ಚಂದ್ರನ ಅಂಗಳದಲ್ಲಿ ಜಾಗ ಖರೀದಿಸಿದ ಬಾಲಿವುಡ್’ನ ಸ್ಟಾರ್ ನಟ-ನಟಿಯರು ಯಾರು ಗೊತ್ತಾ?

Wed, 30 Aug 2023-10:50 am,

ನಾವಿಂದು ಚಂದ್ರಯಾನ-3 ಯಶಸ್ಸಿನ ಸಂಭ್ರಮದಲ್ಲಿದ್ದೇವೆ. ಈ ಸಂದರ್ಭದಲ್ಲಿ ಚಂದ್ರನ ಅಂಗಳದಲ್ಲಿ ಜಾಗ ಖರೀದಿಸಿದ ಬಾಲಿವುಡ್’ನ ಸ್ಟಾರ್ ನಟ-ನಟಿಯರ ಬಗ್ಗೆ ನಿಮಗೆ ಮಾಹಿತಿ ನೀಡಲಿದ್ದೇವೆ.

ಈ ಪಟ್ಟಿಯಲ್ಲಿರುವ ಮೊದಲ ಹೆಸರು ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಅವರದ್ದು. ಸುಶಾಂತ್ ಅವರ ವಿಜ್ಞಾನ ಮತ್ತು ಬಾಹ್ಯಾಕಾಶದ ಮೇಲಿನ ಪ್ರೀತಿ, ಚಂದ್ರನ ಅಂಗಳದಲ್ಲೂ ಜಾಗ ಖರೀದಿಸುವಂತೆ ಮಾಡಿದೆ. ಇವರು ಖರೀದಿಸಿದ ಪ್ರದೇಶವನ್ನು ಮೇರ್ ಮಸ್ಕೋವಿಯೆನ್ಸ್ ಅಥವಾ ಮಸ್ಕೋವಿ ಸಮುದ್ರ ಎಂದು ಕರೆಯಲಾಗುತ್ತದೆ.

ಇನ್ನು ಬಾಲಿವುಡ್ ಸೂಪರ್‌ ಸ್ಟಾರ್ ಶಾರುಖ್ ಖಾನ್ ಕೂಡ ತಮ್ಮ 52ನೇ ವರ್ಷದ ಹುಟ್ಟುಹಬ್ಬದಂದು ಚಂದ್ರನ ಮೇಲಿನ ಜಾಗವನ್ನು ಉಡುಗೊರೆಯಾಗಿ ಪಡೆದಿದ್ದಾರೆ. ಆಸ್ಟ್ರೇಲಿಯಾದ ಅಭಿಮಾನಿಯೊಬ್ಬರು ಚಂದ್ರನ ಮೇಲೆ ಜಾಗವನ್ನು ಖರೀದಿಸಿ ಅದನ್ನು ಉಡುಗೊರೆಯಾಗಿ ನೀಡಿದ್ದಾರೆ.

ಬಿಗ್ ಬಾಸ್ ಖ್ಯಾತಿಯ ಅಂಕಿತ್ ಗುಪ್ತಾ ಈ ಪಟ್ಟಿಯಲ್ಲಿದ್ದಾರೆ. ಧಾರಾವಾಹಿಗಳಲ್ಲಿ ನಟಿಸುವ ಮೂಲಕ ಹಿಂದಿ ವೀಕ್ಷಕರಿಗೆ ಚಿರಪರಿಚಿತರಾಗಿದ್ದಾರೆ ಅಂಕಿತ್. ಇವರು ಕೂಡ ಚಂದ್ರನ ಮೇಲೆ ಆಸ್ತಿ ಹೊಂದಿದ್ದು, ಇದನ್ನು ಅಭಿಮಾನಿಯೊಬ್ಬರು ಉಡುಗೊರೆಯಾಗಿ ನೀಡಿದ್ದಾರೆ ಎನ್ನಲಾಗಿದೆ.

ಕಿರುತೆರೆ ನಟಿ ಪ್ರಿಯಾಂಕಾ ಚಹರ್ ಚೌಧರಿ ಕೂಡ ಚಂದ್ರನ ಮೇಲೆ ಆಸ್ತಿಯನ್ನು ಹೊಂದಿದ್ದಾರೆ. ಇವರು ಬಿಗ್ ಬಾಸ್ ಹಿಂದಿಯ 16ನೇ ಸೀಸನ್ ಸ್ಪರ್ಧಿ. ಬಿಗ್ ಬಾಸ್​​ ಮನೆಯಿಂದ ಹೊರಬಂದ ಬಳಿಕ ಅವರಿಗೆ ಅಭಿಮಾನಿಯೊಬ್ಬರು ಚಂದ್ರನಲ್ಲಿ ಜಾಗ ಖರೀದಿಸಿ ಇವರಿಗೆ ಗಿಫ್ಟ್ ಆಗಿ ನೀಡಿದ್ದಾರಂತೆ.

ನಿಮಗೂ ಚಂದ್ರನ ಮೇಲೆ ಭೂಮಿಯನ್ನು ಖರೀದಿಸಬೇಕೆಂದಿದ್ದರೆ ದಿ ಲೂನಾರ್ ರಿಜಿಸ್ಟ್ರಿ ಎಂಬ ವೆಬ್‌ಸೈಟ್ ಮೂಲಕ ಅಪ್ಲೈ ಮಾಡಬಹುದು. ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ, ಭೂಮಿಯನ್ನು ಖರೀದಿಸಲು ಬಯಸುವ ಪ್ರದೇಶವನ್ನು ಆಯ್ಕೆ ಮಾಡಬಹುದು.

ನಿಮ್ಮ ಆಯ್ಕೆಯ ಪ್ರದೇಶವನ್ನು ನೀವು ಆಯ್ಕೆ ಮಾಡಿದ ನಂತರ, ನೀವು ದಾಖಲೆಗಳನ್ನು ಒದಗಿಸಿ, ಬಳಿಕ ಅದನ್ನು ಖರೀದಿ ಮಾಡಬಹುದು. ಚಂದ್ರನ ಮೇಲೆ ಒಂದು ಎಕರೆ ಭೂಮಿಗೆ USD 42.5 ವೆಚ್ಚವಾಗುತ್ತದೆ. ಇದು ಭಾರತೀಯ ಕರೆನ್ಸಿಯಲ್ಲಿ ಸುಮಾರು ರೂ 3430 ವರೆಗೆ ಆಗುತ್ತದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link