ಏಕದಿನ ಸರಣಿಯ ಎಲ್ಲಾ 3 ಪಂದ್ಯಗಳಲ್ಲಿ ಅರ್ಧಶತಕ ಸಿಡಿಸಿದ ಕ್ರಿಕೆಟಿಗ ಯಾರು? ಕೊಹ್ಲಿ, ರೋಹಿತ್ ಅಲ್ಲವೇ ಅಲ್ಲ…
ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಯುವ ಕೀಪರ್-ಬ್ಯಾಟರ್ ಇಶಾನ್ ಕಿಶನ್ ಸತತ ಅರ್ಧಶತಕವನ್ನು ಸಿಡಿಸಿದ ದಾಖಲೆ ಪುಟ ಸೇರಿದ್ದಾರೆ. ಕಿಶನ್ ಸರಣಿಯ ಎಲ್ಲಾ ಮೂರು ODI ಪಂದ್ಯಗಳಲ್ಲಿ ಅರ್ಧಶತಕ ಗಳಿಸಿದ ಆಟಗಾರರ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ.
ಈ ಪಟ್ಟಿಯಲ್ಲಿ ಕ್ರಿಸ್ ಶ್ರೀಕಾಂತ್ ಮೊದಲಿಗರಾಗಿದ್ದಾರೆ. 1982 ರಲ್ಲಿ ಶ್ರೀಲಂಕಾ ವಿರುದ್ಧ ಈ ಸಾಧನೆ ಮಾಡಿದ್ದಾರೆ.
ಎರಡನೇ ಸ್ಥಾನದಲ್ಲಿ ವೆಂಗ್‌ಸರ್ಕರ್ ಇದ್ದು, 1985 ರಲ್ಲಿ ವಿಂಡೀಸ್ ವಿರುದ್ಧ ಈ ದಾಖಲೆ ಬರೆದಿದ್ದಾರೆ.
ಮೊಹಮ್ಮದ್ ಅಜರುದ್ದೀನ್ 1993 ರಲ್ಲಿ ಶ್ರೀಲಂಕಾ ಈ ಸಾಧನೆಯನ್ನು ಮಾಡಿದ್ದಾರೆ
ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನವನ್ನು ಎಂಎಸ್ ಧೋನಿ ಪಡೆದುಕೊಂಡಿದ್ದಾರೆ. 2019 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಈ ಸಾಧನೆ ಮಾಡಿದರು.
ಇನ್ನು 2020 ರಲ್ಲಿ ದ್ವಿಪಕ್ಷೀಯ ODI ಪಂದ್ಯಗಳ ಎಲ್ಲಾ ಮೂರು ಪಂದ್ಯಗಳಲ್ಲಿ ಮೂರು ಅರ್ಧಶತಕಗಳನ್ನು ಸಿಡಿಸಿದ ಕೊನೆಯ ಬ್ಯಾಟರ್ ಆಗಿ ಶ್ರೇಯಸ್ ಅಯ್ಯರ್ ಇದ್ದರು.
ಇದೀಗ ದ್ವಿಪಕ್ಷೀಯ ODI ಸರಣಿಯ ಎಲ್ಲಾ ಮೂರು ಪಂದ್ಯಗಳಲ್ಲಿ ಅರ್ಧಶತಕ ಸಿಡಿಸಿದ ಆರನೇ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಕಿಶನ್ ಪಾತ್ರರಾಗಿದ್ದಾರೆ.