Korean Movies Remake: ಕೊರಿಯನ್ ರಿಮೇಕ್ ಆದ ಈ ಬಾಲಿವುಡ್ ಸಿನಿಮಾಗಳನ್ನು ನೀವು ನೋಡಲೇಬೇಕು
'ಅವರಪನ್' 2005ರಲ್ಲಿ ಬಿಡುಗಡೆಯಾದ ದಕ್ಷಿಣ ಕೊರಿಯಾದ ಚಲನಚಿತ್ರ 'ಎ ಬಿಟರ್‌ಸ್ವೀಟ್ ಲೈಫ್' ಅನ್ನು ಆಧರಿಸಿದೆ. 2007ರಲ್ಲಿ ಬಿಡುಗಡೆಯಾದ ಈ ಸಿನಿಮಾವನ್ನು ಮೋಹಿತ್ ಸೂರಿ ನಿರ್ದೇಶಿಸಿದ್ದರು. ಈ ಸಿನಿಮಾದಲ್ಲಿ ಇಮ್ರಾನ್ ಹಶ್ಮಿ, ಶ್ರಿಯಾ ಸರನ್, ಮೃಣಾಲಿನಿ ಶರ್ಮಾ ಮತ್ತು ಅಶುತೋಷ್ ರಾಣಾ ಸೇರಿದಂತೆ ಅನೇಕರು ನಟಿಸಿದ್ದಾರೆ.
'ಬರ್ಫಿ!' 2002ರಲ್ಲಿ ಬಿಡುಗಡೆಯಾದ ದಕ್ಷಿಣ ಕೊರಿಯಾದ ಸಿನಿಮಾ 'ಲವರ್ಸ್ ಕನ್ಸರ್ಟೋ' ನಿಂದ ಸ್ಫೂರ್ತಿ ಪಡೆಲಾಗಿದೆ. 2012ರಲ್ಲಿ ಬಿಡುಗಡೆಯಾಗಿ ಬ್ಲಾಕ್‍ಬಸ್ಟರ್ ಹಿಟ್ ಆದ ಈ ಸಿನಿಮಾವನ್ನು ಅನುಗಾರ್ ಬಸು ನಿರ್ದೇಶಿಸಿದ್ದರು. ಶ್ರವಣ ಮತ್ತು ವಾಕ್ ದೋಷವುಳ್ಳ ಯುವಕನ ಪಾತ್ರದಲ್ಲಿ ರಣಬೀರ್ ಕಪೂರ್ ಅದ್ಭುತವಾಗಿ ನಟಿಸಿದ್ದರು. ಇವರಿಗೆ ಜೊತೆಯಾಗಿ ಇಲಿಯಾನಾ ಡಿಕ್ರೂಜ್ ಮತ್ತು ಪ್ರಿಯಾಂಕಾ ಚೋಪ್ರಾ ನಟಿಸಿದ್ದರು.
'ಏಕ್ ವಿಲನ್' ಕೊರಿಯನ್ ಚಿತ್ರ 'ಐ ಸಾ ದಿ ಡೆವಿಲ್' ನಿಂದ ಸ್ಫೂರ್ತಿ ಪಡೆದಿದೆ. 'ಐ ಸಾ ದಿ ಡೆವಿಲ್' ಥ್ರಿಲ್ಲರ್ ಮತ್ತು ಸಸ್ಪೆನ್ಸ್ ಕಥಾವಸ್ತು ಹೊಂದಿರುವ ಸಿನಿಮಾ ಆಗಿದೆ. 2014ರಲ್ಲಿ ಬಿಡುಗಡೆಯಾದ ಈ ಸಿನಿಮಾವನ್ನು ಮೋಹಿತ್ ಸೂರಿ ನಿರ್ದೇಶಿಸಿದ್ದರು. ಈ ಸಿನಿಮಾದಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ, ಶ್ರದ್ಧಾ ಕಪೂರ್ ಮತ್ತು ರಿತೇಶ್ ದೇಶಮುಖ್ ಸೇರಿದಂತೆ ಹಲವರು ನಟಿಸಿದ್ದರು.
2015ರಲ್ಲಿ ಬಿಡುಗಡೆಯಾದ 'ಜಜ್ಬಾ' ಕೊರಿಯನ್ ಚಲನಚಿತ್ರ 'ಸೆವೆನ್ ಡೇಸ್' ನಿಂದ ಸ್ಫೂರ್ತಿ ಪಡೆದಿದೆ. ಸಂಜಯ್ ಗುಪ್ತಾ ನಿರ್ದೇಶಿಸಿದ ಈ ಸಿನಿಮಾದಲ್ಲಿ ಐಶ್ವರ್ಯಾ ರೈ, ಇರ್ಫಾನ್ ಖಾನ್ ಮತ್ತು ಶಬಾನಾ ಅಜ್ಮಿ ನಟಿಸಿದ್ದರು.
2006ರಲ್ಲಿ ಬಿಡುಗಡೆಯಾದ 'ಜಿಂದಾ' ಕೊರಿಯನ್ ಸಿನಿಮಾ 'ಓಲ್ಡ್‌ಬಾಯ್'ನಿಂದ ಸ್ಫೂರ್ತಿ ಪಡೆದಿದೆ. ಸಂಜಯ್ ಗುಪ್ತಾ ನಿರ್ದೇಶನದ ಈ ಚಿತ್ರದಲ್ಲಿನ ನಟನೆಗಾಗಿ ಜಾನ್ ಅಬ್ರಹಾಂ ಅತ್ಯುತ್ತಮ ಖಳನಾಯಕ ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಸಂಜಯ್ ದತ್, ಲಾರಾ ದತ್ತಾ ಮತ್ತು ಸೆಲಿನಾ ಜೇಟ್ಲಿ ಈ ಚಿತ್ರದಲ್ಲಿ ನಟಿಸಿದ್ದಾರೆ.