Unemployment Allowance: ನಿರುದ್ಯೋಗಿಗಳಿಗೆ ಸರ್ಕಾರದಿಂದ ಸಿಗುತ್ತೆ 50% ವೇತನ, ಈ ರೀತಿ ಪ್ರಯೋಜನ ಪಡೆಯಿರಿ

Thu, 16 Sep 2021-10:50 am,

Unemployment Allowance: Govt giving 50% of salary to unemployed:- Unemployment Allowance (ನಿರುದ್ಯೋಗ ಭತ್ಯೆ): ಕರೋನಾ ಅವಧಿಯಲ್ಲಿ, ಅಸಂಖ್ಯಾತ ಜನರು ಉದ್ಯೋಗ ಕಳೆದುಕೊಂಡು ನಿರುದ್ಯೋಗಿಗಳಾಗಿದ್ದಾರೆ. ಅಂತಹವರಿಗೆ ಅನುಕೂಲವಾಗಲೆಂದು ನಿರುದ್ಯೋಗ ಭತ್ಯೆಯನ್ನು ನೀಡಲು ಸರ್ಕಾರದಿಂದ ವ್ಯವಸ್ಥೆ ಮಾಡಲಾಗಿದೆ. ನಿರುದ್ಯೋಗಿಗಳಿಗೆ ಭತ್ಯೆ ನೀಡಲು ಸರ್ಕಾರವು 'ಅಟಲ್ ಬಿಮಿತ್ ವ್ಯಕ್ತಿ ಕಲ್ಯಾಣ ಯೋಜನೆ' ಎಂಬ ಯೋಜನೆಯನ್ನು ಆರಂಭಿಸಿದೆ. ಈ ಯೋಜನೆಯಡಿ 50 ಸಾವಿರಕ್ಕೂ ಹೆಚ್ಚು ಜನರು ಪ್ರಯೋಜನ ಪಡೆದಿದ್ದಾರೆ. ಈ ಯೋಜನೆಯನ್ನು ನೌಕರರ ರಾಜ್ಯ ವಿಮಾ ನಿಗಮ (ESIC) ನಡೆಸುತ್ತದೆ. ಕರೋನಾ ಸಾಂಕ್ರಾಮಿಕದ ದೃಷ್ಟಿಯಿಂದ, ಸರ್ಕಾರವು 'ಅಟಲ್ ಬಿಮಿತ್ ವ್ಯಕ್ತಿ ಕಲ್ಯಾಣ ಯೋಜನೆ' (Atal Bimit Vyakti Kalyan Scheme) ಅನ್ನು 30 ಜೂನ್ 2022 ರವರೆಗೆ ವಿಸ್ತರಿಸಿದೆ. ಮೊದಲು ಈ ಯೋಜನೆ 30 ಜೂನ್ 2021 ರವರೆಗೆ ಮಾತ್ರ ಇತ್ತು.

What is Atal Bimit Vyakti Kalyan Scheme? ಅಟಲ್ ಬಿಮಿತ್ ವ್ಯಕ್ತಿ ಕಲ್ಯಾಣ ಯೋಜನೆಯಡಿ (Atal Bimit Vyakti Kalyan Scheme), ನಿರುದ್ಯೋಗಿಗಳಿಗೆ ಉದ್ಯೋಗ ನಷ್ಟದ ಸಂದರ್ಭದಲ್ಲಿ ಹಣಕಾಸಿನ ಸಹಾಯಕ್ಕಾಗಿ ಭತ್ಯೆಯನ್ನು ನೀಡಲಾಗುತ್ತದೆ. ನಿರುದ್ಯೋಗಿ ವ್ಯಕ್ತಿಯು 3 ತಿಂಗಳ ಕಾಲ ಈ ಭತ್ಯೆಯನ್ನು ಪಡೆಯಬಹುದು. 3 ತಿಂಗಳವರೆಗೆ ಅವನು ಸರಾಸರಿ ಸಂಬಳದ 50% ಕ್ಲೇಮ್ ಮಾಡಬಹುದು. ನಿರುದ್ಯೋಗಿಯಾದ 30 ದಿನಗಳ ನಂತರ, ಈ ಯೋಜನೆಗೆ ಸೇರುವ ಮೂಲಕ ನಿರುದ್ಯೋಗಿ ವ್ಯಕ್ತಿಯು ಇದರ ಪ್ರಯೋಜನವನ್ನು ಪಡೆಯಬಹುದು.

How to take advantage of the scheme:- ಈ ಯೋಜನೆಯ ಲಾಭ ಪಡೆಯಲು, ESIC ಗೆ ಸಂಬಂಧಿಸಿದ ಉದ್ಯೋಗಿಗಳು ESIC ಯ ಯಾವುದೇ ಶಾಖೆಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಇದರ ನಂತರ ಅರ್ಜಿಯನ್ನು ಇಎಸ್‌ಐಸಿ ದೃಢೀಕರಿಸುತ್ತದೆ ಮತ್ತು ನೀವು ಒದಗಿಸಿರುವ ಮಾಹಿತಿ ಮತ್ತು ದಾಖಲೆಗಳು ಸರಿಯಾಗಿದ್ದರೆ, ಮೊತ್ತವನ್ನು ಸಂಬಂಧಪಟ್ಟ ಉದ್ಯೋಗಿಯ ಖಾತೆಗೆ ನಿರುದ್ಯೋಗ ಭತ್ಯೆ (Unemployment Allowance) ಕಳುಹಿಸಲಾಗುತ್ತದೆ.

ಇದನ್ನೂ ಓದಿ- ಅಕ್ಟೋಬರ್ 1 ರಿಂದ ಪ್ರಯೋಜನಕ್ಕಿಲ್ಲ ಹಳೆಯ ಚೆಕ್ ಬುಕ್ , ಈ ಬ್ಯಾಂಕ್ ಗಳಲ್ಲಿ ಖಾತೆ ಹೊಂದಿದ್ದರೆ ತಕ್ಷಣ ಬ್ಯಾಂಕ್ ಅನ್ನು ಸಂಪರ್ಕಿಸಿ

Who can avail the scheme? >> ಖಾಸಗಿ ವಲಯದಲ್ಲಿ (ಸಂಘಟಿತ ವಲಯ) ಕೆಲಸ ಮಾಡುವ ಸಂಬಳದ ಜನರು ನಿರುದ್ಯೋಗಿಗಳಾದಾಗ ಈ ಯೋಜನೆಯ ಲಾಭಗಳನ್ನು ಪಡೆಯಬಹುದು. ಆದರೆ ನೆನಪಿಡಿ ಅವರ ಕಂಪನಿ ಪ್ರತಿ ತಿಂಗಳು PF / ESI ವೇತನವನ್ನು ಕಡಿತಗೊಳಿಸುತ್ತಿರಬೇಕು. >> ಖಾಸಗಿ ಕಂಪನಿಗಳು ಮತ್ತು ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಇಎಸ್‌ಐ ಲಾಭ ಲಭ್ಯವಿದೆ. ಇದಕ್ಕಾಗಿ ಇಎಸ್‌ಐ ಕಾರ್ಡ್ ತಯಾರಿಸಲಾಗುತ್ತದೆ. >> ಉದ್ಯೋಗಿಗಳು ಈ ಕಾರ್ಡ್ ಅಥವಾ ಕಂಪನಿಯಿಂದ ತಂದ ಡಾಕ್ಯುಮೆಂಟ್ ಆಧಾರದ ಮೇಲೆ ಯೋಜನೆಯ ಲಾಭವನ್ನು ಪಡೆಯಬಹುದು. ಮಾಸಿಕ ಆದಾಯ 21 ಸಾವಿರ ರೂಪಾಯಿ ಅಥವಾ ಅದಕ್ಕಿಂತ ಕಡಿಮೆ ಇರುವ ಉದ್ಯೋಗಿಗಳಿಗೆ ಇಎಸ್‌ಐ ಲಾಭ ಲಭ್ಯವಿದೆ.

ಇದನ್ನೂ ಓದಿ- ಈ ಯೋಜನೆಯಲ್ಲಿ 417 ರೂ. ಹೂಡಿದರೆ ಸಾಕು , ಪೋಸ್ಟ್ ಆಫೀಸ್ ನೀಡುತ್ತಿದೆ ಕೋಟ್ಯಾಧಿಪತಿಯಾಗುವ ಅವಕಾಶ..!

How to register in Atal Bimit Vyakti Kalyan Scheme:-

* ಯೋಜನೆಯ ಲಾಭ ಪಡೆಯಲು, ನೀವು ಮೊದಲು ಇಎಸ್‌ಐಸಿ ವೆಬ್‌ಸೈಟ್‌ನಲ್ಲಿ ಅಟಲ್ ಬಿಮಿತ್ ವ್ಯಕ್ತಿ ಕಲ್ಯಾಣ ಯೋಜನೆಯ ಫಾರ್ಮ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು. * https://www.esic.nic.in/attachments/circularfile/93e904d2e3084d65fdf7793… ನೇರ ಲಿಂಕ್ ಇಲ್ಲಿದೆ. ಇಲ್ಲಿ ಭೇಟಿ ನೀಡುವ ಮೂಲಕ ನೀವು ಅರ್ಜಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. * ಬಳಿಕ ಅರ್ಜಿಯನ್ನು ಭರ್ತಿ ಮಾಡಿ ಮತ್ತು ಅದನ್ನು ನೌಕರರ ರಾಜ್ಯ ವಿಮಾ ನಿಗಮದ (ESIC) ಹತ್ತಿರದ ಶಾಖೆಗೆ ಸಲ್ಲಿಸಿ. * ಅದರ ನಂತರ, ನಮೂನೆಯೊಂದಿಗೆ ರೂ. 20 ರ ನ್ಯಾಯಾಂಗೇತರ ಸ್ಟಾಂಪ್ ಪೇಪರ್ ಮೇಲೆ ನೋಟರಿಯ ಪ್ರಮಾಣ ಪತ್ರ ಇರುತ್ತದೆ. * ಇದರಲ್ಲಿ, AB-1 ರಿಂದ AB-4 ನಮೂನೆಗಳನ್ನು ಸಲ್ಲಿಸಲಾಗುತ್ತದೆ. * ಆದರೆ ಗಮನಿಸಿ, ಯಾವುದೇ ವ್ಯಕ್ತಿಯು ತಪ್ಪು ನಡವಳಿಕೆಯಿಂದಾಗಿ ತಮ್ಮ ಕೆಲಸವನ್ನು ಕಳೆದುಕೊಂಡಿದ್ದರೆ ಅಂತಹವರಿಗೆ ಇದರಿಂದ ಯಾವುದೇ ಪ್ರಯೋಜನ ಲಭ್ಯವಿರುವುದಿಲ್ಲ. * ಅಂದರೆ ತಮ್ಮ ತಪ್ಪು ನಡವಳಿಕೆಯಿಂದ ಕಂಪನಿಯಿಂದ ವಜಾಗೊಂಡವರಿಗೆ ಯೋಜನೆಯ ಲಾಭ ಸಿಗುವುದಿಲ್ಲ. ಇದಲ್ಲದೇ, ಕ್ರಿಮಿನಲ್ ಕೇಸ್ ದಾಖಲಿಸಿರುವ ಅಥವಾ ಸ್ವಯಂ ನಿವೃತ್ತಿ (ವಿಆರ್ ಎಸ್) ತೆಗೆದುಕೊಂಡ ಉದ್ಯೋಗಿಗಳು ಕೂಡ ಈ ಯೋಜನೆಯ ಲಾಭ ಪಡೆಯಲು ಸಾಧ್ಯವಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link