ನಿಂಬೆ ರಸವನ್ನು ಇದರ ಜೊತೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ ಸಾಕು.. ಯುರಿಕ್ ಆಸಿಡ್ ಕರಗಿ ದೇಹದಿಂದ ಹೊರ ಹೋಗುವುದು!
ದೇಹದಲ್ಲಿ ಯುರಿಕ್ ಆಸಿಡ್ ಹೆಚ್ಚಾಗುವುದರಿಂದ ಕೀಲುಗಳಲ್ಲಿ ನೋವು, ಎದ್ದು ಕುಳಿತುಕೊಳ್ಳಲು ತೊಂದರೆ ಮತ್ತು ಬೆರಳುಗಳಲ್ಲಿ ಊತದಂತಹ ಅನೇಕ ಸಮಸ್ಯೆಗಳು ಶುರುವಾಗುತ್ತವೆ.
ಯುರಿಕ್ ಆಸಿಡ್ ಹೆಚ್ಚಾದಾಗ, ಈ ಆಮ್ಲದ ಸಣ್ಣ ತುಂಡುಗಳು ಕೀಲುಗಳು, ಸ್ನಾಯುಗಳು ಮತ್ತು ಅಂಗಾಂಶಗಳಲ್ಲಿ ಸ್ಫಟಿಕಗಳ ರೂಪದಲ್ಲಿ ಸಂಗ್ರಹವಾಗುತ್ತವೆ.
ನಿಂಬೆಯ ಸೇವನೆಯು ಯುರಿಕ್ ಆಸಿಡ್ ನಿಯಂತ್ರಿಸುವಲ್ಲಿ ತುಂಬಾ ಪರಿಣಾಮಕಾರಿ. ನಿಂಬೆ ರಸವು ಯುರಿಕ್ ಆಸಿಡ್ ಮಟ್ಟವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ.
ನಿಂಬೆ ರಸವನ್ನು ಕುಡಿಯುವುದರಿಂದ ದೇಹವು ಕ್ಯಾಲ್ಸಿಯಂ ಕಾರ್ಬೋನೇಟ್ ಅನ್ನು ಬಿಡುಗಡೆ ಮಾಡುತ್ತದೆ. ಇದು ಯುರಿಕ್ ಆಸಿಡ್‌ನ್ನು ಬಂಧಿಸುತ್ತದೆ. ಅದನ್ನು ನೀರು ಮತ್ತು ಇತರ ಸಂಯುಕ್ತಗಳಾಗಿ ವಿಭಜಿಸುತ್ತದೆ. ಇದರಿಂದ ಯುರಿಕ್ ಆಸಿಡ್ ಕಡಿಮೆಯಾಗುತ್ತದೆ.
ಯುರಿಕ್ ಆಸಿಡ್ ನಿಯಂತ್ರಿಸಲು, ದಿನಕ್ಕೆ ಒಂದರಿಂದ ಎರಡು ನಿಂಬೆಹಣ್ಣಿನ ರಸವನ್ನು ಸೇವಿಸಿ. ನಿಂಬೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇದು ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ ಮತ್ತು ಯುರಿಕ್ ಆಸಿಡ್ ನಿಯಂತ್ರಿಸುತ್ತದೆ.
ಖಾಲಿ ಹೊಟ್ಟೆಯಲ್ಲಿ ಉಗುರು ಬೆಚ್ಚಗಿನ ನೀರಿನಲ್ಲಿ ನಿಂಬೆ ರಸವನ್ನು ಹಿಂಡಿ ಕುಡಿಯಿರಿ ಸೇವಿಸಬಹುದು. ಖಾಲಿ ಹೊಟ್ಟೆಯಲ್ಲಿ ಉಗುರುಬೆಚ್ಚಗಿನ ನೀರಿನಲ್ಲಿ ನಿಂಬೆಹಣ್ಣನ್ನು ಕುಡಿಯುವುದರಿಂದ ಯುರಿಕ್ ಆಸಿಡ್ ಸಮಸ್ಯೆಗೆ ಪರಿಹಾರ ಸಿಗುವುದು.
ಸೂಚನೆ: ಪ್ರಿಯ ಓದುಗರೇ, ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.