ವೀಕೆಂಡ್ ಎಪಿಸೋಡ್ ನಡೆಸಿಕೊಡೋಕೆ ಕಿಚ್ಚ ಸುದೀಪ್ ಪಡೆಯುವ ಸಂಬಳ ಎಷ್ಟು ಕೋಟಿ ಗೊತ್ತಾ?
ಕನ್ನಡ, ತಮಿಳು, ತೆಲುಗು, ಮರಾಠಿ ಮತ್ತು ಮಲಯಾಳಂ ಸೇರಿದಂತೆ ವಿವಿಧ ಭಾರತೀಯ ಭಾಷೆಗಳಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಅತೀ ಹೆಚ್ಚು ಟಿ ಆರ್ ಪಿ ಕೂಡ ಹೊಂದಿದೆ.
ಇನ್ನು ಕನ್ನಡ ಹೊರತಾಗಿ ಇತರ ಬಿಗ್ ಬಾಸ್ ಶೋಗಳ ಹೋಸ್ಟ್ ಸದ್ದು ಮಾಡಿರೋದು ಕಡಿಮೆ. ಆದರೆ ಕನ್ನಡದ ಬಿಗ್ ಬಾಸ್ ಇಷ್ಟೊಂದು ಜನಪ್ರಿಯವಾಗಲು ಪ್ರಮುಖ ಕಾರಣ ಕಿಚ್ಚ ಸುದೀಪ್ ಎಂದರೆ ತಪ್ಪಾಗಲ್ಲ. ಫ್ಯಾನ್ ಫಾಲೋವಿಂಗ್ ಒಂದೆಡೆಯಾದ್ರೆ, ಕಿಚ್ಚನ ಗತ್ತು, ವಾಕ್ಚತುರತೆ, ಜ್ಞಾನ, ತಿಳುವಳಿಕೆ ಹೇಳುವ ಪರಿ ಎಲ್ಲವೂ ಕನ್ನಡಿಗರ ಮನಗೆದ್ದಾಗಿದೆ.
ಅಂದಹಾಗೆ ಕಿಚ್ಚ ಸುದೀಪ್ ಬಿಗ್ ಬಾಸ್ ಶೋ ನಡೆಸಿಕೊಡಲು ಪಡೆಯುವ ಸಂಭಾವನೆ ಎಷ್ಟೆಂದು ತಿಳಿದರೆ ನೀವು ಶಾಕ್ ಆಗೋದು ಖಂಡಿತ.
ಕಿಚ್ಚ ಸುದೀಪ್ ಸಂಜೀವ್ ಅವರು ಬಿಗ್ ಬಾಸ್ ಹೋಸ್ಟ್ ಮಾಡಲು, 2015 ರಲ್ಲಿ ಕಲರ್ಸ್ ಚಾನೆಲ್’ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಇದು ಮುಂದಿನ 5 ವರ್ಷಗಳವರೆಗೆ ಇದ್ದ ಒಪ್ಪಂದವಾಗಿದ್ದು, ಆ ಸಂದರ್ಭದಲ್ಲಿ ಒಟ್ಟು 20 ಕೋಟಿ ರೂ. ಸಂಭಾವೆನೆ ಪಡೆದಿದ್ದರು ಎನ್ನಲಾಗಿದೆ.
ಇದಾದ ಬಳಿಕ ತಮ್ಮ ಸಂಭಾವನೆ ಮೊತ್ತವನ್ನು ಸುದೀಪ್ ಅವರು ಗಣನೀಯವಾಗಿ ಹೆಚ್ಚಳ ಮಾಡಿದ್ದಾರೆ ಎಂದು ಹೇಳಲಾಗಿದೆ. ಆದರೆ ಈ ಬಗ್ಗೆ ನಿಖರ ಮಾಹಿತಿ ಇಲ್ಲ.