ದುಬಾರಿ ಕಾರುಗಳ ಒಡೆಯ ಖ್ಯಾತ ಬಾಲಿವುಡ್ ಸಿಂಗರ್ ಗುರು ರಾಂಧವ..!

Tue, 31 Aug 2021-3:22 pm,

ಬಾಲಿವುಡ್ ಸಿಂಗರ್ ಗುರು ರಾಂಧವ ಅವರು ಹಳದಿ ಬಣ್ಣದ Mercedes C Classನ  ಹೆಮ್ಮೆಯ ಮಾಲೀಕರಾಗಿದ್ದು, ಇದರ ಬೆಲೆ 50 ಲಕ್ಷ ರೂ. ನಿಂದ 1.4 ಕೋಟಿ ರೂ. ವಿಶೇಷವೆಂದರೆ ಇದೇ ಗುರು ರಾಂಧವ ಅವರು ಖರೀದಿಸಿದ್ದ ಮೊದಲ ಕಾರು ಆಗಿದೆ.

ಗುರು ರಾಂಧವ ಅವರು ಅದ್ಭುತವಾಗಿರುವ ಕಪ್ಪು ಬಣ್ಣದ(matte black) Lamborghini Gallardo ಹೊಂದಿದ್ದು, ಇದನ್ನು ಈ ಹಿಂದೆ ಕಿತ್ತಳೆ ಬಣ್ಣದಲ್ಲಿ ಚಿತ್ರಿಸಲಾಗಿತ್ತು. ಈ ಕಾರಿನ ಉತ್ಪಾದನೆ ಈಗ ಸ್ಥಗಿತವಾಗಿದ್ದು, ಬೆಲೆ ಸುಮಾರು 2.1 ಕೋಟಿ ರೂ. ಎಂದು ಹೇಳಲಾಗಿದೆ.

ಗುರು ರಾಂಧವ ಅವರ ಗ್ಯಾರೇಜ್‌ನಲ್ಲಿರುವ ಮತ್ತೊಂದು ಐಷಾರಾಮಿ ಕಾರು ಎಂದರೆ ಅದು Range Rover Evoque. ಇದರ ಬೆಲೆ ಸುಮಾರು 66.60 ಲಕ್ಷ ರೂ. ಆಗಿದೆ. ಬಾಲಿವುಡ್ ಸೆಲೆಬ್ರೆಟಿಗಳಾದ ಅಮಿತಾಬ್ ಬಚ್ಚನ್, ಆಲಿಯಾ ಭಟ್, ಅಕ್ಷಯ್ ಕುಮಾರ್ ಮತ್ತು ಕತ್ರಿನಾ ಕೈಫ್ ಅನೇಕರು ಇದೇ ರೇಂಜ್ ರೋವರ್‌ ಕಾರಿನಲ್ಲಿ ಮುಂಬೈ ಸುತ್ತುತ್ತಾರೆ.    

ಗುರು ರಾಂಧವ BMW 3 series GT ಅನ್ನು ಹೊಂದಿದ್ದು, ಈ ಸೆಡಾನ್ ಕಾರಿನ ಬೆಲೆ 42.50 ಲಕ್ಷ ರೂ.ನಿಂದ  50.70 ಲಕ್ಷ ರೂ.ವರೆಗೆ ಇದೆ.   

Dodge challenger SRT ಕಾರು ಕೂಡ ಗಾಯಕ ಗುರು ರಾಂಧವ ಸಂಗ್ರಹದಲ್ಲಿದೆ. ಎಸ್‌ಆರ್‌ಟಿ ಎಂದರೆ ಸ್ಟ್ರೀಟ್ ಮತ್ತು ರೇಸಿಂಗ್ ಟೆಕ್ನಾಲಜಿ ಎಂದರ್ಥ. ಈ ಕಾರಿನ ಬೆಲೆ ಸುಮಾರು 45 ಲಕ್ಷ ರೂ. ನಿಂದ 50 ಲಕ್ಷ ರೂ. ಇದೆ.

ಸಿಂಗರ್ ಗುರು ರಾಂಧವ Cadillac ಕಾರಿನ ಹೆಮ್ಮೆಯ ಮಾಲೀಕರಾಗಿದ್ದಾರೆ. ಈ ಕಾರಿನ ಬೆಲೆ ಸುಮಾರು 1.2 ಕೋಟಿ ರೂ. ಇದೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link