IPL 2024 Final : ಚೆನ್ನೈನಲ್ಲಿ ಭಾರೀ ಮಳೆ.. KKR vs SRH ಫೈನಲ್ ಪಂದ್ಯ ರದ್ದಾದರೆ, ಆ ತಂಡದ ಪಾಲಾಗುತ್ತೆ ಕಪ್ !
ಈ ಹೈವೋಲ್ಟೇಜ್ ಹಣಾಹಣಿಗೆ ಮಳೆ ಅಡ್ಡಿಪಡಿಸಬಹುದೇ ಎಂಬ ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಈ ಐಪಿಎಲ್ ಸೀಸನ್‌ನಲ್ಲಿ ಮೂರು ಪಂದ್ಯಗಳ ವೇಳೆ ಮಳೆಯಾಗಿದೆ. ಆಗ ಉಭಯ ತಂಡಗಳು ಒಂದೊಂದು ಅಂಕ ಪಡೆದಿದ್ದವು.
ಇಂದು ರೆಮಲ್ ಚಂಡಮಾರುತದ ಹಿನ್ನೆಲೆ ಫೈನಲ್ ಪಂದ್ಯ ಮಳೆಯಿಂದ ರದ್ದಾದರೆ ಯಾವ ತಂಡ ಚಾಂಪಿಯನ್ ಆಗಿ ಹೊರಹೊಮ್ಮಲಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
ಕ್ವಾಲಿಫೈಯರ್ 1ರಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಸೋಲಿಸಿ ಕೋಲ್ಕತ್ತಾ ಫೈನಲ್ ತಲುಪಿತ್ತು. ಕೋಲ್ಕತ್ತಾ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದು ಫೈನಲ್ ತಲುಪಿದ ಮೊದಲ ತಂಡವಾಯಿತು.
ಹೈದರಾಬಾದ್ ಕೂಡ ಫೈನಲ್ ತಲುಪಿದೆ. ಇಂತಹ ಪರಿಸ್ಥಿತಿಯಲ್ಲಿ ಕೆಕೆಆರ್ ಮತ್ತೊಮ್ಮೆ ಹೈದರಾಬಾದ್ ತಂಡವನ್ನು ಎದುರಿಸಬೇಕಾಗಿದೆ. ಹೈದರಾಬಾದ್ ವಿರುದ್ಧ ಕೆಕೆಆರ್ ದಾಖಲೆ ಗಮನಾರ್ಹವಾಗಿದೆ.
ಕೋಲ್ಕತ್ತಾ ಈ ಸೀಸನ್‌ನಲ್ಲಿ ಹೈದರಾಬಾದ್ ವಿರುದ್ಧ ಎರಡು ಪಂದ್ಯಗಳನ್ನು ಆಡಿದ್ದು, ಒಂದು ಲೀಗ್ ಪಂದ್ಯ ಮತ್ತು ಇನ್ನೊಂದು ಕ್ವಾಲಿಫೈಯರ್ ಪಂದ್ಯವಾಗಿತ್ತು. ಈ ಎರಡೂ ಪಂದ್ಯಗಳಲ್ಲಿ ಕೆಕೆಆರ್ ಜಯ ಸಾಧಿಸಿತ್ತು.
ಈ ಸೋಲುಗಳಿಗೆ ಸೇಡು ತೀರಿಸಿಕೊಳ್ಳುವ ಗುರಿಯೊಂದಿಗೆ ಹೈದರಾಬಾದ್ ಕಣಕ್ಕೆ ಇಳಿಯುತ್ತಿದೆ. ಆದರೆ ಒಂದು ವೇಳೆ ಮಳೆಯಿಂದಾಗಿ ಫೈನಲ್ ಪಂದ್ಯ ರದ್ದಾದರೆ ಗೆಲುವು ಕೆಕೆಆರ್ ತಂಡದ ಪಾಲಾಗಲಿದೆ. ಏಕೆಂದರೆ ಐಪಿಎಲ್ 2024ರ ಅಂಕಪಟ್ಟಿಯಲ್ಲಿ ಕೋಲ್ಕತ್ತಾ ಅಗ್ರಸ್ಥಾನದಲ್ಲಿದೆ.
ಫೈನಲ್ ಆಡದೇ ಕೆಕೆಆರ್ ತಂಡ ಟ್ರೋಫಿ ಗೆಲ್ಲುವ ಸಾಧ್ಯತೆ ಇದೆ. ಕೋಲ್ಕತ್ತಾ ಅಂಕಪಟ್ಟಿಯಲ್ಲಿ ಮೇಲುಗೈ ಸಾಧಿಸಿ ಟ್ರೋಫಿಯನ್ನು ಮುಡಿಗೇರಿಸಿಕೊಳ್ಳಲಿದೆ. ಮಳೆಯಿಂದಾಗಿ ಪಂದ್ಯ ರದ್ದುಗೊಂಡರೆ ಕೆಕೆಆರ್‌ಗೆ ಇದು ಮೂರನೇ ಟ್ರೋಫಿಯಾಗಿದೆ.
ಚೆನ್ನೈ ಹವಾಮಾನದ ಕುರಿತು ಮಾತನಾಡುವುದಾದರೆ, ಮೇ 26 ರಂದು ಚೆನ್ನೈನಲ್ಲಿ ಮೋಡ ಕವಿದ ವಾತಾವರಣ ಇರುತ್ತದೆ. ಕನಿಷ್ಠ ತಾಪಮಾನ 29 ಡಿಗ್ರಿ ಮತ್ತು ಗರಿಷ್ಠ ತಾಪಮಾನ 37 ಡಿಗ್ರಿ. ಹೀಗಾಗಿ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.