Diabetes: ನಿಂಬೆ ರಸವನ್ನು ಇದರಲ್ಲಿ ಬೆರೆಸಿ ಕುಡಿಯಿರಿ ಸಾಕು.. ರಕ್ತದಲ್ಲಿ ಶುಗರ್ ಲೆವೆಲ್ ಹೆಚ್ಚಾಗೋದೇ ಇಲ್ಲ !
ರಕ್ತದಲ್ಲಿನ ಸಕ್ಕರೆಯ ಮಟ್ಟ ಹೆಚ್ಚಾದಾಗ, ಅತಿಯಾದ ಬಾಯಾರಿಕೆ, ಶುಷ್ಕತೆ, ಆಗಾಗ್ಗೆ ಮೂತ್ರವಿಸರ್ಜನೆ, ಆಯಾಸ, ದೌರ್ಬಲ್ಯ, ಮಂದ ದೃಷ್ಟಿ ಮತ್ತು ತುರಿಕೆ ಮುಂತಾದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಕಣ್ಣು ಮತ್ತು ಮೂತ್ರಪಿಂಡಗಳಿಗೆ ಹಾನಿಯಾಗುತ್ತದೆ.
ಸಕ್ಕರೆ ಮಟ್ಟವನ್ನು ನಿಯಂತ್ರಿಸುವಲ್ಲಿ ನಿಂಬೆ ರಸವು ತುಂಬಾ ಪ್ರಯೋಜನಕಾರಿಯಾಗಿದೆ. ಇದರಲ್ಲಿರುವ ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳು ಇನ್ಸುಲಿನ್ ಕಾರ್ಯವನ್ನು ಸುಧಾರಿಸುತ್ತದೆ.
ನಿಂಬೆ ರಸದ ಬಳಕೆಯಿಂದಲೂ ಬ್ಲಡ್ ಶುಗರ್ ನಿಯಂತ್ರಿಸಬಹುದು. ನಿಮ್ಮ ದಿನನೊತ್ಯದ ಅಡುಗೆಯಲ್ಲಿ ಒಂದೆರಡು ಹನಿ ನಿಂಬೆರಸ ಹಾಕಬಹುದು.
ನಿಂಬೆ ರಸವನ್ನು ಬೆಚ್ಚಗಿನ ನೀರಿನೊಂದಿಗೆ ಕುಡಿದರೆ ದೇಹಕ್ಕೆ ತುಂಬಾ ಪ್ರಯೋಜನಕಾರಿ. ಈ ನಿಂಬೆ ನೀರು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಇದರಿಂದ ಮಧುಮೇಹ ನಿಯಂತ್ರಿಸಬಹುದು.
ಇವುಗಳ ಜೊತೆಗೆ ನಿಮ್ಮ ಜೀವನಶೈಲಿಯಲ್ಲಿ ಹಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ಅದರಲ್ಲಿ ವ್ಯಾಯಾಮವೂ ಒಂದು. ಯೋಗ ಮತ್ತು ಜಿಮ್‌ನಂತಹ ನಿಯಮಿತ ಚಟುವಟಿಕೆಗಳನ್ನು ಮಾಡುವುದರಿಂದ ಮಧುಮೇಹ ನಿಯಂತ್ರಣದಲ್ಲಿಡಬಹುದು.
ಕೆಲವು ಮನೆಮದ್ದುಗಳಿಂದ ಬ್ಲಡ್ ಶುಗರ್ ನಿಯಂತ್ರಿಸಬಹುದು. ಮಧುಮೇಹ ಚಿಕಿತ್ಸೆಯೊಂದಿಗೆ ಮಾತ್ರ ಇದನ್ನು ಬಳಸಬೇಕು. ಯಾವುದೇ ಮನೆಮದ್ದನ್ನು ಅನುಸರಿಸುವ ಮೊದಲು ನಿಮ್ಮ ವೈದ್ಯರನ್ನು ಸಂಪರ್ಕಿಸಿ.