ಓದಿದ್ದು ಬಿಟೆಕ್… ಆಗಿದ್ದು ಕ್ರಿಕೆಟರ್! ಟೀಂ ಇಂಡಿಯಾದ ಟೆಸ್ಟ್ ಗೇಮ್ ಚೇಂಜರ್ ಈ ಸ್ಟಾರ್ ಬೌಲರ್: ಯಾರವರು ಅಂತ ಗೊತ್ತಾಯ್ತ?
ಟೀಂ ಇಂಡಿಯಾದ ಸ್ಪಿನ್ ಮಾಂತ್ರಿಕ ಆರ್ ಅಶ್ವಿನ್ ಸೆಪ್ಟೆಂಬರ್ 17, 1986 ರಂದು ತಮಿಳುನಾಡಿನಲ್ಲಿ ಜನಿಸಿದರು. ಬಲಗೈ ಬ್ಯಾಟ್ಸ್‌ಮನ್, ಬಲಗೈ ಆಫ್ ಬ್ರೇಕ್ ಬೌಲರ್ ಮತ್ತು ಭಾರತದ ವೇಗದ ಸ್ಪಿನ್ ಬೌಲರ್ ಆಗಿಯೂ ಆಡುತ್ತಿದ್ದಾರೆ
ಅಂದಹಾಗೆ ಅಶ್ವಿನ್ ಪದ್ಮಾ ಶೇಷಾದ್ರಿ ಬಾಲಭವನದಲ್ಲಿ ವ್ಯಾಸಂಗ ಮಾಡಿದರು. ಸೇಂಟ್ ಬೆಡೆಸ್ ಆಂಗ್ಲೋ ಇಂಡಿಯನ್ ಹೈಯರ್ ಸೆಕೆಂಡರಿ ಸ್ಕೂಲ್’ನಲ್ಲಿರುವ ಕ್ರಿಕೆಟ್ ಅಕಾಡೆಮಿಯಲ್ಲಿ ಬೌಲಿಂಗ್ ಕೌಶಲ್ಯವನ್ನು ಮತ್ತಷ್ಟು ಸುಧಾರಿಸಿಕೊಂಡರು. ಇನ್ನು ಎಸ್‌ಎಸ್‌ಎನ್ ಕಾಲೇಜ್ ಆಫ್ ಇಂಜಿನಿಯರಿಂಗ್’ನಲ್ಲಿ ಬಿಟೆಕ್ ಪದವಿ ಪಡೆದಿದ್ದಾರೆ ಅಶ್ವಿನ್.
ಇನ್ನು ರವಿಚಂದ್ರನ್ ತಮ್ಮ ಬಾಲ್ಯದ ಗೆಳತಿ ಪೃಥಿ ಅವರನ್ನು ವಿವಾಹವಾಗಿದ್ದು, ಇಬ್ಬರು ಪುತ್ರಿಯರನ್ನು ಹೊಂದಿದ್ದಾರೆ.
ಆರ್ ಅಶ್ವಿನ್ ಜೂನಿಯರ್-ಲೆವೆಲ್ (U-17) ವಿಭಾಗದಲ್ಲಿ ಆರಂಭಿಕ ಬ್ಯಾಟ್ಸ್‌ಮನ್ ಆಗಿ ಕ್ರಿಕೆಟ್ ಆಡಲು ಪ್ರಾರಂಭಿಸಿದರು. ಡಿಸೆಂಬರ್ 2006 ರಲ್ಲಿ, ತಮಿಳುನಾಡು ಕ್ರಿಕೆಟ್ ತಂಡ ಮತ್ತು ದಕ್ಷಿಣ ವಲಯಕ್ಕೆ ವಿಶೇಷ ವೇಗದ ಬೌಲರ್ ಆಗಿದ್ದರು.
2009 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK), ಮುಂಬೈ ಇಂಡಿಯನ್ಸ್ ವಿರುದ್ಧದ ಫೈನಲ್ ಪಂದ್ಯದ ವೇಳೆ ಅಶ್ವಿನ್ ಅವರನ್ನು ಆಯ್ಕೆ ಮಾಡಿದಾಗ ಅವರ ವೃತ್ತಿಜೀವನ ತಿರುವು ಪಡೆದುಕೊಂಡಿತು.
ಐಪಿಎಲ್ 2018 ರ ಆಟಗಾರರ ಹರಾಜಿನ ಸಮಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ರೂ 7.6 ಕೋಟಿಗೆ ತಮ್ಮ ತಂಡಕ್ಕೆ ಸೇರ್ಪಡೆಗೊಳಿಸಿ, ತಂಡದ ನಾಯಕತ್ವವನ್ನು ನೀಡಿತು.
ಅಶ್ವಿನ್ ಜೂನ್ 5, 2010 ರಂದು ಶ್ರೀಲಂಕಾ ವಿರುದ್ಧ ತಮ್ಮ ODI ಪಾದಾರ್ಪಣೆ ಮಾಡಿದರು. ಒಂದು ವಾರದ ನಂತರ ಜಿಂಬಾಬ್ವೆ ವಿರುದ್ಧ T20I ಚೊಚ್ಚಲ ಪಂದ್ಯವನ್ನು ಆಡಿದರು. ನವೆಂಬರ್ 2011 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಅವರ ಟೆಸ್ಟ್ ಚೊಚ್ಚಲ ಪಂದ್ಯವಾಗಿತ್ತು. ಇನ್ನು 2016 ರಲ್ಲಿ 50 T20I ವಿಕೆಟ್’ಗಳನ್ನು ಪಡೆದ ಮೊದಲ ಭಾರತೀಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಅಶ್ವಿನ್ ಪಾತ್ರರಾದರು.
ಐಸಿಸಿ ಆಟಗಾರರ ಶ್ರೇಯಾಂಕದಲ್ಲಿ ಭಾರತಕ್ಕೆ ಅತ್ಯುನ್ನತ ಟೆಸ್ಟ್ ಬೌಲರ್ ಮತ್ತು ಟೆಸ್ಟ್ ಕ್ರಿಕೆಟ್’ನಲ್ಲಿ ಅತ್ಯುನ್ನತ ಶ್ರೇಣಿಯ ಸ್ಪಿನ್ನರ್ ಆಗಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಒಂಬತ್ತು ಮ್ಯಾನ್ ಆಫ್ ದಿ ಸೀರೀಸ್ ಪ್ರಶಸ್ತಿಗಳನ್ನು ಗೆದ್ದಿರುವ ಅವರು, ಯಾವೊಬ್ಬ ಭಾರತೀಯನೂ ಮಾಡಿರದ ವಿಶೇಷ ಸಾಧನೆಯಾಗಿದೆ.
ಆರ್ ಅಶ್ವಿನ್ ಅವರು 2014 ರಲ್ಲಿ ಪ್ರತಿಷ್ಠಿತ ಅರ್ಜುನ ಪ್ರಶಸ್ತಿಯನ್ನು ಪಡೆದ 48 ನೇ ಕ್ರಿಕೆಟಿಗರಾಗಿದ್ದಾರೆ.