ವಿಶ್ವಕ್ರಿಕೆಟ್’ನಲ್ಲಿ ಅತೀ ಹೆಚ್ಚು ಕ್ಯಾಚ್ ಪಡೆದವರು ಇವರೇ.. ಟಾಪ್ 5ರಲ್ಲಿ ಭಾರತದ ಈ ಒಬ್ಬನಿಗೆ ಮಾತ್ರ ಸ್ಥಾನ
ಅಂತರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಪ್ರತೀ ಪಂದ್ಯದಲ್ಲೂ ಒಂದೊಂದು ದಾಖಲೆಗಳು ನಿರ್ಮಾಣವಾಗಿರುವದನ್ನು ಕಾಣಬಹುದು. ದಾಖಲೆಗಳ ಜೊತೆಗೆ ಅದೆಷ್ಟೋ ಕ್ರಿಕೆಟಿಗರು ತಮ್ಮ ಅಮೋಘ ಆಟದಿಂದಾಗಿ ಇತಿಹಾಸ ಪುಟದಲ್ಲಿ ಇನ್ನೂ ಅಚ್ಚಳಿಯದೆ ಉಳಿದಿದ್ದಾರೆ. ಇಂದು ನಾವು ಅಂತಹದ್ದೇ ಒಂದು ದಾಖಲೆಯ ಬಗ್ಗೆ ಮಾಹಿತಿ ನೀಡಲಿದ್ದೇವೆ.
ವಿಶ್ವ ಕ್ರಿಕೆಟ್ ಇತಿಹಾಸದಲ್ಲಿ ಅತೀ ಹೆಚ್ಚು ಕ್ಯಾಚ್ ಪಡೆದವರ ಬಗ್ಗೆ ನಾವಿಂದು ಮಾಹಿತಿ ನೀಡಲಿದ್ದೇವೆ. ಟಾಪ್ 5 ಪಟ್ಟಿಯಲ್ಲಿ ಭಾರತ ಓರ್ವ ದಿಗ್ಗಜನಿಗೆ ಮಾತ್ರ ಸ್ಥಾನ ಸಿಕ್ಕಿದೆ. ಯಾರೆಂದು ಮುಂದೆ ತಿಳಿಯೋಣ.
ಶ್ರೀಲಂಕಾ ದಿಗ್ಗಜ 1997ರಿಂದ 2015ರವರೆಗೆ ಕ್ರಿಕೆಟ್ ಲೋಕದಲ್ಲಿ ಸಂಚಲನ ಮೂಡಿಸಿದ್ದರು. ಅವರು ಆಡಿರುವ 652 ಪಂದ್ಯಗಳ 768 ಇನ್ನಿಂಗ್ಸ್’ಗಳಲ್ಲಿ ಒಟ್ಟು 440 ಕ್ಯಾಚ್ ಹಿಡಿದಿದ್ದಾರೆ. ಈ ಮೂಲಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ರಿಕಿ ಪಾಂಟಿಂಗ್ 1995 ರಿಂದ 2012ರ ವರೆಗೆ ಕ್ರಿಕೆಟ್ ಲೋಕವನ್ನು ಆಳಿದ್ದರು, ಈ ಸಂದರ್ಭದಲ್ಲಿ ಆಡಿದ 560 ಪಂದ್ಯಗಳ 717 ಇನ್ನಿಂಗ್ಸ್ ಗಳಲ್ಲಿ 364 ಕ್ಯಾಚ್ ಹಿಡಿದಿದ್ದಾರೆ. ಈ ಮೂಲಕ ಎರಡನೇ ಸ್ಥಾನದಲ್ಲಿದ್ದಾರೆ.
ನ್ಯೂಜಿಲೆಂಟ್ ಆಟಗಾರ ರೋಸ್ ಟೇಲರ್ 2006 ರಿಂದ 2022ರವೆಗೆ ಆಟವಾಡಿದ್ದು, ಇವರು ಆಡಿದ 450ಗಳ 546 ಇನ್ನಿಂಗ್ಸ್ ನಲ್ಲಿ 351 ಕ್ಯಾಚ್ ಪಡೆದಿದ್ದಾರೆ.
ದಕ್ಷಿಣ ಆಫ್ರಿಕಾ ತಂಡದ ದಾಖಲೆ ವೀರ ಜಾಕ್ವಿಸ್, 1995 ರಿಂದ 2014ರವರೆಗೆ ತಂಡದಲ್ಲಿ ಆಡಿದ್ದರು. ಇವರು ಆಡಿರುವ 519 ಪಂದ್ಯಗಳ 664 ಇನ್ನಿಂಗ್ಸ್ ನಲ್ಲಿ 338 ಕ್ಯಾಚ್ ಪಡೆದಿದ್ದಾರೆ.
ಟೀಂ ಇಂಡಿಯಾದ ಮಾಜಿ ನಾಯಕ, ಈಗಿನ ಮುಖ್ಯ ಕೋಚ್ ರಾಹುಲ್ ದ್ರಾವಿಡ್ 1996 ರಿಂದ 2012ರ ವರೆಗೆ ಭಾರತಕ್ಕಾಗಿ ಆಟವಾಡಿದ್ದರು. ಆಡಿದ 509 ಪಂದ್ಯಗಳ 571 ಇನ್ನಿಂಗ್ಸ್ ನಲ್ಲಿ 334 ಕ್ಯಾಚ್ ಪಡೆದಿದ್ದರು.