ನವದೆಹಲಿ: CT-Scan To Detect Corona Is Dangerous - ಹೆಚ್ಚಾಗುತ್ತಿರುವ ಕೊರೊನಾ ಪ್ರಕರಣಗಳ ನಡುವೆಯೇ ಹೆಚ್ಚಿನ ಸಂಖ್ಯೆಯ ಜನರು CT-Scanಗೆ ಒಳಗಾಗುತ್ತಿದ್ದಾರೆ. ಹಲವು ಜನರಲ್ಲಿ ಕೊವಿಡ್ (Covid-19) ಲಕ್ಷಣಗಳು ಕಂಡುಬಂದರೂ ಕೂಡ ಅವರ ಟೆಸ್ಟ್ ವರದಿ ನಕಾರಾತ್ಮಕ ಹೊರಬರುತ್ತಿದೆ. ಈ ಹಿನ್ನಲೆ ವೈದ್ಯರೂ ಕೂಡ ಅವರಿಗೆ CT-Scan ಮಾಡಿಸಲು ಸಲಹೆ ನೀಡುತ್ತಿದ್ದಾರೆ. ಆದರೆ ಈ ಕುರಿತು ಹೇಳಿಕೆ ನೀಡಿರುವ AIIMS ನಿರ್ದೇಶಕ ಡಾ. ರಣದೀಪ್ ಗುಲೇರಿಯಾ , ಕೊರೊನಾದ ಸಣ್ಣ-ಪುಟ್ಟ ಲಕ್ಷಣಗಳಿದ್ದರೆ, CTScan ಮಾಡಿಸುವ ಅವಶ್ಯಕತೆ ಇಲ್ಲ ಎಂದಿದ್ದಾರೆ. ಏಕೆಂದರೆ CT-Scan ಆರೋಗ್ಯಕ್ಕೆ ತುಂಬಾ ಅಪಾಯಕಾರಿ ಸಾಬೀತಾಗುವ ಸಾಧ್ಯತೆ ಇದೆ. ಇದರಿಂದ ಕೊರೊನಾ ಬಳಿಕ ಕ್ಯಾನ್ಸರ್ ಬರುವ ಸಂಭವನೀಯತೆ ಹೆಚ್ಚಾಗುತ್ತದೆ ಎಂದು ಅವರು ಹೇಳಿದ್ದಾರೆ.
CT-Scan ಹಾಗೂ ಬಯೋಮಾರ್ಕರ್ಗಳನ್ನು ತಪ್ಪಾಗಿ ಉಪಯೋಗಿಸಲಾಗುತ್ತಿದೆ ಎಂದು ಡಾ. ಗುಲೇರಿಯಾ (Randeep Guleria) ಹೇಳಿದ್ದಾರೆ. 'ಒಂದು ವೇಳೆ ಕೊರೋನಾದ (Coronavirus) ಮೈಲ್ಡ್ ಲಕ್ಷಣಗಳಿದ್ದರೆ, ಸಿಟಿ ಸ್ಕ್ಯಾನ್ ನಡೆಸುವುದರ ಯಾವುದೇ ಲಾಭ ಇಲ್ಲ. ಒಂದು ಸಿಟಿ ಸ್ಕ್ಯಾನ್ 300 ಎದೆಭಾಗದ X-Rayಗೆ ಸಮನಾಗಿರುತ್ತದೆ ಮತ್ತು ಇದು ತುಂಬಾ ಹಾನಿಕಾರಕವಾಗಿರುತ್ತದೆ' ಎಂದು ಅವರು ಹೇಳಿದ್ದಾರೆ. ಇತೀಚಿನ ದಿನಗಳಲ್ಲಿ ಬಹುತೇಕ ಜನರು CT-Scanಗೆ ಒಳಗಾಗುತ್ತಿದ್ದಾರೆ. CT-Scan ಅವಶ್ಯಕತೆ ಇಲ್ಲ ಎಂದಾದಲ್ಲಿ, ಅದನ್ನು ಮಾಡಿಸಿ ನೀವು ಅನಾವಶ್ಯಕವಾಗಿ ನಿಮಗೆ ಹಾನಿಯನ್ನು ತಲುಪಿಸುತ್ತಿರುವಿರಿ. ಇದರರ್ಥ ಸಿ.ಟಿ ಸ್ಕ್ಯಾನ್ ಮಾಡಿಸಿ ನಿಮ್ಮ ಶರೀರವನ್ನು ವಿಕಿರಣಗಳ ಸಂಪರ್ಕಕಕ್ಕೆ ತಳ್ಳುತ್ತಿರುವಿರಿ ಎಂದರ್ಥ. ಇದರಿಂದ ನಂತರದ ದಿನಗಳಲ್ಲಿ ಕ್ಯಾನ್ಸರ್ ಆಗುವ ಸಂಭವನೀಯತೆ ಹೆಚ್ಚಾಗಿದೆ ಎಂದು ಡಾ. ಗುಲೇರಿಯಾ ಹೇಳಿದ್ದಾರೆ.
ಇದನ್ನೂ ಓದಿ- ಕರೋನಾ ಕಾಲದಲ್ಲಿ ಅಮೃತ ಸಮಾನ ಈ ಅಮೃತ ಬಳ್ಳಿ ಜ್ಯೂಸ್
ಇದಲ್ಲದೆ ಹೋಮ್ ಕ್ವಾರಂಟೀನ್ ನಲ್ಲಿರುವ ಜನರು ಯಾವಾಗಲು ತಮ್ಮ ವೈದ್ಯರ ಸಂಪರ್ಕದಲ್ಲಿರಬೇಕು ಎಂದು ಡಾ. ಗುಲೇರಿಯಾ ಸಲಹೆ ನೀಡಿದ್ದಾರೆ. ಆಕ್ಷಿಜನ್ ಸ್ಯಾಚ್ಯುರೇಶನ್ 93 ಅಥವಾ ಅದಕ್ಕಿಂತ ಕಡಿಮೆ ಇದ್ದರೆ ಮತ್ತು ಎದೆನೋವು ಕಾಣಿಸಿಕೊಂಡರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಎಂದು ಅವರು ಸಲಹೆ ನೀಡಿದ್ದಾರೆ.
ಇದನ್ನೂ ಓದಿ- Fact check : ನಿಂಬೆರಸ ಮೂಗಿಗೆ ಹಾಕುವುದರಿಂದ ಕರೋನಾ ವೈರಸ್ ಸಾಯುತ್ತಾ? ಸತ್ಯಾಸತ್ಯತೆ ತಿಳಿಯಿರಿ
12 ರಾಜ್ಯಗಳಲ್ಲಿ 1 ಲಕ್ಷಕ್ಕೂ ಅಧಿಕ ಸಕ್ರೀಯ ಪ್ರಕರಣಗಳು
ಇನ್ನೊಂದೆಡೆ ಈ ಕುರಿತು ಹೇಳಿಕೆ ನೀಡಿರುವ ಆರೋಗ್ಯ ಸಚಿವಾಲಯದ ಜಂಟಿ ಸಚಿವರಾಗಿರುವ ಲವ್ ಅಗರವಾಲ್, ದೇಶಾದ್ಯಂತ ಇದುವರೆಗೆ ಶೇ.81.77 ರಷ್ಟು ಜನರು ಚೇತರಿಸಿಕೊಂಡಿದಾರೆ. ದೇಶಾದ್ಯಂತ ಸುಮಾರು 34 ಲಕ್ಷ ಸಕ್ರೀಯ ಪ್ರಕರಣಗಳಿವೆ. ಸುಮಾರು 2 ಲಕ್ಷದವರೆಗೆ ಜನರು ಈ ಮಾರಕ ಸೋಂಕಿಗೆ ಪ್ರಾಣ ಕಳೆದುಕೊಂಡಿದ್ದಾರೆ. ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ ಸುಮಾರು 3417 ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ದೇಶದ ಒಟ್ಟು 12 ರಾಜ್ಯಗಳಲ್ಲಿ 1 ಲಕ್ಷಕ್ಕೂ ಅಧಿಕ ಹೊಸ ಪ್ರಕರಣಗಳು ವರದಿಯಾಗುತ್ತಿದ್ದರೆ, 7 ರಾಜ್ಯಗಳಲ್ಲಿ 50 ಸಾವಿರದಿಂದ 1 ಲಕ್ಷದವರೆಗೆ ಸಕ್ರೀಯ ಪ್ರಕರಣಗಗಳಿವೆ ಹಾಗೂ 17 ರಾಷ್ಯಗಳಲಿ 50 ಸಾವಿರಕ್ಕಿಂತಲೂ ಕಡಿಮೆ ಸಕ್ರೀಯ ಪ್ರಕರಣಗಳಿವೆ.
ಇದನ್ನೂ ಓದಿ-ಭಾರತ ಜುಲೈವರೆಗೆ ಕೊರೋನಾ ಲಸಿಕೆ ಕೊರತೆ ಎದುರಿಸಲಿದೆ : ಸೀರಂ ಇನ್ಸ್ಟಿಟ್ಯೂಟ್ ಮುಖ್ಯಸ್ಥ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.