ಈ ದಿನ ನಡೆಯಲಿದೆ ಕೆಎಲ್ ರಾಹುಲ್ ಮತ್ತು ಅತಿಯಾ ಮದುವೆ.!

Thu, 01 Dec 2022-9:24 am,

ಶ್ರೀಲಂಕಾ ವಿರುದ್ಧ ತವರಿನಲ್ಲಿ ನಡೆಯಲಿರುವ ಮೂರು ಪಂದ್ಯಗಳ ಟಿ20 ಹಾಗೂ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾದ ಉಪನಾಯಕ ಕೆಎಲ್ ರಾಹುಲ್ ಆಡುತ್ತಿಲ್ಲ. ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯ ನಂತರ ರಾಹುಲ್ ಬಿಸಿಸಿಐನಿಂದ 'ಮಿನಿ ಬ್ರೇಕ್' ಕೋರಿದ್ದಾರೆ ಎಂದು ಹೇಳಲಾಗಿದೆ. 

ವರದಿ ಪ್ರಕಾರ, KL ರಾಹುಲ್ ಜನವರಿ-2023 ರ ಮೊದಲ ವಾರದಲ್ಲಿ ಅತಿ ಯಾ ಶೆಟ್ಟಿಯನ್ನು ಮದುವೆಯಾಗಲಿದ್ದಾರೆ. ಅಥಿಯಾ ಬಾಲಿವುಡ್ ನಟ ಸುನೀಲ್ ಶೆಟ್ಟಿ ಅವರ ಪುತ್ರಿ. 

ರಾಹುಲ್ ವಿರಾಮ ಕೇಳಿರುವ ವಿಚಾರವನ್ನು ಬಿಸಿಸಿಐ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ. ಕೆಎಲ್ ಕೆಲವು ವೈಯಕ್ತಿಕ ಕಾರಣಗಳಿಂದಾಗಿ ವಿಶ್ರಾಂತಿ ಬಯಸಿದ್ದಾರೆ. ಈ ಕಾರಣದಿಂದಾಗಿ ಅವರು ನ್ಯೂಜಿಲೆಂಡ್‌ ಗೆ ತೆರಳುವುದು ಸಾಧ್ಯವಾಗಲಿಲ್ಲ ಎಂದಿದ್ದಾರೆ.

ಮಗಳು ಆತಿಯಾ ಶೆಟ್ಟಿಯೊಂದಿಗೆ ಕೆಎಲ್ ರಾಹುಲ್ ಅವರ ವಿವಾಹದ ವದಂತಿಗಳನ್ನು ಆತಿಯಾ ತಂದೆ ಸುನಿಲ್ ಶೆಟ್ಟಿ ಖಚಿತಪಡಿಸಿದ್ದಾರೆ. ಇಬ್ಬರೂ 2018 ರಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ. ಸಮಯ  ಬಂದಾಗ ಮದುವೆ ವಿಚಾರ ಎಲ್ಲರಿಗೂ ತಿಳಿಯುತ್ತದೆ ಎಂದು ಸುನೀಲ್ ಶೆಟ್ಟಿ ಹೇಳಿದ್ದರು.

ಇನ್ನು ನಾಯಕ ಹಾಗೂ ಆರಂಭಿಕ ಆಟಗಾರ ರೋಹಿತ್ ಶರ್ಮಾ ಕೂಡ ಟಿ20 ಸರಣಿಯಿಂದ ವಿರಾಮ ತೆಗೆದುಕೊಳ್ಳುವ ನಿರೀಕ್ಷೆಯಿದೆ. ಹೀಗಿರುವಾಗ ಟಿ20 ಸರಣಿಯಲ್ಲಿ ಟೀಂ ಇಂಡಿಯಾ ನಾಯಕತ್ವವನ್ನು ಹಾರ್ದಿಕ್ ಪಾಂಡ್ಯ ವಹಿಸಿಕೊಳ್ಳಲಿದ್ದಾರೆ ಎಂಬ ಮಾತು ಕೇಳಿ ಬಂದಿದೆ. ಶ್ರೀಲಂಕಾ ವಿರುದ್ಧದ ಸರಣಿಯ ವೇಳಾಪಟ್ಟಿ ಇನ್ನೂ ಪ್ರಕಟವಾಗಿಲ್ಲ. ಜನವರಿ ಮೊದಲ ವಾರದಲ್ಲಿ ಈ ಸರಣಿ ನಡೆಯುವ ಸಾಧ್ಯತೆ ಇದೆ.

ರಾಹುಲ್-ಅತಿಯಾ ಅನೇಕ  ಕಡೆಗಳಲ್ಲಿ  ಜೊತೆಯಾಗಿ  ಕಾಣಿಸಿಕೊಂಡಿದ್ದಾರೆ.  ಇತ್ತೀಚೆಗಷ್ಟೇ ರಾಹುಲ್ ಸರ್ಜರಿಗಾಗಿ ವಿದೇಶಕ್ಕೆ ಹೋದಾಗಲೂ ಅತಿಯಾ  ಜೊತೆಗಿದ್ದರು. ಐಪಿಎಲ್ ವೇಳೆಯೂ ಇವರಿಬ್ಬರ ಚಿತ್ರಗಳು ವೈರಲ್ ಆಗಿದ್ದವು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link