ಟೀಂ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಅಣ್ಣ ಯಾರು ಗೊತ್ತಾ? ಕೊಹ್ಲಿಯ 112 ಕೋಟಿ ಬಿಸಿನೆಸ್ ಸಾಮ್ರಾಜ್ಯಕ್ಕೆ ಈತನೇ ಒಡೆಯ
ಕ್ರಿಕೆಟ್ ಹೊರತಾಗಿ ವಿರಾಟ್ ವಿವಿಧ ರೀತಿಯ ವ್ಯವಹಾರಗಳಿಂದ ಪ್ರತಿ ವರ್ಷ ಕೋಟ್ಯಂತರ ರೂ. ಸಂಪಾದನೆ ಮಾಡುತ್ತಿದ್ದು, ಇಂದು ಅವರ ನಿವ್ವಳ ಮೌಲ್ಯ 1000 ಕೋಟಿ ರೂ.ಗೂ ಹೆಚ್ಚು. ಅಂದಹಾಗೆ ವಿರಾಟ್ ಕೊಹ್ಲಿ ಮಾತ್ರವಲ್ಲ, ಅವರ ಸಹೋದರ ವಿಕಾಸ್ ಕೊಹ್ಲಿ ಕೂಡ ಕೋಟ್ಯಾಧಿಪತಿ. ವಿರಾಟ್ ಅವರ ಹಿರಿಯ ಸಹೋದರ ವಿಕಾಸ್ ಯಾರು? ಏನು ಮಾಡುತ್ತಾರೆ? ಎಂಬುದನ್ನು ತಿಳಿಯೋಣ.
ವಿರಾಟ್ ಕೊಹ್ಲಿ ಮೂಲತಃ ದೆಹಲಿಯ ಪಶ್ಚಿಮ್ ವಿಹಾರ್’ನವರಾಗಿದ್ದು, ಈಗ ಅವರ ಕುಟುಂಬವು ಗುರುಗ್ರಾಂಗೆ ಸ್ಥಳಾಂತರಗೊಂಡಿದೆ. ವಿರಾಟ್’ಗೆ ವಿಕಾಸ್ ಕೊಹ್ಲಿ ಎಂಬ ಅಣ್ಣ ಮತ್ತು ಭಾವನಾ ಕೊಹ್ಲಿ ಎಂಬ ಅಕ್ಕ ಇದ್ದಾರೆ.
ವಿರಾಟ್ ಕೊಹ್ಲಿಯನ್ನು ಕ್ರಿಕೆಟಿಗನನ್ನಾಗಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ ವ್ಯಕ್ತಿ ವಿಕಾಸ್ ಕೊಹ್ಲಿ. ವಿರಾಟ್ ಬೆಳೆಯುತ್ತಿರುವಾಗ ಮತ್ತು ಕ್ರಿಕೆಟ್’ನತ್ತ ಅವರ ಆಕರ್ಷಣೆ ಹೆಚ್ಚುತ್ತಿರುವಾಗ, ಅವರ ಹಿರಿಯ ಸಹೋದರ ವಿಕಾಸ್ ಅವರನ್ನು ಕ್ರಿಕೆಟ್ ಅಕಾಡೆಮಿಗೆ ಸೇರಿಸಿದರು.
ವಿರಾಟ್ 'ಅಕಾಡೆಮಿ'ಯಿಂದ 'ಭಾರತೀಯ ಅಂಡರ್-19 ಕ್ರಿಕೆಟ್ ತಂಡ'ದಲ್ಲಿ ಸ್ಥಾನ ಪಡೆಯುವವರೆಗೆ ವಿಕಾಸ್ ತನ್ನ ಕಿರಿಯ ಸಹೋದರನೊಂದಿಗೆ ನೆರಳಿನಂತೆ ಇದ್ದಿದ್ದು ಸುಳ್ಳಲ್ಲ. ವಿರಾಟ್ ಕೊಹ್ಲಿ 2007 ರಲ್ಲಿ ತಮ್ಮ ನಾಯಕತ್ವದಲ್ಲಿ ಭಾರತಕ್ಕಾಗಿ ಅಂಡರ್-19 ವಿಶ್ವಕಪ್ ಗೆದ್ದಿದ್ದರು. ಇದರ ನಂತರ ಅವರು 2008 ರಲ್ಲಿ ಭಾರತ ತಂಡಕ್ಕೆ ಪಾದಾರ್ಪಣೆ ಮಾಡಿದರು.
ವಿರಾಟ್ ಮತ್ತು ಅವರ ಹಿರಿಯ ಸಹೋದರ ವಿಕಾಸ್ ನಡುವೆ ಉತ್ತಮ ಬಾಂಧವ್ಯವಿದೆ. ಚಿಕ್ಕ ವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡಿದ್ದರಿಂದ, ವಿಕಾಸ್ ವಿರಾಟ್ ಜೀವನದಲ್ಲಿ ತಂದೆಯ ಸ್ಥಾನವನ್ನು ತುಂಬಿದ್ದರು. 2008ರಿಂದ ವಿರಾಟ್ ಅವರ ಮ್ಯಾನೇಜರ್ ಆಗಿ ವಿಕಾಸ್ ಕೆಲಸ ಮಾಡುತ್ತಿದ್ದಾರೆ. ಇದಲ್ಲದೇ ವಿಕಾಸ್ ತನ್ನ ಕೋಟಿಗಟ್ಟಲೆ ವ್ಯವಹಾರವನ್ನೂ ನಡೆಸುತ್ತಿದ್ದಾರೆ.
ವಿಕಾಸ್ ಕೊಹ್ಲಿ ಅವರ ವಿರಾಟ್’ನ ಮ್ಯಾನೇಜರ್ ಮಾತ್ರವಲ್ಲ, ಯಶಸ್ವಿ ಉದ್ಯಮಿ ಕೂಡ. ಅವರು One8 ಬ್ರ್ಯಾಂಡ್’ನ ಮಾಲೀಕರಾಗಿದ್ದಾರೆ. ಇದು ರೆಸ್ಟೋರೆಂಟ್ ಆಗಿದ್ದು, ಇದರಲ್ಲಿ ವಿರಾಟ್ ಸಹ ಪಾಲುದಾರರಾಗಿದ್ದಾರೆ. ಅವರು ದೆಹಲಿಯ ಆರ್‌ಕೆ ಪುರಂ ಮತ್ತು ಏರೋಸಿಟಿಯಲ್ಲಿ One8 ಹೆಸರಿನ ಎರಡು ಐಷಾರಾಮಿ ರೆಸ್ಟೋರೆಂಟ್‌ಗಳನ್ನು ಹೊಂದಿದ್ದಾರೆ. ಇದಕ್ಕೆ ಸಂಬಂಧಿಸಿದ ಎಲ್ಲ ಕೆಲಸಗಳನ್ನೂ ವಿಕಾಸ್ ಕೊಹ್ಲಿಯೇ ನಿಭಾಯಿಸುತ್ತಾರೆ.
ವಿಕಾಸ್ ಕೊಹ್ಲಿ ಐಷಾರಾಮಿ ಜೀವನವನ್ನು ನಡೆಸುತ್ತಿದ್ದಾರೆ. ವಿಕಾಸ್’ಗೆ ಐಷಾರಾಮಿ ಕಾರುಗಳು ಮತ್ತು ದುಬಾರಿ ವಾಚ್‌ಗಳೆಂದರೆ ತುಂಬಾ ಇಷ್ಟ. ಆಗಾಗ್ಗೆ ತನ್ನ ದುಬಾರಿ ವಾಚ್’ಗಳನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಅಷ್ಟೇ ಅಲ್ಲದೆ, ಅವರ ಬಳಿ ಹಲವು ದುಬಾರಿ ಕಾರುಗಳೂ ಇವೆ. ಇವುಗಳಲ್ಲಿ ಪೋರ್ಷೆ ಪನಾಮೆರಾ ಟರ್ಬೊ ಕಾರು ಸೇರಿದ್ದು, ಇದರ ಬೆಲೆ 2.21 ಕೋಟಿ ರೂ. ಇನ್ನು ವಿರಾಟ್ ಮಾತ್ರವಲ್ಲ ವಿಕಾಸ್ ಕೂಡ ಫಿಟ್ನೆಸ್ ಫ್ರೀಕ್.