ನಿಂಬೆ ರಸಕ್ಕೆ ಈ ಎಲೆ ಬೆರೆಸಿ ಸೇವಿಸಿದರೆ ಹರಳು ಗಟ್ಟಿದ ಯೂರಿಕ್ ಆಸಿಡ್ ಕರಗಿ ನೀರಾಗುವುದು !ಕಿಡ್ನಿ ಸ್ಟೋನ್ ಕೂಡಾ ಪುಡಿಯಾಗಿ ಸರಾಗವಾಗಿ ಜಾರಿ ಹೊರಬರುವುದು
ಕೀಲುಗಳಲ್ಲಿ ಹರಳಿನ ರೂಪದಲ್ಲಿ ಸೇರಿಕೊಂಡಿರುವ ಯೂರಿಕ್ ಆಸಿಡ್ ಗಂಟುಗಳು ಊದಿಕೊಳ್ಳಲು ಕಾರಣವಾಗುತ್ತದೆ.ಇದು ವಿಪರೀತ ನೋವನ್ನು ಉಂಟು ಮಾಡುತ್ತದೆ. ಅಲ್ಲದೆ ಕಿಡ್ನಿ ಸ್ಟೋನ್ ಅಪಾಯ ಕೂಡಾ ಹೆಚ್ಚಾಗುತ್ತದೆ.
ಯೂರಿಕ್ ಆಸಿಡ್ ಕರಗಿಸಲು ಅತ್ಯಂತ ಸುಲಭ ಮತ್ತು ಪರಿಣಾಮಕಾರಿ ಮನೆ ಮದ್ದು ಎಂದರೆ ಅದು ನಿಂಬೆ ರಸ. ನಿಂಬೆ ರಸ ಯೂರಿಕ್ ಆಸಿಡ್ ಅನ್ನು ಸುಲಭವಾಗಿ ಕರಗಿಸುತ್ತದೆ.
ಒಂದು ಲೋಟ ನೀರಿಗೆ 10ರವರೆಗೆ ಪುದಿನಾ ಸೇರಿಸಿ ಚೆನ್ನಾಗಿ ಕುದಿಸಬೇಕು. ನಂತರ ಈ ನೀರಿಗೆ ಒಂದೆರಡು ಹನಿ ನಿಂಬೆ ರಸ ಬೆರೆಸಿ ಸೇವಿಸಿಬೇಕು.
ನಿಂಬೆ ಮತ್ತು ಪುದಿನಾ ಎರಡೂ ನಿರ್ವಿಶೀಕರಣ ಮತ್ತು ಮೂತ್ರವರ್ಧಕ ಗುಣಲಕ್ಷಣಗಳನ್ನು ಒಳಗೊಂಡಿದೆ.ಹಾಗಾಗಿ ಯೂರಿಕ್ ಆಸಿಡ್ ಕರಗಿ ಮೂತ್ರದ ಮೂಲಕವೇ ದೇಹದಿಂದ ಹೊರ ಹೋಗುತ್ತದೆ.ಮಾತ್ರವಲ್ಲ ಕಿಡ್ನಿ ಸ್ಟೋನ್ ಕೂಡಾ ಪುಡಿಯಾಗಿ ದೇಹದಿಂದ ಹಿರ ಬೀಳುತ್ತದೆ.
ನಿತ್ಯ ಖಾಲಿ ಹೊಟ್ಟೆಯಲ್ಲಿ ಈ ಪಾನೀಯವನ್ನು ಸೇವಿಸುತ್ತಾ ಬಂದರೆ ದೇಹದ ಸಂಧುಗಳಲ್ಲಿ ಹರಳಿನ ರೂಪದಲ್ಲಿ ಸೇರಿಕೊಂಡಿರುವ ಯೂರಿಕ್ ಆಸಿಡ್ ಕರಗುವುದರಲ್ಲಿ ಸಂದೇಹವೇ ಬೇಡ.
ಸೂಚನೆ: ಪ್ರಿಯ ಓದುಗರೇ,ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ.ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.