ಒಂದೇ ಒಂದು ಫೊಟೋ ಮೂಲಕ ಇಂಟರ್‌ನೆಟ್ ಅಲ್ಲಾಡಿಸಿದ ಅಕ್ಕ-ತಂಗಿ..! ಬಿಟೌನ್ ಸಿಸ್ಟರ್ಸ್ ಫೋಟೋ ವೈರಲ್
ತೆಲುಗು ಇಂಡ್ರಸ್ಟ್ರೀಯ ಮೂಲಕ ಸಿನಿರಂಗ ಪ್ರವೇಶ ಮಾಡಿದ ಸಹೋದರಿಯ ಇದೀಗ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಮಿಂಚುತ್ತಿದ್ದಾರೆ..
ಹೆಚ್ಚಾಗಿ ಸಿನಿಮಾ ಮಾಡಿಲ್ಲವೆಂದರೂ ತಮ್ಮ ಸೌಂದರ್ಯ ಪ್ರದರ್ಶನ ಮೂಲಕ ಎಲ್ಲರ ಮನ ಗೆದ್ದ ಸಹೋದರಿಯರು ಇವರು.. ಅವರು ಬೇರೆ ಯಾರೂ ಅಲ್ಲ ಕೃತಿ ಸನನ್ ಮತ್ತು ನೂಪುರ್ ಸನನ್.
ಹತ್ತು ವರ್ಷಗಳ ಹಿಂದೆ ತೆರೆಕಂಡ ಮಹೇಶ್ ಬಾಬು ಅಭಿನಯದ '1 ನೆನೊಕ್ಕಡಿನೆ' ಚಿತ್ರದ ಮೂಲಕ ಕೃತಿ ಸನನ್ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿದ್ದರು.
ಈ ಚಿತ್ರ ಅಷ್ಟಾಗಿ ಮಾಡಲಿಲ್ಲ ಸದ್ದು ಮಾಡಲಿಲ್ಲ ಆದರೆ.. 'ಆವ್ ತುಜೊ ಮೋಗ್ ಕೊರ್ತಾ' ಎಂಬ ಹಿಂದಿ ಚಿತ್ರದ ಮೂಲಕ ಕೃತಿ ಕ್ರೇಜ್ ಹೆಚ್ಚಾಯಿತು.
ಅದೇ ವರ್ಷದಲ್ಲಿ ತೆರೆಕಂಡ ಹಿಂದಿ ಸಿನಿಮಾ ಹೀರೋಪಂತಿ ಮೂಲಕ ಬಿಟೌನ್‌ನಲ್ಲಿ ಸಾಲು ಸಾಲು ಆಫರ್ ಗಿಟ್ಟಿಸಿಕೊಂಡರು.. ಈ ಚಿತ್ರ ಸೂಪರ್ ಡ್ಯೂಪರ್ ಹಿಟ್ ಆಯಿತು..
ಅಕ್ಕಿನೇನಿ ನಾಗಾರ್ಜುನ ಪುತ್ರ ನಾಗ ಚೈತನ್ಯ ನಟನೆಯ ದೋಚೆಯ್ ಚಿತ್ರದಲ್ಲಿಯೂ ಕೃತಿ ನಟಿಸಿದ್ದರು. ಆದರೆ, ಈ ಸಿನಿಮಾ ಡಿಸಾಸ್ಟರ್ ಆಯ್ತು.. ಇದರಿಂದ ಈ ಚೆಲುವೆಗೆ ತೆಲುಗಿನಲ್ಲಿ ಆಫರ್‌ಗಳು ಬರಲಿಲ್ಲ. ಹಾಗಾಗಿ ಮುಂಬೈಗೆ ಶಿಫ್ಟ್ ಆದರು.
ಬಾಲಿವುಡ್‌ನಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿ ಬ್ಯುಸಿಯಾಗಿದ್ದಾರೆ. ಮೂರು ವರ್ಷಗಳ ಹಿಂದೆ ತೆರೆಕಂಡ ‘ಮಿಮಿ’ ಸಿನಿಮಾದ ನಟನೆಗಾಗಿ ಈ ಸುಂದರಿ ರಾಷ್ಟ್ರಪ್ರಶಸ್ತಿ ಗೆದ್ದಿದ್ದಾಳೆ. ಆ ಸಿನಿಮಾದಲ್ಲಿ ಬಾಡಿಗೆ ತಾಯಿಯಾಗಿ ಅದ್ಬುತವಾಗಿ ಅಭಿನಯಿಸಿದ್ದರು.
'ಬರೇಲಿಕಿ ಬರ್ಫಿ', 'ಲುಕ್ಕ ಚುಪ್ಪಿ', 'ದಿಲ್ವಾಲೆ', 'ಹೌಸ್ ಫುಲ್-4' ಮುಂತಾದ ಸಿನಿಮಾಗಳು ಈ ಸುಂದರಿಗೆ ಹಿಂದಿಯಲ್ಲಿ ಇನ್ನಿಲ್ಲದ ಕ್ರೇಜ್ ತಂದುಕೊಟ್ಟವು. ಕಳೆದ ವರ್ಷ ಪ್ರಭಾಸ್ ಜೊತೆ ಆದಿಪುರುಷ ಚಿತ್ರದಲ್ಲಿ ನಟಿಸಿದ್ದರು. ಆದರೆ ಈ ಸಿನಿಮಾ ಅಷ್ಟಾಗಿ ಸದ್ದು ಮಾಡಲಿಲ್ಲ..
ನೂಪುರ್ ಸನನ್ ತೆಲುಗಿನಲ್ಲಿ ರವಿತೇಜ ಅಭಿನಯದ ಟೈಗರ್ ನಾಗೇಶ್ವರ ರಾವ್ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದರು. ಈ ಸಿನಿಮಾ ಸೋತಿದ್ದರಿಂದ ನೂಪುರ್‌ಗೆ ತೆಲುಗಿನಲ್ಲಿ ಹೆಚ್ಚು ಅವಕಾಶಗಳು ಸಿಗುತ್ತಿಲ್ಲ.. ಸಧ್ಯ ಈ ಚೆಲುವೆ ಹಿಟ್‌ಗಾಗಿ ಕಾಯುತ್ತಿದ್ದಾಳೆ..