Kiss Meaning In Dream: ಕನಸಿನಲ್ಲಿ ಅಪರಿಚಿತರನ್ನು ಚುಂಬಿಸುವುದರ ಅರ್ಥವೇನು ಗೊತ್ತಾ..?

Wed, 06 Jul 2022-4:54 pm,

ನಿಮ್ಮ ಕನಸಿನಲ್ಲಿ ನೀವು ಅಪರಿಚಿತರನ್ನು ಚುಂಬಿಸಿದರೆ ಜೀವನದಲ್ಲಿ ಸಂಪೂರ್ಣವಾಗಿ ಹೊಸ ವಿಷಯಗಳನ್ನು ಅನ್ವೇಷಿಸಲು ತುಂಬಾ ಕುತೂಹಲ ಹೊಂದಿದ್ದೀರಿ ಎಂದರ್ಥ. ಇಂತಹ ಕನಸು ಕಾಣುವವರು ಹೊಸದನ್ನು ಪ್ರಯತ್ನಿಸಲು ಇಷ್ಟಪಡುತ್ತಾರೆ.  

ನಿಮ್ಮ ಕನಸಿನಲ್ಲಿ ನೀವು ಶತ್ರುಗಳನ್ನು ಚುಂಬಿಸಿದ್ದರೆ ಅದು ನಿಮ್ಮ ವಿರುದ್ಧ ಸ್ವಭಾವವನ್ನು ತೋರಿಸುತ್ತದೆ. ಬಹುಶಃ ನೀವು ಯಾರನ್ನೂ ಇಷ್ಟಪಡುವುದಿಲ್ಲವೆಂದು ಮನವರಿಕೆ ಮಾಡಲು ಪ್ರಯತ್ನಿಸುತ್ತಿದ್ದೀರಿ ಎಂಬುದು ಇದರಿಂದ ತಿಳಿಯುತ್ತದೆ.

ನಿಮ್ಮ ತಾಯಿ ಅಥವಾ ನಿಮ್ಮ ತಂದೆಯನ್ನು ಚುಂಬಿಸುವ ಕನಸು ಕಂಡರೆ, ಅದನ್ನು ಅದೃಷ್ಟದ ಕನಸು ಎಂದು ಪರಿಗಣಿಸಲಾಗುತ್ತದೆ. ಇದು ನಿಮ್ಮ ಪೋಷಕರ ಬಗ್ಗೆ ನಿಮ್ಮ ಕಾಳಜಿಯನ್ನು ಸಹ ತೋರಿಸುತ್ತದೆ. ಈ ಕನಸು ನಿಮ್ಮ ಹೆತ್ತವರ ಮೇಲಿನ ನಿಮ್ಮ ಅಗಾಧ ಪ್ರೀತಿಯ ಪ್ರತಿಬಿಂಬವಾಗಿದೆ.

ಕನಸಿನಲ್ಲಿ ನೀವು ಸಹೋದರಿ ಅಥವಾ ಸಹೋದರನ ಕೆನ್ನೆಗೆ ಚುಂಬಿಸುತ್ತಿದ್ದರೆ ನಿಮ್ಮ ನಡುವಿನ ಸಂಬಂಧ ಮತ್ತಷ್ಟು ಗಟ್ಟಿಯಾಗಿರುತ್ತದೆ ಎಂದರ್ಥ. ಭವಿಷ್ಯದಲ್ಲಿ ನೀವು ಪರಸ್ಪರ ಚೆನ್ನಾಗಿ ಇರುತ್ತೀರಿ ಎಂದು ಇದರಿಂದ ತಿಳಿದುಬರುತ್ತದೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link