12ವರ್ಷಗಳ ನಂತರ ಈ ರಾಶಿಯವರಿಗೆ ಲಕ್ಷ್ಮೀ ನಾರಾಯಣ ಯೋಗ, ಆಸೆಗಳೆಲ್ಲಾ ಈಡೇರುವ ಸುವರ್ಣ ಸಮಯ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಬರೋಬ್ಬರಿ 12 ವರ್ಷಗಳ ಬಳಿಕ ಮೀನ ರಾಶಿಯಲ್ಲಿ ಶುಭಕರ ಲಕ್ಷ್ಮೀ ನಾರಾಯಣ ಯೋಗ ನಿರ್ಮಾಣವಾಗಲಿದೆ.
ಮೀನ ರಾಶಿಯಲ್ಲಿ ಲಕ್ಷ್ಮೀ ನಾರಾಯಣ ಯೋಗದ ಫಲವಾಗಿ ದ್ವಾದಶ ರಾಶಿಗಳಲ್ಲಿ ಕೆಲವು ರಾಶಿಯವರಿಗೆ ಅದೃಷ್ಟ ಖುಲಾಯಿಸಲಿದೆ. ಇದು ಅವರಿಗೆ ಮಣ್ಣೂ ಸಹ ಹೊನ್ನಾಗುವ ಸಮಯವಾಗಿದೆ.
ಮಿಥುನ ರಾಶಿ: ಬುಧ ಶುಕ್ರರ ಸಂಯೋಗವು ಈ ರಾಶಿಯವರಿಗೆ ಕಷ್ಟದ ದಿನಗಳನ್ನು ಕಳೆದು ಜೀವನದಲ್ಲಿ ಸುಖ-ಸೌಕರ್ಯಗಳನ್ನು ಹೆಚ್ಚಿಸಲಿದೆ. ಈ ಅವಧಿಯಲ್ಲಿ ಹಣಕಾಸಿನ ಹರಿವು ಉತ್ತಮವಾಗಿದ್ದು, ಆರ್ಥಿಕ ಸ್ಥಿತಿ ಬಲಗೊಳ್ಳಲಿದೆ.
ಕುಂಭ ರಾಶಿ: ಲಕ್ಷ್ಮೀ ನಾರಾಯಣ ಯೋಗವು ಈ ರಾಶಿಯವರ ಬದುಕಿನಲ್ಲಿ ಸಂತೋಷದ ಹೊನಲನ್ನೇ ಹರಿಸಲಿದೆ. ಈ ವೇಳೆ, ವೃತ್ತಿಪರರಿಗೆ ಬಡ್ತಿ, ವ್ಯಾಪಾರಸ್ಥರಿಗೆ ಬಂಪರ್ ಲಾಭವನ್ನು ಕಾಣಬಹುದು. ಹೊಸ ಆದಾಯದ ಮೂಲಗಳು ಸೃಷ್ಟಿಯಾಗಿ ಭೌತಿಕ ಸುಖ ಹೆಚ್ಚಾಗಲಿದೆ.
ಮೀನ ರಾಶಿ: 12 ವರ್ಷಗಳ ನಂತರ ಈ ರಾಶಿಯಲ್ಲಿ ಲಕ್ಷ್ಮೀ ನಾರಾಯಣ ಯೋಗ ನಿರ್ಮಾಣವಾಗುತ್ತಿದ್ದು ಈ ರಾಶಿಯವರಿಗೆ ದಿಢೀರ್ ಧನಲಾಭ. ಸಮಾಜದಲ್ಲಿ ಕೀರ್ತಿ ಗೌರವ ಹೆಚ್ಚಾಗಲಿದೆ. ಕುಟುಂಬದಲ್ಲಿ ಮಂಗಳ ಕಾರ್ಯಗಳು ಜರುಗಬಹುದು.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.