ಡಿಎ ಹೆಚ್ಚಳದ ಜೊತೆಗೆ ಮೂಲವೇತನದಲ್ಲಿಯೂ ಬದಲಾವಣೆ !ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಬಗ್ಗೆ ಹೊಸ ಅಪ್ಡೇಟ್

Fri, 11 Oct 2024-9:58 am,

ಕೇಂದ್ರ ಸರ್ಕಾರಿ ನೌಕರರ ನಿರೀಕ್ಷೆ ಇನ್ನೂ ಮುಂದುವರೆದಿದೆ.8ನೇ ವೇತನ ಆಯೋಗದ  ಬಗ್ಗೆ ಸರ್ಕಾರ ಇನ್ನೂ ಯಾವುದೇ ಘೋಷಣೆ ಮಾಡಿಲ್ಲ.ಆದರೆ ಇದೀಗ ಮೂಲ ವೇತನ ಹೆಚ್ಚಳದ ಬಗ್ಗೆ ಪ್ರಮುಖ ಅಪ್ಡೇಟ್ ಬಂದಿದೆ.   

ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ವೇತನ ಮತ್ತು ಪಿಂಚಣಿ ಪರಿಷ್ಕರಣೆ ಕುರಿತು 8ನೇ  ಆಯಿಗ ರಚನೆ ಬಗ್ಗೆ ಸರ್ಕಾರ ಅಧಿಸೂಚನೆ ಹೊರಡಿಸದಿದ್ದರೂ, ಭತ್ಯೆ ಹೆಚ್ಚಳದೊಂದಿಗೆ ಮೂಲ ವೇತನ ಪರಿಷ್ಕರಣೆಯನ್ನು ಸಂಯೋಜಿಸಲು ಸಮಿತಿ ಶಿಫಾರಸು ಮಾಡುತ್ತದೆ ಎಂದು ನೌಕರರ ಸಂಘಗಳು ಅಭಿಪ್ರಾಯಪಟ್ಟಿವೆ.  

ತುಟ್ಟಿಭತ್ಯೆ  50% ದಾಟಿದ ನಂತರ ಮೂಲ ವೇತನವನ್ನು ಸ್ವಯಂಚಾಲಿತವಾಗಿ ಹೆಚ್ಚಿಸಬೇಕು ಎಂದು 7 ನೇ ವೇತನ ಆಯೋಗವು ಶಿಫಾರಸು ಮಾಡಿದೆ ಎಂದು ಕೇಂದ್ರ ಸರ್ಕಾರಿ ನೌಕರರ ಒಕ್ಕೂಟದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹಾಗಾಗಿ ಈಗ  ವೇತನ ಪರಿಷ್ಕರಣೆ ಮಾಡಬೇಕು ಆಗಿಯೇ ಆಗುತ್ತದೆ ಎನ್ನುವುದು ಅವರ ವಾದ.  

7ನೇ ವೇತನ ಆಯೋಗದಲ್ಲಿ ಶಿಫಾರಸ್ಸು ಮಾಡಲಾಗಿತ್ತಾದರೂ, ಸರ್ಕಾರ ಅದನ್ನು ಅಂಗೀಕರಿಸಿಲ್ಲ.ಆದರೆ 8ನೇ ವೇತನ ಆಯೋಗದಲ್ಲಿ ಇದನ್ನು ಶಿಫಾರಸು ಮಾಡುವ ನಿರೀಕ್ಷೆಯಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.   

ಡಿಎ 50% ದಾಟಿದ ಕಾರಣ 8 ನೇ ವೇತನ ಆಯೋಗವು ಮೂಲ ವೇತನದಲ್ಲಿ ಹೆಚ್ಚಳವನ್ನು ಶಿಫಾರಸು ಮಾಡುವ ನಿರೀಕ್ಷೆಯಿದೆ ಎಂದು ಅಖಿಲ ಭಾರತ ರೈಲ್ವೇಮೆನ್ ಫೆಡರೇಶನ್ ಅಧ್ಯಕ್ಷ ಶಿವ ಗೋಪಾಲ್ ಮಿಶ್ರಾ ಹೇಳಿದ್ದಾರೆ. 8ನೇ ವೇತನ ಆಯೋಗ ರಚನೆಗೂ ಮುನ್ನ ಈ ಬೇಡಿಕೆಯನ್ನು  ಈಡೇರಿಸಲೆ ಬೇಕು ಎಂದು ಒತ್ತಾಯಿಸಿವೆ.   

7 ನೇ ವೇತನ ಆಯೋಗದ ವರದಿಯ ಪ್ರಕಾರ,ಮೂಲ ವೇತನದ 50% ತಲುಪಿದ ನಂತರ ಮನೆ ಬಾಡಿಗೆ ಭತ್ಯೆ ಸೇರಿದಂತೆ ಅನೇಕ ಭತ್ಯೆಗಳು ಸ್ವಯಂಚಾಲಿತವಾಗಿ ಪರಿಷ್ಕರಿಸಲ್ಪಡುತ್ತವೆ.ಆದರೆ,ಮೂಲ ವೇತನದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.  

ಸರ್ಕಾರ ಮತ್ತು ನೌಕರರ ನಡುವಿನ ವಿವಾದಗಳನ್ನು ಪರಿಹರಿಸುವ ಅಧಿಕೃತ ವೇದಿಕೆಯಾದ ರಾಷ್ಟ್ರೀಯ ಕೌನ್ಸಿಲ್-ಜಂಟಿ ಸಲಹಾ ಮಂಡಳಿಯ ಕಾರ್ಯದರ್ಶಿ (ನೌಕರರ ಕಡೆಯಿಂದ ) ಮಿಶ್ರಾ, ಕನಿಷ್ಠ ವೇತನವು ಈಗಾಗಲೇ ಮೂಲ ವೇತನದ 50% ದಾಟಿದೆ ಎಂದು ಸರ್ಕಾರದ ಮುಂದೆ ಬೊಟ್ಟು ಮಾಡಿದ್ದಾರೆ. 8ನೇ ವೇತನ ಆಯೋಗವನ್ನು ಆದಷ್ಟು ಬೇಗ ರಚಿಸಿ ಜಾರಿಗೆ ತರುವಂತೆ ನೌಕರರ ಪರಿಷತ್ತು ಕೇಂದ್ರ ಸಂಪುಟ ಕಾರ್ಯದರ್ಶಿ ಟಿ.ವಿ.ಸೋಮನಾಥನ್ ಅವರಿಗೆ ಮನವಿ ಪತ್ರ ಸಲ್ಲಿಸಿರುವುದಾಗಿಯೂ ಹೇಳಿದ್ದಾರೆ.   

ಏಳನೇ ವೇತನ ಆಯೋಗ ರಚನೆಯಾದಾಗ ಮೂಲ ವೇತನವನ್ನು ನಿರ್ಧರಿಸುವ ಫಿಟ್‌ಮೆಂಟ್ ಅಂಶವನ್ನು 3.68ಕ್ಕೆ ಹೆಚ್ಚಿಸಬೇಕು ಎಂದು ನೌಕರರ ಸಂಘಗಳು ಒತ್ತಾಯಿಸಿದ್ದವು.ಆದರೆ, ಅಂದು ಸರ್ಕಾರ ಫಿಟ್‌ಮೆಂಟ್ ಅಂಶವನ್ನು 2.57 ನಿಗದಿಪಡಿಸಿತ್ತು.ಕನಿಷ್ಠ ವೇತನವನ್ನು ರೂ.18,000ಕ್ಕೆ ಹೆಚ್ಚಿಸಲಾಗಿದೆ.

8ನೇ ವೇತನ ಆಯೋಗ ಜಾರಿಗೆ ಬಂದಾಗ ಸರ್ಕಾರ ಫಿಟ್‌ಮೆಂಟ್ ಅಂಶವನ್ನು 3.68ಕ್ಕೆ ಹೆಚ್ಚಿಸಬಹುದು ಎಂದು ಹೇಳಲಾಗಿದೆ.ಇದರಿಂದಾಗಿ ಕನಿಷ್ಠ ವೇತನ ಈಗಿರುವ 18 ಸಾವಿರದಿಂದ 34,560 ರೂ.ಗೆ ಏರಬಹುದು.ಇದಲ್ಲದೇ ಗರಿಷ್ಠ ವೇತನವೂ 2.5 ಲಕ್ಷದಿಂದ 4.8 ಲಕ್ಷಕ್ಕೆ ಏರಿಕೆಯಾಗುವ ನಿರೀಕ್ಷೆಯಿದೆ.

ಸೂಚನೆ :ಈ ಪೋಸ್ಟ್ ಅನ್ನು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಬರೆಯಲಾಗಿದೆ. ಆ ಮೂಲಕ ವೇತನದ ದರದಲ್ಲಿ ಹೆಚ್ಚಳ ಅಥವಾ ಮುಂದಿನ ವೇತನ ಆಯೋಗದ ಯಾವುದೇ ಗ್ಯಾರಂಟಿ ನೀಡಲಾಗುವುದಿಲ್ಲ. ಇತ್ತೀಚಿನ ಮತ್ತು ನಿಖರವಾದ ಮಾಹಿತಿಗಾಗಿ ಅಧಿಕೃತ ಸರ್ಕಾರಿ ವೆಬ್‌ಸೈಟ್‌ಗಳನ್ನು ಪ್ರವೇಶಿಸಲು ಶಿಫಾರಸು ಮಾಡಲಾಗಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link