ಚಿನ್ನ ಖರೀದಿಯ ಪ್ಲಾನ್ ಇದ್ದರೆ Sovereign Gold Bond ಖರೀದಿಯ ಲಾಭ ತಿಳಿದುಕೊಳ್ಳಿ
Sovereign Gold Bondಗಳಲ್ಲಿ (SGB) ಮಾಡುವ ಹೂಡಿಕೆ ಸುರಕ್ಷಿತ ಮತ್ತು ಉತ್ತಮ ಆದಾಯದ ಒಂದು ಆಯ್ಕೆಯಾಗಿದೆ. ಇದರ ಮೇಲಿನ ಹೂಡಿಕೆಗಾಗಿ, ವಾರ್ಷಿಕ ಶೇಕಡಾ 2.5 ರಷ್ಟು ಬಡ್ಡಿ ಸಿಗಲಿದೆ. ಇದನ್ನು ಪ್ರತಿ ಆರು ತಿಂಗಳಿಗೊಮ್ಮೆ ಪಾವತಿಸಲಾಗುತ್ತದೆ. ಸಾವರಿನ್ ಗೋಲ್ಡ್ ಬಾಂಡ್ ಅವಧಿ ಎಂಟು ವರ್ಷಗಳದ್ದಾಗಿದೆ. ಆದರೆ, ಲಾಕ್-ಇನ್ ಅವಧಿ ಐದು ವರ್ಷಗಳು. ಈ ಬಾಂಡನ್ನು ಮೆಚ್ಯುರಿಟಿವರೆಗೆ ಇಟ್ಟುಕೊಂಡರೆ, ಹೂಡಿಕೆಯ ಮೇಲೆ ಯಾವುದೇ ತೆರಿಗೆ ಪಾವತಿಸಬೇಕಿಲ್ಲ.
ಫಿಸಿಕಲ್ ಚಿನ್ನದ ರೀತಿ ಇದರ ಸೇಫ್ ಸ್ಟೋರೇಜ್ ಬಗ್ಗೆ ತಲೆಕೆಡಿಸಿಕೊಳ್ಳಬೇಕಿಲ್ಲ. ಎಸ್ ಜಿಬಿಯಲ್ಲಿ ಹೂಡಿಕೆ ಮಾಡುವುದು ಅತ್ಯಂತ ಸುರಕ್ಷಿತವಾಗಿದೆ. ಫಿಸಿಕಲ್ ಗೋಲ್ಡ್ ನಲ್ಲಿ ಯಾವತ್ತೂ, ಶುದ್ಧತೆ, ಸೇಫ್ ಲಾಕರ್ ನ ಕೊರತೆಯಂಥಹ ಸಮಸ್ಯೆಗಳು ಇರುವುದಿಲ್ಲ.
ರಿಸರ್ವ್ ಬ್ಯಾಂಕಿನಿಂದ ನೊಟಿಫಿಕೇಶನ್ ತಾರೀಕು ಜಾರಿಯಾದ 15 ದಿನಗಳೊಳಗೆಸ್ಟಾಕ್ ಎಕ್ಸ್ಚೇಂಜರ್ ನಿಂದ ಬಾಂಡ್ ವಿತರಣೆ ಆರಂಭವಾಗುತ್ತದೆ.
ಗೋಲ್ಡ್ ಕಾಯಿನ್, ಗೋಲ್ಡ್ ಬಾರ್ ಖರೀದಿಯಂತೆ ಸಾವರಿನ್ ಗೋಲ್ಡ್ ಬಾಂಡ್ ಖರೀದಿ ಮೇಲೆ ಜಿಎಸ್ ಟಿ ವಿಧಿಸಲಾಗುವುದಿಲ್ಲ. ಫಿಸಿಕಲ್ ಗೋಲ್ಡ್ ಖರೀದಿ ವೇಳೆ, ಖರೀದಿ ಮೇಲೆ 3 ಶೇ ದಷ್ಟು ಜಿಎಸ್ ಟಿ ವಿಧಿಸಲಾಗುತ್ತದೆ. ಸಾವರಿನ್ ಗೋಲ್ಡ್ ಮೇಲೆ ಯಾವುದೇ ಮೇಕಿಂಗ್ ಚಾರ್ಜ್ ನೀಡಬೇಕಾಗಿಲ್ಲ.
ಈ ಬಾಂಡಿನ ಆಧಾರದ ಮೇಲೆ ಸಾಲವನ್ನೂ ಪಡೆಯಬಹುದಾಗಿದೆ. ಇದು ಲೋನ್ ಟು ವ್ಯಾಲ್ಯು ಅನುಪಾತದಲ್ಲಿ ಸಾಮಾನ್ಯ ಲೋನ್ ನಂತೆಯೇ ಇರುತ್ತದೆ. ಸಮಯ ಸಮಯಕ್ಕೆ ಆರ್ ಬಿಐ ನಿಯಮವನ್ನು ಬದಲಿಸುತ್ತಿರುತ್ತದೆ.
2015ರಲ್ಲಿ ಸಾವರಿನ್ ಗೋಲ್ಡ್ ಬಾಂಡ್ ಸ್ಕೀಮನ್ನು ಸರ್ಕಾರ, ಆರಂಭಿಸಿತು. ಇದರ ಅನ್ವಯ ಆರ್ ಬಿಐ ಕಂತುಗಳಲ್ಲಿ ಬಾಂಡ್ ಜಾರಿ ಮಾಡುತ್ತದೆ.