ಬಿಗ್‌ ಬಾಸ್‌ ನಲ್ಲಿ ಜಗಳದ ಮಧ್ಯೆ ಉಗ್ರಂ ಮಂಜುಗೆ ಲಾಯರ್ ಜಗದೀಶ್ ಕಿಸ್‌ ಮಾಡಿದ್ರಾ ?

Thu, 17 Oct 2024-8:24 am,

ಬಿಗ್‌ಬಾಸ್ ಮನೆ ಅಕ್ಷರಶಃ ರಣರಂಗವಾಗಿದ್ದು, ಜಗದೀಶ್‌ ಮೇಲೆ ಉಳಿದ ಸ್ಪರ್ಧಿಗಳು ಕಿಡಿಕಾರುತ್ತಿದ್ದಾರೆ. 

ರಂಜಿತ್‌ - ಜಗದೀಶ್‌ ನಡುವೆ ಜಗಳ ನಡೆದು ಕೈ ಕೈ ಮಿಲಾಯಿಸುವ ಹಂತಕ್ಕೂ ಹೋಗಿದೆ ಎಂದು ಕೆಲವು ವರದಿಗಳಲ್ಲಿ ಹೇಳಲಾಗುತ್ತಿದೆ. 

ಇದರ ಮಧ್ಯೆ ಉಗ್ರಂ ಮಂಜುಗೆ ಲಾಯರ್ ಜಗದೀಶ್ ಕಿಸ್‌ ಕೊಟ್ಟಿದ್ದಾರೆ ಎಂಬ ಒಂದು ಫೋಟೋ ವೈರಲ್‌ ಆಗುತ್ತಿದೆ. 

ಬಿಗ್‌ ಬಾಸ್‌ ಕನ್ನಡ 11 ರಲ್ಲಿ ಇಡೀ ಮನೆ ಜಗದೀಶ್‌ ಅವರ ಜೊತೆಗೆ ಜಗಳವಾಡುತ್ತಿದೆ. ಉಗ್ರಂ ಮಂಜು ಮತ್ತು ಜಗದೀಶ್‌ ಮಧ್ಯೆ ಈ ಗಲಾಟೆ ತಾರಕಕ್ಕೇರಿತ್ತು. 

ಇಬ್ಬರ ನಡುವಿನ ಈ ಬಿಗ್‌ ಫೈಟ್‌ ನಡುವೆ ಉಗ್ರಂ ಮಂಜುಗೆ ಜಗದೀಶ್‌ ಮುತ್ತುಕೊಡುತ್ತಿರುವ ಫೋಟೋ ವೈರಲ್ ಆಗುತ್ತಿದೆ. 

ಆದರೆ ಇದರ ಅಸಲಿಯತ್ತೇ ಬೇರೆಯಾಗಿದೆ. ವೈರಲ್ ಆದ ಫೋಟೋಗಳಲ್ಲಿ ಉಗ್ರಂ ಮಂಜು ಅವರಿಗೆ ಜಗದೀಶ್ ಕಿಸ್ ಕೊಟ್ಟಂತೆ ಬಿಂಬಿಸಲಾಗಿದೆ. 

ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿರುವ ಈ ಫೋಟೋ ನಿಜವಾದ ಘಟನೆ ಅಲ್ಲ. ಬದಲಿಗೆ ಎಐ ನಲ್ಲಿ ಎಡಿಟ್ ಮಾಡಿದ್ದಾಗಿದೆ.

ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮೂಲಕ ಡೀಪ್‌ ಫೇಕ್ ಮಾಡಲಾಗಿದ್ದು, ಜಗದೀಶ್‌  ಉಗ್ರಂ ಮಂಜುಗೆ ಕಿಸ್‌ ಕೊಟ್ಟಂತೆ ಬಿಂಬಿಸಲಾಗಿದೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link