ಅತಿ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ಐಟಂ ಗರ್ಲ್ !ನಾಲ್ಕು ಮಕ್ಕಳ ತಂದೆಯೊಂದಿಗೆ ಎರಡನೇ ವಿವಾಹ !ಬಾಲಿವುಡ್ ಅನ್ನೇ ಆಳುತ್ತಿರುವ ನಟನ ತಾಯಿ

Fri, 22 Nov 2024-11:09 am,

ಒಂದು ಕಾಲದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ಐಟಂ ಗರ್ಲ್ ಆಗಿದ್ದ ನಟಿ ಇವರು. ವೈಯಕ್ತಿಕ ಜೀವನದಲ್ಲೂ ಸಾಕಷ್ಟು ನೋವು ಅನುಭವಿಸಿದ್ದಾರೆ. ಬಡತನ, ವಿಚ್ಛೇದನ ಮತ್ತು ಮಕ್ಕಳಿಲ್ಲದ ದುಃಖ ಇವರನ್ನು ಕಾಡುತ್ತಿತ್ತು. ಆದರೆ ಈಗ ತುಂಬಿದ ಸಂಸಾರ ಇವರದ್ದು.   

ನಾವಿಲ್ಲಿ ಹೇಳುತ್ತಿರುವುದು ಬಾಲಿವುಡ್ ನಟಿ ಹೆಲೆನ್ ಬಗ್ಗೆ. ಹೆಲೆನ್ ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್ ಮಲ ತಾಯಿ. ಸಲ್ಮಾನ್ ಖಾನ್ ತಂದೆ ಸಲೀಂ ಖಾನ್ ಅವರ ಎರಡನೇ ಪತ್ನಿ. 

ಹೆಲೆನ್ 1000 ಚಲನಚಿತ್ರಗಳಲ್ಲಿ ಕೆಲಸ ಮಾಡಿದ ದಾಖಲೆಯನ್ನು ಹೊಂದಿದ್ದಾರೆ.  ಅನೇಕ ಚಿತ್ರಗಳಲ್ಲಿ ಐಟಂ ನಂಬರ್‌ಗಳನ್ನು ಮಾಡಿದ್ದರೆ, ಕೆಲವು ಚಿತ್ರಗಳಲ್ಲಿ ಪೋಷಕ ಪಾತ್ರ, ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.   

ಹಗಲಿರುಳು ಸಾಕಷ್ಟು ನೋವು ಮತ್ತು ಕಠಿಣ ಪರಿಶ್ರಮದ ನಂತರ ತನ್ನ ವೃತ್ತಿಜೀವನವನ್ನು ನಿರ್ಮಿಸಿದ ನಟಿ ಹೆಲೆನ್.ಬರ್ಮಾದಲ್ಲಿ ಜನಿಸಿದ ಹೆಲೆನ್, ಚಿಕ್ಕ ವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡರು. 

ತನ್ನ ಮಕ್ಕಳನ್ನು ಬೆಳೆಸಲು ಹೆಲೆನ್ ತಾಯಿ ಕೊಲ್ಕತ್ತಾಕ್ಕೆ ಬರುತ್ತಾರೆ. ಅಲ್ಲಿ ಹಿನ್ನೆಲೆ ನೃತ್ಯಗಾರ್ತಿ ಕುಕು ಮೋರ್ ಪರಿಚಯವಾಗುತ್ತದೆ. ಅಲ್ಲಿಂದ ಹೆಲೆನ್ ಚಲನಚಿತ್ರಗಳಲ್ಲಿ ನೃತ್ಯ ಮಾಡುವ ಕೆಲಸ ಪಡೆಯುತ್ತಾರೆ. ಈ ದಿಕ್ಕಿನಲ್ಲಿ ಕೆಲಸ ಮಾಡಿದ ಹೆಲೆನ್ ನಂತರ ಬರೆದದ್ದು ದಾಖಲೆ. 

ಹೆಲೆನ್ ಅತಿ ಹೆಚ್ಚು ಸಂಭಾವನೆ ಪಡೆಯುವ ಐಟಂ ಗರ್ಲ್ ಆಗಿ ಗುರುತಿಸಿಕೊಂಡರು.  ಅವರಿಗಾಗಿ ಹಲವು ನಿರ್ದೇಶಕರು, ನಿರ್ಮಾಪಕರು ಸರತಿ ಸಾಲಿನಲ್ಲಿ ನಿಲ್ಲುವ ಕಾಲ ಬಂದಿತ್ತು.   

ನಂತರ ಬಾಲಿವುಡ್ ನಿರ್ಮಾಪಕ ಮತ್ತು ನಿರ್ದೇಶಕ ಪ್ರೇಮ್ ನಾರಾಯಣ್ ಅರೋರಾ ಅವರನ್ನು ವಿವಾಹವಾಗುತ್ತಾರೆ. ಇಬ್ಬರ ನಡುವೆ 27 ವರ್ಷಗಳ ಅಂತರವಿದ್ದು, ಈ ಮದುವೆ ಹೆಚ್ಚು ಕಾಲ ಉಳಿಯಲಿಲ್ಲ.   

ಇದಾದ ಬಳಿಕ ಬರಹಗಾರ ಸಲ್ಮಾನ್ ಸಲೀಂ ಖಾನ್ ಮತ್ತೆ ಹೆಲೆನ್ ಅವರನ್ನು ವಿವಾಹವಾಗುತ್ತಾರೆ. ಅದಾಗಲೇ ಸಲಿಂ ಖಾನ್ ಗೆ ನಾಲ್ಕು ಜನ ಮಕಳಿದ್ದರು. ಅವರೇ  ಸಲ್ಮಾನ್ ಖಾನ್, ಅರ್ಬಾಜ್ ಖಾನ್, ಸೊಹೈಲ್ ಖಾನ್ ಮತ್ತು ಅಲ್ವೀರ್ ಖಾನ್.   

ಹೆಲೆನ್ ಮತ್ತು ಸಲೀಂ ಖಾನ್ ಅವರಿಗೆ ಸ್ವಂತ ಮಕ್ಕಳಿಲ್ಲ. ಆದರೆ ಇಬ್ಬರೂ ಅರ್ಪಿತಾ ಖಾನ್ ಅವರನ್ನು ದತ್ತು ಪಡೆದರು. ಇದೀಗ ಸಲೀಂ ಖಾನ್ ಅವರ ಇಬ್ಬರೂ ಪತ್ನಿಯರು   ಇಡೀ ಕುಟುಂಬ ಒಟ್ಟಿಗೆ ವಾಸಿಸುತ್ತಿದ್ದಾರೆ. ಕುಟುಂಬದ ಎಲ್ಲಾ ಮಕ್ಕಳು ಹೆಲೆನ್ ಗೆ ತಾಯಿ ಸ್ಥಾನ ನೀಡಿದ್ದಾರೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link