ಮನಮೋಹನ್ ಸಿಂಗ್ ದೇಶದ ಮಾಜಿ ಪ್ರಧಾನಿಯಾಗಿದ್ದರೂ ಅವರ ಮಕ್ಕಳು ದುಡಿಯುತ್ತಿರುವುದು ಈ ಕ್ಷೇತ್ರದಲ್ಲಿ ! ಡಾ.ಸಿಂಗ್ ಪತ್ನಿ ಮತ್ತು ಮಕ್ಕಳು ಇವರೇ ನೋಡಿ !

Fri, 27 Dec 2024-12:00 pm,

ಮನಮೋಹನ್ ಸಿಂಗ್ ಅಂದರೆ ಮಾಜಿ ಪ್ರಧಾನಿ, ಹಣಕಾಸು ಸಚಿವ, ಅರ್ಥ ಶಾಸ್ತ್ರಜ್ಞರಾಗಿ ಎಲ್ಲರಿಗೂ ಪರಿಚಯ. ಇವೆಲ್ಲಾ ಹುದ್ದೆಗಳನ್ನು ನಿಭಾಯಿಸುವುದರ ಜೊತೆಗೆ ಅವರೊಬ್ಬ ಉತ್ತಮ ಫ್ಯಾಮಿಲಿ ಮ್ಯಾನ್ ಕೂಡಾ.    

ಡಾ.ಸಿಂಗ್ ಅವರ ಕುಟುಂಬದೊಂದಿಗೆ ಆಳವಾದ ಸಂಬಂಧ ಹೊಂದಿದ್ದವರು. ಇವರಿಗೆ ಮೂವರು ಹೆಣ್ಣು ಮಕ್ಕಳು. ಮೂವರು ಹೆಣ್ಣುಮಕ್ಕಳು ಕೂಡಾ ತಮ್ಮ ತಮ್ಮ ಕ್ಷೇತ್ರಗಳಲ್ಲಿ ತಮ್ಮದೇ ಆದ  ಛಾಪು ಮೂಡಿಸಿದ್ದಾರೆ. 

ಮನಮೋಹನ್ ಸಿಂಗ್ 1958 ರಲ್ಲಿ, ಇತಿಹಾಸ ಪ್ರಾಧ್ಯಾಪಕಿ, ಬರಹಗಾರ್ತಿ  ಮತ್ತು ಕೀರ್ತನ ಗಾಯಕಿ ಗುರುಶರಣ್ ಕೌರ್  ಅವರನ್ನು ವಿವಾಹವಾದರು. ಇವರ ವಿವಾಹ ಕುಟುಂಬದ ಹಿರಿಯರು ಸೇರಿ ನಿಶ್ಚಯ ಮಾಡಿದರಾದರೂ  ಮೊದಲ ಭೇಟಿಯಲ್ಲೇ ಗುರುಶರಣ್ ಪ್ರೇಮ ಪಾಶಕ್ಕೆ ಬಿದ್ದಿದ್ದರಂತೆ ಡಾ. ಸಿಂಗ್ 

ಮನಮೋಹನ್ ಸಿಂಗ್  ಪುತ್ರಿ ಉಪಿಂದರ್ ಸಿಂಗ್ ಅವರು ಪ್ರಸಿದ್ಧ ಇತಿಹಾಸಕಾರರು. ಅಶೋಕ ವಿಶ್ವವಿದ್ಯಾಲಯದ ಡೀನ್ ಆಫ್ ಫ್ಯಾಕಲ್ಟಿ. ಈ ಹಿಂದೆ ದೆಹಲಿ ವಿಶ್ವವಿದ್ಯಾಲಯದಲ್ಲಿ ಇತಿಹಾಸ ವಿಭಾಗದ ಮುಖ್ಯಸ್ಥೆಯಾಗಿ ಸೇವೆ ಸಲ್ಲಿಸಿದ್ದರು. ಪ್ರಾಚೀನ ಭಾರತೀಯ ಇತಿಹಾಸ, ಪುರಾತತ್ವ  ಶಾಸ್ತ್ರ ಮತ್ತು ರಾಜಕೀಯ ವಿಚಾರಗಳನ್ನು ವ್ಯಾಪಕವಾಗಿ ಸಂಶೋಧನೆ ನಡೆಸಿದ್ದಾರೆ.

ಇನ್ನೋರ್ವ ಪುತ್ರಿ ಅಮೃತ್ ಸಿಂಗ್ ಮಾನವ ಹಕ್ಕುಗಳ ವಕೀಲರು ಮತ್ತು ಸ್ಟ್ಯಾನ್‌ಫೋರ್ಡ್ ಲಾ ಸ್ಕೂಲ್‌ನಲ್ಲಿ ಪ್ರಾಕ್ಟೀಸ್ ಆಫ್ ಲಾ ಪ್ರೊಫೆಸರ್ ಆಗಿದ್ದಾರೆ. ಅವರು ರೂಲ್ ಆಫ್ ಲಾ ಇಂಪ್ಯಾಕ್ಟ್ ಲ್ಯಾಬ್‌ನ ಸಂಸ್ಥಾಪಕ ಕಾರ್ಯನಿರ್ವಾಹಕ ನಿರ್ದೇಶಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. 

ಇನ್ನೊಬ್ಬ ಮಗಳು ದಮನ್ ಸಿಂಗ್ ಬರಹಗಾರರಾಗಿದ್ದು, ವೈಯಕ್ತಿಕ ಮತ್ತು ವಿಶ್ಲೇಷಣಾತ್ಮಕ ಕೃತಿಗಳಿಗೆ ಹೆಸರುವಾಸಿಯಾಗಿದ್ದಾರೆ. ಅವರು ಸ್ಟ್ರಿಕ್ಟ್ಲಿ ಪರ್ಸನಲ್: ಮನಮೋಹನ್ ಮತ್ತು ಗುರುಶರಣ್  ಪುಸ್ತಕದ ಲೇಖಕರಾಗಿದ್ದಾರೆ.  ದಿ ಸೇಕ್ರೆಡ್ ಗ್ರೋವ್ ಮತ್ತು ನೈನ್ ಬೈ ನೈನ್ ಸೇರಿದಂತೆ ಅವರ ಇತರ ಪುಸ್ತಕಗಳು ಕಥೆಗಾರ್ತಿಯಾಗಿ  ಇವರ ಪ್ರತಿಭೆಯನ್ನು ಪ್ರತಿಬಿಂಬಿಸುತ್ತವೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link