ODI ಏಷ್ಯಾಕಪ್’ನಲ್ಲಿ ಅತೀ ಹೆಚ್ಚು ರನ್ ಗಳಿಸಿದ ಆಟಗಾರರು ಯಾರು? ಭಾರತದ ದಿಗ್ಗಜರೂ ಇದ್ದಾರೆ…
ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ರಚನೆಯಾದ ಒಂದು ವರ್ಷದ ನಂತರ ಅಂದರೆ 1984 ರಲ್ಲಿ ಮೊದಲ ಬಾರಿ ಈ ಪಂದ್ಯಾವಳಿಯನ್ನು ಆಯೋಜನೆ ಮಾಡಲಾಯಿತು. ಮೊದಲಿಗೆ ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಸಲು ನಿರ್ಧರಿಸಲಾಗಿತ್ತು. ನಂತರ, ಇದನ್ನು ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ನಡೆಸಲಾಯಿತು. ಈಗ ಇದು ODI ಮತ್ತು T20I ಸ್ವರೂಪಗಳಾಗಿ ಪ್ರತಿ 2 ವರ್ಷಗಳಿಗೊಮ್ಮೆ ನಡೆಯುತ್ತದೆ.
ಈ ಕಾಂಟಿನೆಂಟಲ್ ಚಾಂಪಿಯನ್‌ಶಿಪ್‌ನಲ್ಲಿ ಏಷ್ಯಾದ ದೇಶಗಳು ಮಾತ್ರ ಭಾಗವಹಿಸುತ್ತವೆ..ಇಂದು ನಾವು ಏಕದಿನ ಏಷ್ಯಾಕಪ್ ಮಾದರಿಯಲ್ಲಿ ಅತೀ ಹೆಚ್ಚು ರನ್ ಗಳಿಸಿದ ಆಟಗಾರರ ಬಗ್ಗೆ ಮಾಹಿತಿಯನ್ನು ನೀಡಲಿದ್ದೇವೆ.
ಈ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಶ್ರೀಲಂಕಾದ ದಿಗ್ಗಜ ಸನತ್ ಜಯಸೂರ್ಯ ಪಡೆದಿಕೊಂಡಿದ್ದಾರೆ. 1990-2008ರವರೆಗೆ ಆಡಿದ 25 ಪಂದ್ಯಗಳ 24 ಇನ್ನಿಂಗ್ಸ್ ನಲ್ಲಿ 1220 ರನ್ ಕಲೆ ಹಾಕಿದ್ದಾರೆ. ಅದರಲ್ಲಿ ಅತ್ಯುತ್ತಮ ಸ್ಕೋರ್ 130 ರನ್ ಆಗಿದೆ.
ಎರಡನೇ ಸ್ಥಾನದಲ್ಲಿಯೂ ಶ್ರೀಲಂಕಾದ ಮತ್ತೊಬ್ಬ ದಿಗ್ಗಜ ಕುಮಾರ್ ಸಂಗಕ್ಕಾರ ಇದ್ದಾರೆ. ಇವರು 2004-2014ರವರೆಗೆ ಆಡಿದ 24 ಪಂದ್ಯಗಳ 23 ಇನ್ನಿಂಗ್ಸ್ನಲ್ಲಿ 1075 ರನ್ ಗಳಿಸಿದ್ದಾರೆ. ಅತ್ಯುತ್ತಮ ಸ್ಕೋರ್ 121 ಆಗಿದೆ.
ಮೂರನೇ ಸ್ಥಾನದಲ್ಲಿ ಟೀಂ ಇಂಡಿಯಾದ ದಿಗ್ಗಜ, ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಇದ್ದಾರೆ. ಇವರು 1990-2012ರವರೆಗೆ ಆಡಿದ 23 ಪಂದ್ಯಗಳ 21 ಇನ್ನಿಂಗ್ಸ್ ನಲ್ಲಿ 971 ರನ್ ಗಳಿಸಿದ್ದಾರೆ. ಅತ್ಯುತ್ತಮ 114 ರನ್ ಆಗಿದೆ.
ಪಟ್ಟಿಯ ನಾಲ್ಕನೇ ಸ್ಥಾನದಲ್ಲಿ ಪಾಕಿಸ್ತಾನದ ಕ್ರಿಕೆಟಿಗ ಶೋಯೆಬ್ ಮಲಿಕ್ ಇದ್ದಾರೆ. 2000-2018ರವರೆಗೆ ಆಡಿದ 17 ಪಂದ್ಯಗಳ ಪೈಕಿ 15 ಇನ್ನಿಂಗ್ಸ್ ಆಡಿದ ಅವರು 786 ರನ್ ಗಳಿಸಿದ್ದಾರೆ. ಅದರಲ್ಲಿ 143 ಹೈ ಸ್ಕೋರ್ ಆಗಿದೆ.
ಟಾಪ್ 5 ಪಟ್ಟಿಯಲ್ಲಿ 5 ನೇ ಸ್ಥಾನವನ್ನು ಭಾರತದ ನಾಯಕ ರೋಹಿತ್ ಶರ್ಮಾ ಪಡೆದುಕೊಂಡಿದ್ದಾರೆ. 2008-2018ರವರೆಗೆ 22 ಪಂದ್ಯಗಳ 21 ಇನ್ನಿಂಗ್ಸ್ ನಲ್ಲಿ 745 ರನ್ ಕಲೆ ಹಾಕಿದ್ದಾರೆ. ಇನ್ನು ಅಜೇಯ 111 ರನ್ ಅವರ ಬೆಸ್ಟ್ ಸ್ಕೋರ್ ಆಗಿದೆ.