Rajyog astrology: ಈ ರಾಶಿಗಳ ಅದೃಷ್ಟದ ಬಾಗಿಲು ಓಪನ್..‌ ಹಣ ಯಶಸ್ಸು‌ ಹುಡುಕಿ ಬರಲಿದೆ, ಸಂತೋಷ ಸಂಪತ್ತಿನ ಸುರಿಮಳೆ!

Tue, 06 Feb 2024-12:14 pm,

ಬುಧ ಶುಕ್ರ ಸಂಯೋಗ: ಇತ್ತೀಚೆಗೆ ಗ್ರಹಗಳ ಅಧಿಪತಿ ಬುಧನು ಮಕರ ರಾಶಿಯನ್ನು ಪ್ರವೇಶಿಸಿದನು. ಇದೇ ತಿಂಗಳ 12ರಂದು ಧನದಾತ ಶುಕ್ರನು ಮಕರ ರಾಶಿಗೆ ಪ್ರವೇಶಿಸಲಿದ್ದಾನೆ. ಮಕರ ರಾಶಿಯಲ್ಲಿ ಬುಧ ಶುಕ್ರ ಯುತಿ ಆಗಲಿದೆ.

ಲಕ್ಷ್ಮೀ ನಾರಾಯಣ ರಾಜಯೋಗ: ಮಕರ ರಾಶಿಯಲ್ಲಿ ಬುಧ ಮತ್ತು ಶುಕ್ರರ ಸಂಯೋಗದಿಂದ ಅಪರೂಪದ ಲಕ್ಷ್ಮೀನಾರಾಯಣ ರಾಜಯೋಗ ರೂಪುಗೊಳ್ಳುತ್ತದೆ. ಈ ಪವಿತ್ರ ಯೋಗದಿಂದ ಕೆಲವರ ಭವಿಷ್ಯವೇ ಬದಲಾಗಲಿದೆ. 

ಕನ್ಯಾ ರಾಶಿ : ಲಕ್ಷ್ಮೀ ನಾರಾಯಣ ಯೋಗವು ಕನ್ಯಾ ರಾಶಿಯವರಿಗೆ ಸಾಕಷ್ಟು ಲಾಭಗಳನ್ನು ನೀಡಲಿದೆ. ಆರ್ಥಿಕ ಸ್ಥಿತಿಯು ಬಲವಾಗಿರುತ್ತದೆ. ಬಾಕಿ ಉಳಿದಿರುವ ಕೆಲಸಗಳು ಪೂರ್ಣಗೊಳ್ಳುತ್ತವೆ. ನಿಮ್ಮ ಆದಾಯ ಹೆಚ್ಚಾಗುತ್ತದೆ. ಆರೋಗ್ಯ ಸಮಸ್ಯೆಗಳಿಂದ ಮುಕ್ತರಾಗುತ್ತೀರಿ.

ಮಿಥುನ ರಾಶಿ : ಬುಧ ಶುಕ್ರ ಯುತಿಯಿಂದ ದಿಢೀರ್ ಆರ್ಥಿಕ ಲಾಭ ಆಗಲಿದೆ. ಸಂಪತ್ತು ವೃದ್ಧಿಯಾಗುತ್ತದೆ. ಐಷಾರಾಮಿ ಜೀವನವನ್ನು ನಡೆಸುತ್ತೀರಿ. ಉದ್ಯಮವನ್ನು ಪ್ರಾರಂಭಿಸಲು ಬಯಸುವವರಿಗೆ ಇದು ಉತ್ತಮ ಸಮಯ. ಬೆಲೆಬಾಳುವ ಆಸ್ತಿಗಳನ್ನು ಖರೀದಿಸುವ ಸಾಧ್ಯತೆಯಿದೆ. 

ಮೇಷ ರಾಶಿ : ಸಂಪತ್ತು ಹೆಚ್ಚಾಗುತ್ತದೆ. ಸಾಲ ಕೊಟ್ಟ ಹಣವನ್ನು ಹಿಂತಿರುಗಿಸಲಾಗುತ್ತದೆ. ವೃತ್ತಿಯಲ್ಲಿ ಬಡ್ತಿ ದೊರೆಯಲಿದೆ. ಆರ್ಥಿಕವಾಗಿ ಬಲಶಾಲಿಯಾಗುತ್ತೀರಿ. ಈ ಸಮಯದಲ್ಲಿ ಮಾಡಿದ ಹೂಡಿಕೆಗಳು ನಿಮಗೆ ಲಾಭವನ್ನು ನೀಡುತ್ತದೆ. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಧಾರ್ಮಿಕೆ ವಿಚಾರಗಳನ್ನು ಆಧರಿಸಿದೆ. ZEE Kannada News ಇದನ್ನು ದೃಢಪಡಿಸುವುದಿಲ್ಲ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link