Kriti Karabandha: ಗೂಗ್ಲಿ ಸುಂದರಿಯ ಮದುವೆಯ ಸಂಭ್ರಮದ ಫೋಟೋ ಆಲ್ಬಂ ಹೇಗಿದೆ ಗೊತ್ತೇ??

Sat, 16 Mar 2024-5:46 pm,

ಬಹುಭಾಷಾ ನಟಿ ಕೃತಿ ಕರಬಂಧ ಹಾಗೂ ಬಾಲಿವುಡ್‌ ನಟ ಪುಲ್ಕಿತ್ ಸಾಮ್ರಾಟ್ ಮಾರ್ಚ್ 15ರಂದು ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಕೃತಿ ಕರಬಂಧ ಮತ್ತು ಪುಲ್ಕಿತ್ ಸಾಮ್ರಾಟ್ ಹಲವು ವರ್ಷಗಳ ಪ್ರೀತಿಸುತ್ತಿದ್ದವರು ನಿನ್ನೆ ದೆಹಲಿಯಲ್ಲಿರುವ ಐಟಿಸಿ ಗ್ರ‍್ಯಾಂಡ್ ಐಷಾರಾಮಿ ರೆಸಾರ್ಟ್‌ನಲ್ಲಿ ಮದುವೆಯಾಗಿದ್ದಾರೆ.  

 ನಟಿ ಕೃತಿ ಕರಬಂಧ ವಿವಾಹ ಸಡಗರ ದಿನದಂದು ಪಿಂಕ್ ಬಣ್ಣದ ಲೆಹೆಂಗಾದಲ್ಲಿ ಮಿಂಚುತ್ತಿದ್ದರೇ, ಇತ್ತ ವರ ಪುಲ್ಕಿತ್ ಸಾಮ್ರಾಟ್ ಹಸಿರು ಬಣ್ಣದ ಉಡುಗೆಯಲ್ಲಿ ಗಮನ ಸೆಳೆದಿದ್ದಾರೆ.  

ಕೃತಿ-ಪುಲ್ಕಿತ್ ಮದುವೆಯ ಸಂಭ್ರಮ ಮಾರ್ಚ್‌ 13 ರಿಂದ ಮೆಹಂದಿ ಶಾಸ್ತ್ರದಿಂದಲೇ ಪ್ರಾರಂಭವಾಗಿದ್ದು, ಬಳಿಕ ಮಾರ್ಚ್‌ 4ರಂದು ಹಳದಿ ಶಾಸ್ತ್ರ ಮತ್ತು ಕಾಕ್‌ಟೈಲ್ ಪಾರ್ಟಿಯನ್ನು ಆಯೋಜಿಸಿದ್ದರು.

ಗೂಗ್ಲಿ ಸುಂದರಿ ಕೃತಿ ತಮ್ಮ ಮದುವೆಯ ಫೋಟೋಗಳನ್ನು ಸೋಶಿಯಲ್‌ ಮಿಡಿಯಾದಲ್ಲಿ ಪೋಸ್ಟ್‌ ಮಾಡುವುದರ ಜೊತೆಗೆ ಕ್ಯಾಪ್ಶನ್‌ನಲ್ಲಿ ʻಆಳವಾದ ನೀಲಿ ಆಕಾಶದಿಂದ, ಬೆಳಗಿನ ಇಬ್ಬನಿಯವರೆಗೆ, ಕಡಿಮೆ ಮತ್ತು ಎತ್ತರದ ಮೂಲಕ,ಇದು ನೀವು ಮಾತ್ರ. ಪ್ರಾರಂಭದಿಂದ ಕೊನೆಯವರೆಗೆ, ಪ್ರತಿ ಈಗ ಮತ್ತು ಪ್ರತಿ ಸಮಯದಲ್ಲಿ, ನನ್ನ ಹೃದಯವು ವಿಭಿನ್ನವಾಗಿ ಬಡಿದಾಗ, ಅದು ನೀನಾಗಿರಬೇಕು. ನಿರಂತರವಾಗಿ, ನಿರಂತರವಾಗಿ,ನಿರಂತರವಾಗಿ, ನೀವು!ʼ  ಎಂದು ಬರೆದಿದ್ದಾರೆ.

ಕೃತಿ ವೆಡ್ಡಿಂಗ್‌ ಆಲ್ಬಂಗೆ ಏಳು ಲಕ್ಷಕ್ಕೂ ಹೆಚ್ಚು ಲೈಕ್ಸ್‌ ಬಂದಿದ್ದು ಮತ್ತು ನೆಟ್ಟಿಗರು ಕಾಮೆಂಟ್‌ ಬಾಕ್ಸ್‌ನಲ್ಲಿ ಈ ಜೋಡಿಗೆ ಶುಭ ಹಾರೈಸಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link