ಬಿಗ್‌ ಬಾಸ್‌‌ ಸೀಸನ್‌ 11 ಗೆ ಇವರೆಲ್ಲ ಹೋಗೋದು ಪಕ್ಕಾ ಅಂತೆ.. ಅನೌನ್ಸ್‌ಮೆಂಟ್ ಒಂದೇ ಬಾಕಿ!?

Sat, 28 Sep 2024-1:31 pm,

ಬೃಂದಾವನ ಸೀರಿಯಲ್‌ ಮೂಲಕ ಹೆಸರು ಗಳಿಸಿದ ನಟ ವರುಣ್ ಆರಾಧ್ಯಾ ಬಿಗ್‌ ಬಾಸ್‌ಗೆ ಬರಬಹುದು ಎಂದು ಹೇಳಲಾಗುತ್ತಿದೆ. 

ಪದ್ಮಾವತಿ ಧಾರಾವಾಹಿಯಲ್ಲಿ ನಟಿಸಿ ಫೇಮಸ್ ಆದ ನಟ ತ್ರಿವಿಕ್ರಮ್ ಬಿಗ್ ಬಾಸ್ ಮನೆಗೆ ಬರ್ತಾರೆ ಎನ್ನಲಾಗುತ್ತಿದೆ. 

ಲಕ್ಷ್ಮೀ ಬಾರಮ್ಮ ಸೀರಿಯಲ್‌ನ ಕೀರ್ತಿ ಪಾತ್ರದಿಂದ ಫೇಮಸ್‌ ಆದ ನಟಿ ತನ್ವಿ ರಾವ್‌ ಈ ಬಾರಿ ಬಿಗ್‌ ಬಾಸ್‌ಗೆ ಬರಬಹುದು ಎನ್ನುತ್ತಿದ್ದಾರೆ ನೆಟ್ಟಿಗರು.

ಕಿರುತೆರೆ ನಟಿ ಸುಕೃತಾ ನಾಗ್ ಬಿಗ್‌ಬಾಸ್‌ಗೆ ತೆರಳಲಿದ್ದಾರೆ ಎಂದು ಹೇಳಲಾಗುತ್ತಿದೆ.

ಗೀತಾ ಧಾರಾವಾಹಿ ವಿಲನ್ ಪಾತ್ರಧಾರಿ ಶರ್ಮಿತಾ ಗೌಡ ಈ ಬಾರಿಯ ಬಿಗ್ ಬಾಸ್‌ ನಲ್ಲಿ ಇರಲಿದ್ದಾರೆ ಎಂದು ಹೇಳಲಾಗುತ್ತಿದೆ.

ಅಮೃತಧಾರೆ ಸೀರಿಯಲ್‌ ಮೂಲಕ ಖ್ಯಾತರಾದ ಮಹಿಮಾ ಪಾತ್ರಧಾರಿ ಸಾರಾ ಅಣ್ಣಯ್ಯ ಬಿಗ್‌ ಬಾಸ್‌ ಕನ್ನಡ ಸೀಸನ್‌11 ಗೆ ಬರ್ತಿದ್ದಾರೆ ಎನ್ನಲಾಗ್ತಿದೆ. 

ಗಿಚ್ಚಿ ಗಿಲಿಗಿಲಿ ಶೋ ಮೂಲಕ ಫೇಮಸ್‌ ಆದ ರಾಘವೇಂದ್ರ ಗೌಡ ಸಹ ಬಿಗ್‌ಬಾಸ್‌ ಮನೆಗೆ ಬರಲಿದ್ದಾರೆ ಎನ್ನಲಾಗಿದೆ.

ಕನ್ನಡದ ಖ್ಯಾತ ನಿರ್ದೇಶಕ ಎಸ್​. ನಾರಾಯಣ್ ಪುತ್ರ ಪಂಕಜ್ ನಾರಾಯಣ್ ಕೂಡ ಬಿಗ್ ಬಾಸ್‌ ಕನ್ನಡ ಸೀಸನ್‌ 11 ಗೆ ಬರಬಹುದು ಎನ್ನಲಾಗಿದೆ. 

ಮೋಕ್ಷಿತಾ ಪೈ ಕೂಡ ಕಿರುತೆರೆ ಮೂಲಕವೇ ಫೇಮಸ್‌ ಆದವರು. ಪಾರು ಧಾರಾವಾಹಿ ಮೂಲಕ ಗಮನ ಸೆಳೆದಿದ್ದಾರೆ. ಈ ಬಾರಿ ಬಿಗ್ ಬಾಸ್‌ ನಲ್ಲಿ ಇರಲಿದ್ದಾರೆ ಎಂದು ಹೇಳಲಾಗುತ್ತಿದೆ.

ತುಕಾಲಿ ಸಂತೋಷ ಪತ್ನಿ ಮಾನಸ ಈ ಬಾರಿ ಬಿಗ್‌ ಬಾಸ್‌ ಮನೆಗೆ ಬರ್ತಿದ್ದಾರೆ ಎಂಬ ಟಾಕ್‌ ಹೆಚ್ಚು ವೈರಲ್‌ ಆಗಿದೆ. 

ಗಿಚ್ಚಿ ಗಿಲಿ ಗಿಲಿ 3 ವಿನ್ನರ್‌ ಹುಲಿ ಕಾರ್ತಿಕ್‌ಈ ಬಾರಿ ಬಿಗ್‌ ಬಾಸ್‌ ಕನ್ನಡ ಸೀಸನ್‌11 ಗೆ ಬರ್ತಿದ್ದಾರೆ ಎನ್ನಲಾಗ್ತಿದೆ. 

ಸೋಷಿಯಲ್ ಮೀಡಿಯಾದಲ್ಲಿ ಹವಾ ಎಬ್ಬಿಸಿದ ಯೂಟ್ಯೂಬ್ ಸ್ಟಾರ್ ಗೌರವ್ ಶೆಟ್ಟಿ ಬಿಗ್ ಬಾಸ್ ಮನೆಗೆ ಬರ್ತಾರೆ ಎನ್ನಲಾಗುತ್ತಿದೆ. 

ಸತ್ಯ ಧಾರಾವಾಹಿಯಲ್ಲಿ ರೆಬೆಲ್‌ ಆಕ್ಟಿಂಗ್‌ನಿಂದ ಜನರ ಮನಗೆದ್ದಿರುವ ನಟಿ ಗೌತಮಿ ಜಾಧವ್ ಬಿಗ್ ಬಾಸ್‌ ಮನೆಯಲ್ಲಿ ಇರಲಿದ್ದಾರೆ ಎನ್ನಲಾಗಿದೆ. 

ಕನ್ನಡದ ಪ್ರಸಿದ್ಧ ನಟ ಕೀರ್ತಿರಾಜ್ ಅವರ ಪುತ್ರ ಧರ್ಮ ಕೀರ್ತಿರಾಜ್ ನವಗ್ರಹ ಸಿನಿಮಾದಿಂದ ಫೇಮಸ್‌ ಆದವರು. ಈ ಬಾರಿ ಬಿಗ್‌ ಬಾಸ್‌ ಮನೆಗೆ ಬರಲಿದ್ದಾರೆ ಎನ್ನಲಾಗುತ್ತಿದೆ.  

ಗಿಚ್ಚಿ ಗಿಲಿ ಗಿಲಿ 2 ವಿನ್ನರ್‌ ಚಂದ್ರಪ್ರಭಾ ಬಿಗ್ ಬಾಸ್ ರಿಯಾಲಿಟಿ ಶೋಗೆ ಅವಕಾಶ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link