Coronavirus: ಶಾಕಿಂಗ್! ನಿಮ್ಮ ತೂಕದಿಂದಲೂ ಕರೋನ ಅಪಾಯ
ಕರೋನಾ ಸಾಂಕ್ರಾಮಿಕ ರೋಗವು ಪ್ರಪಂಚದಾದ್ಯಂತ ಹಾನಿಯನ್ನುಂಟುಮಾಡಿದೆ. ಇಡೀ ವಿಶ್ವದಾದ್ಯಂತ ಸಾಂಕ್ರಾಮಿಕಕ್ಕೆ ಲಕ್ಷಾಂತರ ಮಂದಿ ಬಲಿಯಾಗಿದ್ದಾರೆ. ಕೋಟ್ಯಾಂತರ ಜನರು ಕರೋನಾ ಸೋಂಕಿಗೆ ಒಳಗಾಗಿದ್ದಾರೆ ಎಂಬ ವರದಿಗಳಿವೆ. ಏತನ್ಮಧ್ಯೆ, ಕರೋನಾ ಸೋಂಕಿನಿಂದ ಚೇತರಿಸಿಕೊಳ್ಳುವ ಮೂಲಕ ಲಕ್ಷಾಂತರ ಜನರು ಮೊದಲಿನಂತೆ ಜೀವನವನ್ನು ನಡೆಸುತ್ತಿದ್ದಾರೆ. ಆದರೆ ಕರೋನಾವೈರಸ್ ಸೋಂಕಿಗೂ ನಿಮ್ಮ ದೇಹದ ತೂಕಕ್ಕೂ ಸಂಬಂಧವಿದೆ ಎಂದು ನಿಮಗೆ ತಿಳಿದಿದೆಯೇ?
ನಿಮ್ಮ ದೇಹದ ತೂಕವು (Weight) ಕರೋನಾ ಸಾಂಕ್ರಾಮಿಕಕ್ಕೆ ನೇರವಾಗಿ ಸಂಬಂಧಿಸಿದೆ ಎಂದು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ತಜ್ಞರು ಹೇಳಿದ್ದಾರೆ. ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ವಿಜ್ಞಾನಿಗಳು 15 ಸಾವಿರಕ್ಕೂ ಹೆಚ್ಚು ಜನರ ಮೇಲೆ ಈ ಸಂಶೋಧನೆಯನ್ನು ನಡೆಸಿದ್ದು ನಿಮ್ಮ ದೇಹದ ತೂಕವು ಪ್ರಮಾಣಕ್ಕಿಂತ ಹೆಚ್ಚಿದ್ದರೆ, ಕರೋನಾ ಸೋಂಕಿನ ಸಂದರ್ಭದಲ್ಲಿ ನೀವು ತೀವ್ರವಾಗಿ ಅನಾರೋಗ್ಯಕ್ಕೆ ಒಳಗಾಗುವ ಅಪಾಯ ಹೆಚ್ಚಿದೆ ಎಂದು ಕಂಡು ಹಿಡಿದಿದೆ.
ಡೈಲಿಮೇಲ್ನ ಸುದ್ದಿಯ ಪ್ರಕಾರ, ವಿಜ್ಞಾನಿಗಳು ದೇಹದ ದ್ರವ್ಯರಾಶಿ ಸೂಚ್ಯಂಕ ಅಂದರೆ ಬಿಎಂಐ 23 ಅಂಕಗಳಿಗಿಂತ ಹೆಚ್ಚಿದ್ದರೆ, ಕರೋನಾ (Coronavirus) ಸೋಂಕಿನ ಸಂದರ್ಭದಲ್ಲಿ ತೀವ್ರವಾಗಿ ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿರುವ ನಿದರ್ಶನಗಳ ಬಗ್ಗೆ ವಿಜ್ಞಾನಿಗಳು ಉಲ್ಲೇಖಿಸಿದ್ದಾರೆ. ಅಂತಹ ಜನರ ಸಾವಿನ ಸಂಖ್ಯೆಯೂ ಹೆಚ್ಚು ಎಂದು ಸಂಶೋಧನೆಯಿಂದ ತಿಳಿದುಬಂದಿದೆ. ವಿಜ್ಞಾನಿಗಳು ಬಿಎಂಐ 23 ಕ್ಕಿಂತ ಪ್ರತಿ ಅಂಕೆಯೂ 5% ಹೆಚ್ಚಿನ ಅಪಾಯವನ್ನು ಹೊಂದಿರುವುದಾಗಿ ಅವರು ತಿಳಿಸಿದ್ದಾರೆ. ಆದಾಗ್ಯೂ, ಯುವಕರಲ್ಲಿ ಅಪಾಯವು ಹೆಚ್ಚು ಮತ್ತು 20-39 ವರ್ಷ ವಯಸ್ಸಿನವರಲ್ಲಿ, ಪ್ರತಿ ಅಂಕೆಗೂ ಶೇಕಡಾ 9 ರಷ್ಟು ಹೆಚ್ಚಿನ ಅಪಾಯ ಕಂಡುಬಂದಿದೆ ಎನ್ನಲಾಗಿದೆ.
ಇದನ್ನೂ ಓದಿ - CT-Scan To Detect Corona Is Dangerous - 'ಕೊರೊನಾ ವೈರಸ್ ಪತ್ತೆಗಾಗಿ CT-Scan ನಡೆಸುವುದು ತುಂಬಾ ಅಪಾಯಕಾರಿ'
ಬಾಡಿ ಮಾಸ್ ಇಂಡೆಕ್ಸ್ (ಬಿಎಂಐ) ನಿಮ್ಮ ದೇಹದ ತೂಕವು ನಿಮ್ಮ ಉದ್ದಕ್ಕೆ ಅನುಗುಣವಾಗಿ ಸರಿಯಾಗಿದೆಯೆ ಅಥವಾ ಇಲ್ಲವೇ ಎಂದು ಹೇಳುತ್ತದೆ. ಒಂದು ರೀತಿಯಲ್ಲಿ, ಇದನ್ನು ನಿಮ್ಮ ದೇಹದ ಉದ್ದ ಮತ್ತು ತೂಕದ ಅನುಪಾತ ಎಂದು ಕರೆಯಬಹುದು. ಸಾಮಾನ್ಯ ದೇಹದ ಬಿಎಂಐ 22.1 ಕ್ಕಿಂತ ಹೆಚ್ಚಿರಬಾರದು ಎಂದು ಹೇಳಲಾಗುತ್ತದೆ. ಈ ಸಂದರ್ಭದಲ್ಲಿ, ನಿಮ್ಮ ಬಿಎಂಐ ಸೂಚ್ಯಂಕ 23 ಕ್ಕಿಂತ ಹೆಚ್ಚಿದ್ದರೆ, ಕರೋನಾ ಸೋಂಕಿಗೆ ಒಳಗಾದ ಸಂದರ್ಭದಲ್ಲಿ ನೀವು ಸಾಕಷ್ಟು ತೊಂದರೆಗೆ ಒಳಗಾಗಬಹುದು ಎಂದು ಸಂಶೋಧನೆ ತಿಳಿಸುತ್ತದೆ.
ಇದನ್ನೂ ಓದಿ - Oxygen Shortage : ರಾಜ್ಯದಲ್ಲಿ ಆಕ್ಸಿಜನ್ ಕೊರತೆಯಿಂದ ಮತ್ತೆ 4 ರೋಗಿಗಳು ಸಾವು!
ನಿಮ್ಮ ಎತ್ತರ ಮತ್ತು ತೂಕದ ಆಧಾರದ ಮೇಲೆ ನಿಮ್ಮ BMI ಸೂಚ್ಯಂಕವು 18.5 ಕ್ಕಿಂತ ಕಡಿಮೆಯಿದ್ದರೆ, ನಿಮ್ಮ ತೂಕವು ಸಾಮಾನ್ಯಕ್ಕಿಂತ ಕಡಿಮೆಯಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಿ ಮತ್ತು ನೀವು ಅದನ್ನು ಹೆಚ್ಚಿಸಲು ಪ್ರಯತ್ನಿಸಬೇಕು. ನಿಮ್ಮ ಬಿಎಂಐ ಮಟ್ಟವು 18.5 ರಿಂದ 24.9 ರ ನಡುವೆ ಇದ್ದರೆ ಇದು ಸೂಕ್ತ ಪರಿಸ್ಥಿತಿ. ಈ ಪರಿಸ್ಥಿತಿಯಲ್ಲಿ ನಿಮ್ಮ ತೂಕವು ಸಂಪೂರ್ಣವಾಗಿ ಹೊಂದಿಕೊಳ್ಳುತ್ತದೆ ಮತ್ತು ಅದನ್ನು ನಿರ್ವಹಿಸುವುದು ನಿಮಗೆ ಮುಖ್ಯವಾಗಿದೆ. ಅದೇ ಸಮಯದಲ್ಲಿ, ಬಿಎಂಐ ಮಟ್ಟವು 25 ಅಥವಾ ಅದಕ್ಕಿಂತ ಹೆಚ್ಚಿನದಾಗಿದ್ದರೆ, ನೀವು ಜಾಗರೂಕರಾಗಿರಬೇಕು.